ಪ್ರಧಾನ ಮಂತ್ರಿಯವರ ಕಛೇರಿ

ಏಷ್ಯನ್ ಪ್ಯಾರಾ ಗೇಮ್ಸ್ 2022 ರಲ್ಲಿ ಪುರುಷರ ಶಾಟ್ ಪುಟ್-ಎಫ್ 46 ಸ್ಪರ್ಧೆಯಲ್ಲಿ ಸಚಿನ್ ಸಜೆರಾವ್ ಖಿಲಾರಿ ಚಿನ್ನದ ಪದಕವನ್ನು ಗೆದ್ದಿದ್ದಕ್ಕಾಗಿ ಪ್ರಧಾನಮಂತ್ರಿಯವರಿಂದ ಅಭಿನಂದನೆ.

Posted On: 26 OCT 2023 11:27AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚೀನಾದ ಹ್ಯಾಂಗ್ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ 2022 ರಲ್ಲಿ  ಪುರುಷರ ಶಾಟ್ ಪುಟ್-ಎಫ್ 46 ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಕ್ಕಾಗಿ ಸಚಿನ್ ಸಜೆರಾವ್ ಖಿಲಾರಿ ಅವರನ್ನು ಅಭಿನಂದಿಸಿದರು.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಧಾನ ಮಂತ್ರಿಯವರು  ಹೀಗೆ ಬರೆದಿದ್ದಾರೆ:

“ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಪುರುಷರ ಶಾಟ್ ಪುಟ್-ಎಫ್ 46 ಸ್ಪರ್ಧೆಯಲ್ಲಿ ಸಚಿನ್ ಸಜೆರಾವ್ ಖಿಲಾರಿ ಅವರಿಂದ ಭಾರತಕ್ಕೆ ಭವ್ಯವಾದ ಚಿನ್ನದ ಪದಕ!

ಈ ಅದ್ಭುತ ಗೆಲುವಿಗಾಗಿ ಸಚಿನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಸಮರ್ಪಣೆ ಮತ್ತು ಶಕ್ತಿ ಅದ್ಭುತವಾಗಿ ಮಿಂಚಿದವು .

 

***



(Release ID: 1971533) Visitor Counter : 62