ಪ್ರಧಾನ ಮಂತ್ರಿಯವರ ಕಛೇರಿ

ಏಷ್ಯನ್ ಪ್ಯಾರಾ ಗೇಮ್ಸ್ 2022 ರಲ್ಲಿ ಶಾಟ್ಪುಟ್ ಎಫ್-56/57 ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಹೊಟೊಝೆ ದೇನಾ ಹೊಕಾಟೊ ಅವರನ್ನು  ಪ್ರಧಾನ ಮಂತ್ರಿಯವರು ಅಭಿನಂದಿಸಿದರು

Posted On: 25 OCT 2023 7:50PM by PIB Bengaluru

ಚೀನಾದ ಹ್ಯಾಂಗ್ಝೌನಲ್ಲಿ 2022 ರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಶಾಟ್ಪುಟ್ ಎಫ್-56/57 ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಹೊಟೊಝೆ ದೇನಾ ಹೊಕಾಟೊ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಭಿನಂದಿಸಿದರು.

ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ  ಪ್ರಧಾನಮಂತ್ರಿಯವರು ಹೀಗೆ ಪೋಸ್ಟ್ ಮಾಡಿದ್ದಾರೆ:

“ಶಾಟ್ಪುಟ್ ಎಫ್-56/57 ವಿಭಾಗದಲ್ಲಿ ಗಮನಾರ್ಹವಾದ ಕಂಚಿನ ಪದಕಕ್ಕಾಗಿ ಹೊಟೊಜೆ ದೇನಾ ಹೊಕಾಟೊ ಅವರಿಗೆ ಅಭಿನಂದನೆಗಳು.

ಅವರ ಅದಮ್ಯ ಚೈತನ್ಯ ಮತ್ತು ಶಕ್ತಿಯ ಬಗ್ಗೆ ಭಾರತವು ಹೆಮ್ಮೆಪಡುತ್ತದೆ. ಅವರ ಮುಂದಿನ ಪಯಣ ಇನ್ನಷ್ಟು ಅದ್ಭುತವಾದ ವಿಜಯಗಳಿಂದ ಕಂಗೊಳಿಸಲಿ.

***(Release ID: 1971256) Visitor Counter : 64