ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆ


203 ಗ್ರಾಮ ಪಂಚಾಯಿತಿಗಳಲ್ಲಿ 1232 ಆರೋಗ್ಯ ಶಿಬಿರಗಳನ್ನು ನಡೆಸಲಾಗಿದ್ದು, ಒಟ್ಟು 1,66,000ಕ್ಕೂ ಹೆಚ್ಚು ಜನರು ಇದರ ಪ್ರಯೋಜನ ಪಡೆದಿದ್ದಾರೆ ಎಂದು ವರದಿಯಾಗಿದೆ.

ಶಿಬಿರಗಳಲ್ಲಿ 33,000ಕ್ಕೂ ಹೆಚ್ಚು ಆಯುಷ್ಮಾನ್ ಕಾರ್ಡ್‌ಗಳನ್ನು ಸೃಜಿಸಲಾಗಿದೆ, 21,000ಕ್ಕೂ ಹೆಚ್ಚಿನ ಕಾರ್ಡ್‌ಗಳನ್ನು ವಿತರಿಸಲಾಗಿದೆ.

41,000ಕ್ಕೂ ಹೆಚ್ಚು ಜನರು ಟಿಬಿ ಪರೀಕ್ಷೆಗೆ ಒಳಗಾಗಿದ್ದಾರೆ, 4,000ಕ್ಕೂ ಹೆಚ್ಚು ಜನರು ಹೆಚ್ಚಿನ ಸಾರ್ವಜನಿಕ ಆರೋಗ್ಯ ಸೌಲಭ್ಯಗಳನ್ನು ಉಲ್ಲೇಖಿಸಿದ್ದಾರೆ

24,000ಕ್ಕೂ ಹೆಚ್ಚು ಜನರಿಗೆ ಎಸ್‌ಸಿಡಿ ಪರೀಕ್ಷೆ ನಡೆಸಲಾಗಿದೆ, 1,100 ಜನರಿಗೆ ಉನ್ನತ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗೆ ಶಿಫಾರಸು ಮಾಡಲಾಗಿದೆ

ಸುಮಾರು 1,35,000 ಜನರಿಗೆ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ನಡೆಸಲಾಗಿದೆ, 10,000ಕ್ಕಿಂತ ಹೆಚ್ಚಿನ ಜನರನ್ನು ಉನ್ನತ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗೆ ಶಿಫಾರಸು ಮಾಡಲಾಗಿದೆ

Posted On: 22 NOV 2023 1:51PM by PIB Bengaluru

ರಾಷ್ಟ್ರಾದ್ಯಂತ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳನ್ನು ಒದಗಿಸುವ ಗುರಿ ಹೊಂದಿರುವ ಅದ್ಭುತ ಉಪಕ್ರಮವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 15ರಂದು ಜಾರ್ಖಂಡ್‌ನ ಕುಂತಿಯಿಂದ ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದರು. ತುರ್ತು ಸೇವೆಗಳನ್ನು ಸುಗಮಗೊಳಿಸಲು, ಅಂಚೆ,  ಆರೋಗ್ಯ ಮತ್ತು ಇತರೆ ಇಲಾಖೆಗಳಿಂದ ವಿವಿಧ ಶಿಬಿರಗಳನ್ನು ನಡೆಸಲಾಗುತ್ತಿದೆ. ಸರ್ಕಾರದ ಪ್ರಮುಖ ಯೋಜನೆಗಳ ಬಗ್ಗೆ ನಾಗರಿಕರಿಗೆ ಮಾಹಿತಿ ಒದಗಿಸಲು ಮತ್ತು ಸಬಲೀಕರಣಗೊಳಿಸಲು ವಿನ್ಯಾಸಗೊಳಿಸಲಾದ ಈ ಯಾತ್ರೆಯು, ಜನಜಾಗೃತಿ ಮೂಡಿಸುವ ಮತ್ತು ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನಗಳನ್ನು ನೇರವಾಗಿ ಜನರಿಗೆ ತಲುಪಿಸುವ ಗುರಿ ಹೊಂದಿದೆ.

ಜನ್ ಜಾತೀಯ ಗೌರವ್ ದಿವಸ್ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸರ್ಕಾರದ ಯೋಜನೆಗಳ ಸಂದೇಶಗಳನ್ನು ಹೊಂದಿರುವ ವಿಶೇಷವಾಗಿ ವಿನ್ಯಾಸಗೊಳಿಸಲಾದ ಐಇಸಿ ವ್ಯಾನ್‌ಗಳಿಗೆ ಧ್ವಜಾರೋಹಣ ನೆರವೇರಿಸಿದರು. ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯಡಿ, ಸ್ಥಳದಲ್ಲೇ ಸೇವೆಗಳನ್ನು ಒದಗಿಸುವ ಭಾಗವಾಗಿ, ಗ್ರಾಮ ಪಂಚಾಯತ್‌ಗಳಲ್ಲಿ ಐಇಸಿ ವ್ಯಾನ್ ನಿಲುಗಡೆ ಸ್ಥಳಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.

2023 ನವೆಂಬರ್  21ಕ್ಕೆ ಅನ್ವಯವಾಗುವಂತೆ ಮೊದಲ ವಾರದಲ್ಲಿ, 203 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ 1,232 ಆರೋಗ್ಯ ಶಿಬಿರಗಳನ್ನು ನಡೆಸಲಾಗಿದ್ದು, ಒಟ್ಟು 1,66,000ಕ್ಕೂ ಹೆಚ್ಚು ಜನರು ಇದರ ಪ್ರಯೋಜನೆ ಪಡೆದಿದ್ದಾರೆ ಎಂದು ವರದಿಯಾಗಿದೆ.

 

https://static.pib.gov.in/WriteReadData/userfiles/image/image00268L7.jpg

ಲೋವರ್ ಸುಬನ್ಸಿರಿ, ಅರುಣಾಚಲ ಪ್ರದೇಶ

https://static.pib.gov.in/WriteReadData/userfiles/image/image003NWP6.jpg

ದಂಗ್, ಗುಜರಾತ್

https://static.pib.gov.in/WriteReadData/userfiles/image/image004UXYH.jpg

ರಜೌರಿ, ಜಮ್ಮು-ಕಾಶ್ಮೀರ

https://static.pib.gov.in/WriteReadData/userfiles/image/image005GCO7.jpg

ಉತ್ತರ ಮತ್ತು ಮಧ್ಯ(ಕೇಂದ್ರ) ಅಂಡಮಾನ್

https://static.pib.gov.in/WriteReadData/userfiles/image/image006E0ID.jpg

ಕೋರಾಪಟ್, ಒಡಿಶಾ

https://static.pib.gov.in/WriteReadData/userfiles/image/image007BYP3.jpg

ವಂತದಪಲ್ಲಿ ಎಎಸ್ಆರ್, ಆಂಧ್ರ ಪ್ರದೇಶ

 

ಆರೋಗ್ಯ ಶಿಬಿರಗಳಲ್ಲಿ ಈ ಕೆಳಗಿನ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ:

1. ಆಯುಷ್ಮಾನ್ ಭಾರತ್ - ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ-ಪಿಎಂಜೆಎವೈ): ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಮುಖ ವಿಕ್ಷಿತ್ ಭಾರತ್ ಸಂಕಲ್ಪ್ ಯಾತ್ರೆ ಯೋಜನೆಯಡಿ, ಆಯುಷ್ಮಾನ್ ಅಪ್ಲಿಕೇಶನ್ ಬಳಸಿಕೊಂಡು ಆಯುಷ್ಮಾನ್ ಕಾರ್ಡ್‌ಗಳನ್ನು ಸೃಜಿಸಿ, ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಮೊದಲ ವಾರದ ಅಂತ್ಯದ ವೇಳೆಗೆ, ಶಿಬಿರಗಳಲ್ಲಿ 33,000 ಕ್ಕೂ ಹೆಚ್ಚು ಆಯುಷ್ಮಾನ್ ಕಾರ್ಡ್‌ಗಳನ್ನು ರಚಿಸಲಾಗಿದೆ ಮತ್ತು 21,000 ಕ್ಕೂ ಹೆಚ್ಚು ಭೌತಿಕ ಕಾರ್ಡ್‌ಗಳನ್ನು ವಿತರಿಸಲಾಗಿದೆ.

2. ಕ್ಷಯರೋಗ (ಟಿಬಿ): ಕ್ಷಯರೋಗದ ರೋಗಿಗಳ ಸ್ಕ್ರೀನಿಂಗ್ ರೋಗಲಕ್ಷಣಗಳು, ಕಫ ಪರೀಕ್ಷೆ ಮತ್ತು ಲಭ್ಯವಿರುವಲ್ಲೆಲ್ಲಾ NAAT ಯಂತ್ರಗಳನ್ನು ಬಳಸುವ ಮೂಲಕ ನಡೆಸಲಾಗುತ್ತಿದೆ. ಟಿಬಿ ಇರುವ ಶಂಕಿತ ಪ್ರಕರಣಗಳನ್ನು ಉನ್ನತ ಸೌಲಭ್ಯಗಳಿಗೆ ಉಲ್ಲೇಖಿಸಲಾಗುತ್ತದೆ. ಈ ತಿಂಗಳ ಮೊದಲ ವಾರದ ಅಂತ್ಯದ ವೇಳೆಗೆ, 41,000ಕ್ಕೂ ಹೆಚ್ಚಿನ ಜನರನ್ನು ಪರೀಕ್ಷಿಸಲಾಗಿದೆ. ಅದರಲ್ಲಿ 4,000ಕ್ಕೂ ಹೆಚ್ಚಿನ ಜನರನ್ನು ಉನ್ನತ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗೆ ಶಿಫಾರಸು ಮಾಡಲಾಗಿದೆ.

ಪ್ರಧಾನ ಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನ (ಪಿಎಂಟಿಬಿಎಂಎ) ಅಡಿ, ಟಿಬಿಯಿಂದ ಬಳಲುತ್ತಿರುವ ರೋಗಿಗಳಿಗೆ ನಿಕ್ಷಯ್ ಮಿತ್ರಸ್‌ನಿಂದ ನೆರವು ಪಡೆಯಲು ಅನುಮತಿ ಪಡೆಯಲಾಗಿದೆ. ನಿಕ್ಷಯ್ ಮಿತ್ರರಾಗಲು ಸಿದ್ಧರಿರುವ ರೋಗಿಗಳಿಗೆ ಸ್ಥಳದಲ್ಲೇ ನೋಂದಣಿ ಒದಗಿಸಲಾಗುತ್ತಿದೆ. ಈ ತಿಂಗಳ ಮೊದಲ ವಾರದ ಅಂತ್ಯದ ವೇಳೆಗೆ, ಪಿಎಂಟಿಬಿಎಂಎ ಅಡಿ, 2,500ಕ್ಕೂ ಹೆಚ್ಚು ರೋಗಿಗಳು ಒಪ್ಪಿಗೆ ನೀಡಿದ್ದು, 1400ಕ್ಕೂ ಹೆಚ್ಚು ಹೊಸ ನಿಕ್ಷಯ್ ಮಿತ್ರಗಳನ್ನು ನೋಂದಾಯಿಸಲಾಗಿದೆ

ನಿಕ್ಷಯ್ ಪೋಷಣ್ ಯೋಜನೆ (ಎನ್ ಪಿ ವೈ) ಅಡಿ, ನೇರ ನಗದು ವರ್ಗಾವಣೆಯ ಮೂಲಕ ಟಿಬಿ ರೋಗಿಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದೆ. ಈ ಉದ್ದೇಶಕ್ಕಾಗಿ ಬಾಕಿ ಇರುವ ಫಲಾನುಭವಿಗಳ ಬ್ಯಾಂಕ್ ಖಾತೆಯ ವಿವರಗಳನ್ನು ಸಂಗ್ರಹಿಸಿ, ಖಾತೆಗಳಿಗೆ ಆಧಾರ್ ಸೀಡ್ ಮಾಡಲಾಗುತ್ತಿದೆ. ಮೊದಲ ವಾರದ ಅಂತ್ಯದ ವೇಳೆಗೆ, ಅಂತಹ 966 ಫಲಾನುಭವಿಗಳ ವಿವರಗಳನ್ನು ಸಂಗ್ರಹಿಸಲಾಗಿದೆ.

3. ಕುಡಗೋಲು ಕಣ ರಕ್ತಹೀನತೆ ರೋಗ: ಬುಡಕಟ್ಟು ಸಮುದಾಯವೇ ಹೆಚ್ಚಿರುವ ಪ್ರದೇಶಗಳಲ್ಲಿ ಎಸ್ಸಿಡಿಗಾಗಿ ಪಾಯಿಂಟ್ ಆಫ್ ಕೇರ್ (ಪಿಒಸಿ) ಪರೀಕ್ಷೆಗಳ ಮೂಲಕ ಕುಡಗೋಲು ಕಣ ರಕ್ತಹೀನತೆ ರೋಗ (ಎಸ್ಸಿಡಿ) ಪತ್ತೆಗಾಗಿ ಅರ್ಹ ಜನಸಂಖ್ಯೆಯ (40 ವರ್ಷ ವಯಸ್ಸಿನವರೆಗೆ) ಸ್ಕ್ರೀನಿಂಗ್ ಮಾಡಲಾಗುತ್ತಿದೆ ಅಥವಾ ದ್ರಾವಣ ಪರೀಕ್ಷೆ ನಡೆಸಲಾಗುತ್ತಿದೆ. ಧನಾತ್ಮಕ ಪರೀಕ್ಷೆಯ ಪ್ರಕರಣಗಳ ನಿರ್ವಹಣೆಗಾಗಿ ಉನ್ನತ ಕೇಂದ್ರಗಳಿಗೆ ಶಿಫಾರಸು ಮಾಡಲಾಗುತ್ತಿದೆ. ಮೊದಲ ವಾರದ ಅಂತ್ಯದ ವೇಳೆಗೆ, 24,000ಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಲಾಯಿತು, ಅದರಲ್ಲಿ 1,100 ಜನರಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗೆ ಶಿಫಾರಸು ಮಾಡಲಾಗಿದೆ.

4. ನಾನ್ ಕಮ್ಯುನಿಕಬಲ್ ಡಿಸೀಸಸ್ (ಎನ್ ಸಿಡಿ): ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಹೊಂದಿರುವ ಅರ್ಹ ಜನರ(30 ವರ್ಷ ಮತ್ತು ಮೇಲ್ಪಟ್ಟ) ತಪಾಸಣೆ ಮಾಡಲಾಗುತ್ತಿದೆ. ಪಾಸಿಟಿವ್ ಎಂದು ಶಂಕಿಸಲಾದ ಪ್ರಕರಣಗಳನ್ನು ಉನ್ನತ ಆರೋಗ್ಯ ಕೇಂದ್ರಗಳಿಗೆ ಶಿಫಾರಸು ಮಾಡಲಾಗುತ್ತಿದೆ. ಮೊದಲ ವಾರದ ಅಂತ್ಯದ ವೇಳೆಗೆ, ಸುಮಾರು 1,35,000 ಜನರ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ನಡೆಸಲಾಯಿತು. 7000ಕ್ಕೂ ಹೆಚ್ಚು ಜನರಿಗೆ ಅಧಿಕ ರಕ್ತದೊತ್ತಡ ಕಾಯಿಲೆಯ ಪಾಸಿಟಿವ್ ಬಂದಿದೆ. ಮತ್ತು 7,000ಕ್ಕಿಂತ ಹೆಚ್ಚು ಜನರಿಗೆ ಮಧುಮೇಹ ಪಾಸಿಟಿವ್  ಎಂದು ಶಂಕಿಸಲಾಗಿದೆ, 10,000ಕ್ಕೂ ಹೆಚ್ಚಿನ ಜನರನ್ನು ಉನ್ನತ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗೆ ಶಿಫಾರಸು ಮಾಡಲಾಗಿದೆ.

 

ಯಾತ್ರೆಯ 1 ವಾರ ಪೂರ್ಣಗೊಂಡ ನಂತರ ರಾಜ್ಯಗಳಿಂದಬಂದಿರುವ ಕೆಲವು ಸಕಾರಾತ್ಮಕ ವರದಿಗಳು ಕೆಳಕಂಡಂತಿವೆ:

ಜಾರ್ಖಂಡ್ – ವಿಬಿಎಸ್ಪಿ ಶಿಬಿರಗಳ ಜತೆಗೆ ಪಿವಿಜಿಟಿ ಪ್ರದೇಶಗಳಲ್ಲಿ ಎಸ್ಸಿಡಿ ಸ್ಕ್ರೀನಿಂಗ್ ನಡೆಸಲಾಗಿದೆ. ವಿಬಿಎಸ್ ವೈ ಸಮಯದಲ್ಲಿ ಜಾರ್ಖಂಡ್‌ನ ಎಲ್ಲಾ ಜಿಲ್ಲೆಗಳಲ್ಲಿ ಮೊದಲ ಬಾರಿಗೆ ಕುಡಗೋಲು ಕೋಶ ರಕ್ತಹೀನತೆಯ ತಪಾಸಣೆ ಪ್ರಾರಂಭವಾಯಿತು. ಡಿಡಿ ಮತ್ತು ಡಿಎನ್ಎಚ್ ಅವರು ಯಾತ್ರಾ ವ್ಯಾನ್ ಜತೆಗೆ ಹೆಚ್ಚುವರಿ ವ್ಯಾನ್ - ಶ್ರಮಯೋಗಿ ಸ್ವಾಸ್ಥ್ಯ ಸೇವಾ ಮೊಬೈಲ್ ವ್ಯಾನ್ ಅನ್ನು ಸಹ ಸೇರಿಸಿದ್ದಾರೆ. ಈ ವ್ಯಾನ್ ಎಲ್ಲಾ ಮಾರ್ಗಗಳಲ್ಲೂ ಸಂಚರಿಸುತ್ತದೆ.

ಜಮ್ಮು ಮತ್ತು ಕಾಶ್ಮೀರ – ಕೊರೆಯುವ ಚಳಿಗಾಲ ಮತ್ತು ಜಿಪಿ ದಾವರ್‌ನಂತಹ ದೂರದ ಪ್ರದೇಶಗಳಲ್ಲಿ ನಿರ್ಬಂಧಿತ ಚಲನೆಯಂತಹ ಸವಾಲುಗಳ ಹೊರತಾಗಿಯೂ, ಸುಮಾರು 35,000 ಜನರಿಗೆ ಅಗತ್ಯ ಸೇವೆಗಳ ವಿತರಣೆ ಖಚಿತಪಡಿಸಿಕೊಳ್ಳಲು ಸೇನೆ ಮತ್ತು ಸ್ಥಳೀಯ ಸ್ವಯಂಸೇವಕರೊಂದಿಗೆ ಅತ್ಯುತ್ತಮ ಸಮನ್ವಯ ಸಾಧಿಸಲಾಗುತ್ತಿದೆ.

ಅರುಣಾಚಲ ಪ್ರದೇಶ - ತವಾಂಗ್ ಜಿಲ್ಲೆಯ ಸಮುದಾಯಕ್ಕೆ ಜಾಗೃತಿ ಮೂಡಿಸಲು ನುಕ್ಕಡ್ ಮತ್ತು ನಾಟಕದಂತಹ ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸಲು ಉಪಕ್ರಮ ಕೈಗೊಳ್ಳಲಾಗಿದೆ.

ಕೆಲವು ರಾಜ್ಯಗಳು ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ತಿಳಿಸಿವೆ. ಮಹಾರಾಷ್ಟ್ರದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳ (ಸಿಎಚ್‌ಒ) ಮುಷ್ಕರವು ಆರೋಗ್ಯ ಶಿಬಿರಗಳನ್ನು ಆಯೋಜಿಸುವಲ್ಲಿ ಸವಾಲು ಒಡ್ಡಿತು. ಆದರೆ ಎಎನ್‌ಎಂಗಳು ಮತ್ತು ಆಶಾ ಕಾರ್ಯಕರ್ತೆಯರು ಎಲ್ಲಾ ಚಟುವಟಿಕೆಗಳನ್ನು ನಡೆಸುವ ಮೂಲಕ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಲಾಯಿತು. ಮಹಾರಾಷ್ಟ್ರದಲ್ಲಿ ವ್ಯಾನ್ ಗಳು ದೂರದ ಪ್ರದೇಶಗಳು ಮತ್ತು ಕುಗ್ರಾಮಗಳನ್ನು ತಲುಪಿ ಈ ಅಗತ್ಯ ಸೇವೆಗಳು ಎಲ್ಲರಿಗೂ ಲಭ್ಯವಾಗುವಂತೆ ನೋಡಿಕೊಳ್ಳುತ್ತಿವೆ ಎಂದು ವರದಿಯಾಗಿದೆ.

ಆಯುಷ್ಮಾನ್ ಗೋಲ್ಡನ್ ಕಾರ್ಡ್ ಯೋಜನೆಯನ್ನು ಸಜ್ಜುಗೊಳಿಸುವಲ್ಲಿ ಮತ್ತು ಪ್ರಚಾರ ಮಾಡುವಲ್ಲಿ ಈ ಯಾತ್ರೆಯು ಮಹತ್ವದ ಪಾತ್ರ ವಹಿಸಿದೆ. ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರದ ಹಲವಾರು ಬ್ಲಾಕ್‌ಗಳು ಯಾತ್ರೆಯ ಅವಧಿಯಲ್ಲಿ ಸಮುದಾಯದ ತೊಡಗಿಸಿಕೊಳ್ಳುವಿಕೆ ಹೆಚ್ಚಿಸುವಲ್ಲಿ ಗಮನಾರ್ಹ ಯಶಸ್ಸು ತೋರಿವೆ. ಆಧಾರ್ ಕಾರ್ಡ್‌ಗಳು ಮತ್ತು ಪಡಿತರ ಚೀಟಿಗಳ ಸಮರ್ಥ ವಿತರಣೆಗಾಗಿ ಗುಜರಾತ್ ಯಾತ್ರಾ ವೇದಿಕೆಯನ್ನು ಬಳಸಿಕೊಂಡಿತು. ವಿಬಿಎಸ್ಪಿ ಅವಧಿಯಲ್ಲಿ ಆದಾಯ ಪ್ರಮಾಣಪತ್ರಗಳು ಮತ್ತು ವಿಶೇಷಚೇತನರ ಪ್ರಮಾಣಪತ್ರಗಳನ್ನು ಪರಿಣಾಮಕಾರಿಯಾಗಿ ವಿತರಿಸಲು ತ್ರಿಪುರಾ ಈ ವೇದಿಕೆಯನ್ನು ಬಳಸಿಕೊಂಡಿದೆ.

ಆರೋಗ್ಯ ಶಿಬಿರಗಳು ಕುಡಗೋಲು ಕಣ ರಕ್ತಹೀನತೆ, ಕ್ಷಯ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳನ್ನು ಹೊಂದಿರುವ ಶಂಕಿತ ವ್ಯಕ್ತಿಗಳನ್ನು ಸುಲಭವಾಗಿ ಗುರುತಿಸಲು ಮತ್ತು ಸಜ್ಜುಗೊಳಿಸಲು ಅನುಕೂಲ ಮಾಡಿಕೊಟ್ಟಿವೆ ಎಂದು ಹೆಚ್ಚಿನ ರಾಜ್ಯಗಳು ವರದಿ ಮಾಡಿವೆ.

 

****

 



(Release ID: 1978782) Visitor Counter : 131