ಪ್ರಧಾನ ಮಂತ್ರಿಯವರ ಕಛೇರಿ
ನೌಕಾ ದಿನದ ಸಂದರ್ಭದಲ್ಲಿ ಶುಭ ಕೋರಿದ ಪ್ರಧಾನಮಂತ್ರಿಯವರು
प्रविष्टि तिथि:
04 DEC 2023 12:03PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನೌಕಾ ದಿನದ ಸಂದರ್ಭದಲ್ಲಿ ಶುಭ ಹಾರೈಸಿದ್ದಾರೆ.
ಪ್ರಧಾನಮಂತ್ರಿಯವರು X ನಲ್ಲಿ ಪೋಸ್ಟ್ ಮಾಡಿ:
"ನೌಕಾಪಡೆಯ ದಿನದಂದು, ಭಾರತೀಯ ನೌಕಾಪಡೆಯ ಎಲ್ಲಾ ಸಿಬ್ಬಂದಿಗಳಿಗೆ ಶುಭಾಶಯಗಳನ್ನು ತಿಳಿಸುತ್ತೇನೆ. ನಮ್ಮ ಸಮುದ್ರ ಮಾರ್ಗವನ್ನು ರಕ್ಷಿಸುವ ಅವರ ಬದ್ಧತೆಯು ಅವರ ಕರ್ತವ್ಯದ ಬಗ್ಗೆ ಅವರ ಅಚಲ ಸಮರ್ಪಣೆಯನ್ನು ಸೂಚಿಸುತ್ತದೆ. ಇದು ನಮ್ಮ ದೇಶದ ಮೇಲಿನ ಪ್ರೀತಿಗೆ ಸಾಕ್ಷಿಯಾಗಿದೆ. ಎಲ್ಲಾ ಸಂದರ್ಭದಲ್ಲೂ, ಅವರ ಉತ್ಸಾಹ ಮತ್ತು ಸಂಕಲ್ಪದ ಅಚಲತೆಯು ಗೋಚರಿಸುತ್ತದೆ. ಅವರ ಸೇವೆ ಮತ್ತು ತ್ಯಾಗಗಳಿಗೆ ನಾವು ಎಂದೆಂದಿಗೂ ಕೃತಜ್ಞರಾಗಿದ್ದೇವೆ."
"ಇಂದು ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ ನಡೆಯಲಿರುವ ನೌಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ಅಲ್ಲಿಗೆ ತೆರಳಲಿದ್ದೇನೆ. ಈ ಸ್ಥಳವು ಛತ್ರಪತಿ ಶಿವಾಜಿ ಮಹಾರಾಜ್ ಅವರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದು, ಬಲವಾದ ನೌಕಾಪಡೆಯನ್ನು ನಿರ್ಮಿಸುವ ಅವರ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ" ಎಂದು ಉಲ್ಲೇಖಿಸಿದ್ದಾರೆ.
****
(रिलीज़ आईडी: 1982342)
आगंतुक पटल : 136
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam