ಪ್ರಧಾನ ಮಂತ್ರಿಯವರ ಕಛೇರಿ

​​​​​​​ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ P2 - ಮಹಿಳೆಯರ 10m ಏರ್ ಪಿಸ್ತೂಲ್ SH1 ನಲ್ಲಿ ಕಂಚು ಗೆದ್ದ ಶೂಟರ್ ರುಬಿನಾ ಫ್ರಾನ್ಸಿಸ್ ಅವರಿಗೆ ಪ್ರಧಾನಿ ಮೆಚ್ಚುಗೆ

Posted On: 24 OCT 2023 7:10PM by PIB Bengaluru

ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ P2 - ಮಹಿಳೆಯರ 10m ಏರ್ ಪಿಸ್ತೂಲ್ SH1 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಶೂಟರ್ ರುಬಿನಾ ಫ್ರಾನ್ಸಿಸ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.

ರುಬಿನಾ ಅವರ ಸಮರ್ಪಣೆ ಮತ್ತು ಪರಿಶ್ರಮ ಶ್ಲಾಘನೀಯ ಅವರ ಭವಿಷ್ಯದ ಪ್ರಯತ್ನಗಳಿಗೆ ಪ್ರಧಾನಿ ಶುಭ ಹಾರೈಸಿದರು.

ಈ ಕುರಿತು ಪ್ರಧಾನ ಮಂತ್ರಿ ಸಾಮಾಜಿಕ ಜಾಲತಾಣ X ನಲ್ಲಿ ಸಂದೇಶ ನೀಡಿದ್ದಾರೆ.

"ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ P2 - ಮಹಿಳೆಯರ 10m ಏರ್ ಪಿಸ್ತೂಲ್ SH1 ಸ್ಪರ್ಧೆಯಲ್ಲಿ ರುಬಿನಾ ಫ್ರಾನ್ಸಿಸ್ ಅವರು ಕಂಚು ಪದಕ ಗೆದ್ದು ಸಾಧನೆ ಮಾಡಿದ್ದಾರೆ. ರುಬಿನಾ ಅವರ ಸಮರ್ಪಣೆ ಮತ್ತು ಪರಿಶ್ರಮವು ಇದನ್ನು ಸಾಧ್ಯವಾಗಿಸಿದೆ. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭಾಶಯಗಳು" ಎಂದು ಪ್ರಧಾನಮಂತ್ರಿಗಳು ತಿಳಿಸಿದ್ದಾರೆ.

 

***



(Release ID: 1971552) Visitor Counter : 79