ಪ್ರಧಾನ ಮಂತ್ರಿಯವರ ಕಛೇರಿ 
                
                
                
                
                
                    
                    
                        ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಆಚರಿಸಲು ಮತ್ತು ಪೋಷಿಸಲು ಇಂಡಿಯಾ ಆರ್ಟ್, ಆರ್ಕಿಟೆಕ್ಚರ್ ಮತ್ತು ಡಿಸೈನ್ ಬಿನಾಲೆಯಂತಹ ವೇದಿಕೆಗಳು ಅತ್ಯಗತ್ಯ: ಪ್ರಧಾನಿ
                    
                    
                        
                    
                
                
                    Posted On:
                08 DEC 2023 9:38PM by PIB Bengaluru
                
                
                
                
                
                
                ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯ ಕೆಂಪು ಕೋಟೆಯಲ್ಲಿರುವ ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸ ಬಿನಾಲೆಯ ಇಣುಕುನೋಟಗಳನ್ನು ಹಂಚಿಕೊಂಡಿದ್ದಾರೆ.
ಈ ಸಂಬಂಧ ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ:
"ಇಂದು ಇಂಡಿಯಾ ಆರ್ಟ್, ಆರ್ಕಿಟೆಕ್ಚರ್ ಮತ್ತು ಡಿಸೈನ್ ಬಿನಾಲೆಗೆ ಭೇಟಿ ನೀಡಿರುವುದಕ್ಕೆ ರೋಮಾಂಚನವಾಗಿದೆ. ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಆಚರಿಸಲು ಮತ್ತು ಪೋಷಿಸಲು ಇಂತಹ ವೇದಿಕೆಗಳು ಅತ್ಯಗತ್ಯ. ಸೃಜನಶೀಲ ಮನಸ್ಸುಗಳು ಒಗ್ಗೂಡಲು, ಪ್ರೇರೇಪಿಸಲು ಮತ್ತು ಭಾರತೀಯ ಸಂಪ್ರದಾಯಗಳ ರೋಮಾಂಚಕ ಪರಂಪರೆಯನ್ನು ಜೀವಂತವಾಗಿಡಲು ಅವು ಒಂದು ಅನನ್ಯ ವೇದಿಕೆಯನ್ನು ಒದಗಿಸುತ್ತವೆ,’’ಎಂದು ಹೇಳಿದ್ದಾರೆ
***
                
                
                
                
                
                (Release ID: 1984857)
                Visitor Counter : 107
                
                
                
                    
                
                
                    
                
                Read this release in: 
                
                        
                        
                            English 
                    
                        ,
                    
                        
                        
                            Urdu 
                    
                        ,
                    
                        
                        
                            हिन्दी 
                    
                        ,
                    
                        
                        
                            Marathi 
                    
                        ,
                    
                        
                        
                            Bengali 
                    
                        ,
                    
                        
                        
                            Assamese 
                    
                        ,
                    
                        
                        
                            Manipuri 
                    
                        ,
                    
                        
                        
                            Punjabi 
                    
                        ,
                    
                        
                        
                            Gujarati 
                    
                        ,
                    
                        
                        
                            Odia 
                    
                        ,
                    
                        
                        
                            Tamil 
                    
                        ,
                    
                        
                        
                            Telugu 
                    
                        ,
                    
                        
                        
                            Malayalam