ಪ್ರಧಾನ ಮಂತ್ರಿಯವರ ಕಛೇರಿ
ಅಕ್ಟೋಬರ್ 27ರಂದು ಮಧ್ಯಪ್ರದೇಶದ ಚಿತ್ರಕೂಟಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
ಶ್ರೀ ಸದ್ಗುರು ಸೇವಾ ಸಂಘ ಟ್ರಸ್ಟ್ ನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ
ರಘುಬೀರ್ ಮಂದಿರದಲ್ಲಿ ಪೂಜೆ ಮತ್ತು ದರ್ಶನ ನೀಡಲಿರುವ ಪ್ರಧಾನಿ
ದಿವಂಗತ ಶ್ರೀ ಅರವಿಂದ್ ಭಾಯಿ ಮಫತ್ ಲಾಲ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ
Posted On:
26 OCT 2023 8:02PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಅಕ್ಟೋಬರ್ 27ರಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.
ಮಧ್ಯಾಹ್ನ 1:45 ರ ಸುಮಾರಿಗೆ ಪ್ರಧಾನಮಂತ್ರಿಯವರು ಸತ್ನಾ ಜಿಲ್ಲೆಯ ಚಿತ್ರಕೂಟಕ್ಕೆ ತಲುಪಲಿದ್ದು, ಶ್ರೀ ಸದ್ಗುರು ಸೇವಾ ಸಂಘ ಟ್ರಸ್ಟ್ ನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅವರು ರಘುಬೀರ್ ಮಂದಿರದಲ್ಲಿ ಪೂಜೆ ಮತ್ತು ದರ್ಶನ ನೀಡಲಿದ್ದಾರೆ. ಶ್ರೀ ರಾಮ್ ಸಂಸ್ಕೃತ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ; ದಿವಂಗತ ಶ್ರೀ ಅರವಿಂದ್ ಭಾಯಿ ಮಫತ್ ಲಾಲ್ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಮತ್ತು ಜಾನಕಿಕುಂಡ್ ಚಿಕಿತ್ಸಾಲಯದ ಹೊಸ ವಿಭಾಗವನ್ನು ಉದ್ಘಾಟಿಸಲಿದ್ದಾರೆ.
ದಿವಂಗತ ಶ್ರೀ ಅರವಿಂದ್ ಭಾಯಿ ಮಫತ್ ಲಾಲ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲೂ ಪ್ರಧಾನಮಂತ್ರಿಯವರು ಭಾಗವಹಿಸಲಿದ್ದಾರೆ. ಶ್ರೀ ಸದ್ಗುರು ಸೇವಾ ಸಂಘ ಟ್ರಸ್ಟ್ ಅನ್ನು 1968 ರಲ್ಲಿ ಪರಮ ಪೂಜ್ಯ ರಾಂಚೋಡ್ ದಾಸ್ ಜಿ ಮಹಾರಾಜ್ ಸ್ಥಾಪಿಸಿದರು. ಶ್ರೀ ಅರವಿಂದ್ ಭಾಯಿ ಮಫತ್ ಲಾಲ್ ಅವರು ಪರಮ ಪೂಜ್ಯ ರಾಂಚೋಡ್ ದಾಸ್ ಜೀ ಮಹಾರಾಜ್ ಅವರಿಂದ ಪ್ರೇರಿತರಾಗಿದ್ದರು ಮತ್ತು ಟ್ರಸ್ಟ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.
ಶ್ರೀ ಅರವಿಂದ್ ಭಾಯಿ ಮಫತ್ ಲಾಲ್ ಅವರು ಸ್ವಾತಂತ್ರ್ಯೋತ್ತರ ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿದ್ದರು, ಅವರು ದೇಶದ ಬೆಳವಣಿಗೆಯ ಕಥೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.
ಚಿತ್ರಕೂಟಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ತುಳಸಿ ಪೀಠಕ್ಕೂ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3:15 ರ ಸುಮಾರಿಗೆ ಅವರು ಕಾಂಚ್ ಮಂದಿರದಲ್ಲಿ ಪೂಜೆ ಮತ್ತು ದರ್ಶನ ಮಾಡಲಿದ್ದಾರೆ. ಅವರು ತುಳಸಿ ಪೀಠದ ಜಗದ್ಗುರು ರಮಾನಂದಾಚಾರ್ಯರ ಆಶೀರ್ವಾದ ಪಡೆಯಲಿದ್ದಾರೆ ಮತ್ತು ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ, ಅಲ್ಲಿ ಅವರು 'ಅಷ್ಟಾಧ್ಯಾಯಿ ಭಾಷ್ಯ', 'ರಮಾನಂದಾಚಾರ್ಯ ಚರಿತಂ' ಮತ್ತು 'ಭಗವಾನ್ ಶ್ರೀ ಕೃಷ್ಣ ಕಿ ರಾಷ್ಟ್ರಲೀಲಾ' ಎಂಬ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ.
ತುಳಸಿ ಪೀಠವು ಮಧ್ಯಪ್ರದೇಶದ ಚಿತ್ರಕೂಟದಲ್ಲಿರುವ ಒಂದು ಪ್ರಮುಖ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಸಂಸ್ಥೆಯಾಗಿದೆ. ಇದನ್ನು 1987 ರಲ್ಲಿ ಜಗದ್ಗುರು ರಾಮಭದ್ರಾಚಾರ್ಯರು ಸ್ಥಾಪಿಸಿದರು. ತುಳಸಿ ಪೀಠವು ಹಿಂದೂ ಧಾರ್ಮಿಕ ಸಾಹಿತ್ಯದ ಪ್ರಮುಖ ಪ್ರಕಾಶಕರಲ್ಲಿ ಒಬ್ಬರು.
***
(Release ID: 1974067)
Visitor Counter : 84
Read this release in:
Assamese
,
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam