ಪ್ರಧಾನ ಮಂತ್ರಿಯವರ ಕಛೇರಿ
ಏಷ್ಯನ್ ಪ್ಯಾರಾ ಗೇಮ್ಸ್ 2022 ರ ಆರ್ಚರಿ ಪುರುಷರ ಡಬಲ್ಸ್ - ಡಬ್ಲ್ಯು1 ಸ್ಪರ್ಧೆಯಲ್ಲಿ ಆದಿಲ್ ಮೊಹಮ್ಮದ್ ನಜೀರ್ ಅನ್ಸಾರಿ ಮತ್ತು ನವೀನ್ ದಲಾಲ್ ಅವರ ಜೋಡಿ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ
Posted On:
26 OCT 2023 11:47AM by PIB Bengaluru
ಚೀನಾದ ಹ್ಯಾಂಗ್ ಝೌನಲ್ಲಿ ಏಷ್ಯನ್ ಪ್ಯಾರಾ ಗೇಮ್ಸ್2022 ರ ಆರ್ಚರಿ ಪುರುಷರ ಡಬಲ್ಸ್ - ಡಬ್ಲ್ಯು1 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಆದಿಲ್ ಮೊಹಮ್ಮದ್ ನಜೀರ್ ಅನ್ಸಾರಿ ಮತ್ತು ನವೀನ್ ದಲಾಲ್ ಅವರ ಜೋಡಿ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಾಕಿದ್ದಾರೆ;
“ಆರ್ಚರಿ ಪುರುಷರ ಡಬಲ್ಸ್ - ಡಬ್ಲ್ಯು1 ಸ್ಪರ್ಧೆಯಲ್ಲಿ ತಮ್ಮ ಅದ್ಭುತ ಕಂಚಿನ ಜಯಕ್ಕಾಗಿ ಆದಿಲ್ ಮೊಹಮ್ಮದ್ ನಜೀರ್ ಅನ್ಸಾರಿ ಮತ್ತು ನವೀನ್ ದಲಾಲ್ ಅವರುಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
ಅವರ ನಿಖರತೆ, ತಂಡದ ಕೆಲಸ ಮತ್ತು ಅಚಲ ನಿರ್ಧಾರ ನಮ್ಮ ರಾಷ್ಟ್ರಕ್ಕೆ ಗೌರವ ತಂದಿದೆ. ಅವರು ಯಾವಾಗಲೂ ಉನ್ನತ ಗುರಿಯನ್ನು ಹೊಂದಿರಲಿ. ಭಾರತವು ಈ ಮಹೋನ್ನತ ಸಾಧನೆಯನ್ನು ಬಹಳ ಹೆಮ್ಮೆಯಿಂದ ಆಚರಿಸುತ್ತದೆ.
***
(Release ID: 1971536)
Visitor Counter : 71
Read this release in:
Bengali
,
English
,
Urdu
,
Marathi
,
Hindi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam