ಪ್ರಧಾನ ಮಂತ್ರಿಯವರ ಕಛೇರಿ
ಏಷ್ಯನ್ ಪ್ಯಾರಾ ಗೇಮ್ಸ್‌ನ ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಶಿವರಾಜನ್ ಮತ್ತು ನಿತ್ಯಾ ಶ್ರೀ ಶಿವನ್ ಅವರನ್ನು ಪ್ರಧಾನಮಂತ್ರಿ ಅಭಿನಂದಿಸಿದರು
प्रविष्टि तिथि:
25 OCT 2023 10:13PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಹಾಂಗ್ ಝೌ ಏಷ್ಯನ್ ಪ್ಯಾರಾ ಗೇಮ್ಸ್‌ನ ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್ ಎಸ್‌ಎಚ್ 6 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಶಿವರಾಜನ್ ಮತ್ತು ನಿತ್ಯಾ ಶ್ರೀ ಶಿವನ್ ಅವರನ್ನು ಅಭಿನಂದಿಸಿದರು.
ಅವರ ಸಾಧನೆ ಅವರ ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಈ ಸಂಬಂಧ ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ:
‘‘ಏಷ್ಯನ್ ಪ್ಯಾರಾ ಗೇಮ್ಸ್‌ನ ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್ ಎಸ್‌ಎಚ್ 6 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಶಿವರಾಜನ್ ಮತ್ತು ನಿತ್ಯಾ ಶ್ರೀ ಶಿವನ್ ಅವರಿಗೆ ಅಭಿನಂದನೆಗಳು.
ಅವರ ಸಂಯೋಜಿತ ಉತ್ಕೃಷ್ಟತೆ ಮತ್ತು ಸಾಂಘಿಕ ಹೋರಾಟ ಅಳಿಸಲಾಗದ ಗುರುತನ್ನು ಬಿಟ್ಟಿದೆ. ಇಂತಹ ಮಹಾನ್ ಸಾಧನೆಯು ಅವರ ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಭಾರತವು ಯಾವಾಗಲೂ ಅವರ ಯಶಸ್ಸನ್ನು ಆಚರಿಸುತ್ತದೆ,’’ ಎಂದಿದ್ದಾರೆ.
***
(रिलीज़ आईडी: 1972950)
आगंतुक पटल : 122
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam