ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಏಷ್ಯನ್ ಪ್ಯಾರಾ ಗೇಮ್ಸ್ 2022 ರ ಮಹಿಳೆಯರ 48 ಕೆಜಿ ಜೆ 2 ಜೂಡೋ ಸ್ಪರ್ಧೆಯಲ್ಲಿ ಕೋಕಿಲಾರಿಗೆ  ಕಂಚಿನ ಪದಕ,  ಸಂಭ್ರಮಾಚರಣೆ ಮಾಡಿದ  ಪ್ರಧಾನಿ

प्रविष्टि तिथि: 23 OCT 2023 6:51PM by PIB Bengaluru

ಚೀನಾದ ಹ್ಯಾಂಗ್ ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ 2022ರಲ್ಲಿ ಮಹಿಳೆಯರ 48 ಕೆಜಿ ಜೆ2 ಜೂಡೋ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಕೋಕಿಲಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಭಿನಂದಿಸಿದ್ದಾರೆ.

ಪ್ರಧಾನಮಂತ್ರಿಯವರು ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ್ದಾರೆ:

"ಜೂಡೋದಲ್ಲಿ ಮಹಿಳೆಯರ 48 ಕೆಜಿ ಜೆ 2 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಕೋಕಿಲಾ ಅವರಿಗೆ ಅಭಿನಂದನೆಗಳು. ಅವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು" ಎಂದು ಅದರಲ್ಲಿ ಹೇಳಿದ್ದಾರೆ.

***


(रिलीज़ आईडी: 1971902) आगंतुक पटल : 122
इस विज्ञप्ति को इन भाषाओं में पढ़ें: Assamese , Malayalam , English , Urdu , Marathi , हिन्दी , Manipuri , Bengali , Punjabi , Gujarati , Odia , Tamil , Telugu