ಪ್ರಧಾನ ಮಂತ್ರಿಯವರ ಕಛೇರಿ
ಏಷ್ಯನ್ ಪ್ಯಾರಾ ಗೇಮ್ಸ್ ಚೆಸ್ ನಲ್ಲಿ ಚಿನ್ನ ಗೆದ್ದ ದರ್ಪಣ್ ಇನಾನಿಗೆ ಪ್ರಧಾನಿ ಅಭಿನಂದನೆ
प्रविष्टि तिथि:
28 OCT 2023 11:50AM by PIB Bengaluru
ಹಾಂಗ್ ಝೌ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಪುರುಷರ ಚೆಸ್ ವಿಭಾಗದಲ್ಲಿ ಇಂದು ಚಿನ್ನದ ಪದಕ ಗೆದ್ದ ದರ್ಪಣ್ ಇನಾನಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಭಿನಂದಿಸಿದರು.
ಇನಾನಿ ಅವರ ಗೆಲುವು ಜಾಗತಿಕ ಮಟ್ಟದಲ್ಲಿ ಭಾರತದ ಅಸಾಧಾರಣ ಪ್ರತಿಭೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿಯವರು ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ್ದಾರೆ:
"ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ ಚೆಸ್ ಬಿ 1 ವಿಭಾಗದಲ್ಲಿ (ವೈಯಕ್ತಿಕ) ಅದ್ಭುತ ಪ್ರದರ್ಶನ ನೀಡಿದ ದರ್ಪಣ್ ಇನಾನಿ ಅವರಿಗೆ ಅಭಿನಂದನೆಗಳು.
ಅವರ ಅಚಲ ಶಕ್ತಿ ಮತ್ತು ದೃಢನಿಶ್ಚಯವು ಅವರಿಗೆ ಚಿನ್ನದ ಪದಕವನ್ನು ಗಳಿಸಿಕೊಟ್ಟಿದೆ ಮಾತ್ರವಲ್ಲ, ಜಾಗತಿಕ ವೇದಿಕೆಯಲ್ಲಿ ಭಾರತದ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಿದೆ.” ಎಂದವರು ಹೇಳಿದ್ದಾರೆ.
****
(रिलीज़ आईडी: 1972605)
आगंतुक पटल : 128
इस विज्ञप्ति को इन भाषाओं में पढ़ें:
Gujarati
,
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Odia
,
Tamil
,
Telugu
,
Malayalam