ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದಕ್ಕಾಗಿ ರುದ್ರಾಂಶ್ ಖಂಡೇಲ್ವಾಲ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

Posted On: 24 OCT 2023 5:56PM by PIB Bengaluru

ಇಂದು ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ ನ ಪಿ1 - ಪುರುಷರ 10ಮೀಟರ್ ಏರ್ ಪಿಸ್ತೂಲ್ ಎಸ್.ಹೆಚ್.1 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಕ್ಕಾಗಿ ಕ್ರೀಡಾಳು ರುದ್ರಾಂಶ್ ಖಂಡೇಲ್ವಾಲ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ:

"ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಮಹತ್ತರವಾದ ಬೆಳ್ಳಿ ಪದಕ ಗೆದ್ದದ್ದಕ್ಕಾಗಿ ಶ್ರೀ ರುದ್ರಾಂಶ್ ಖಂಡೇಲ್ವಾಲ್ ಅವರಿಗೆ ಅಭಿನಂದನೆಗಳು.

ಪಿ1 - ಪುರುಷರ 10ಮೀಟರ್ ಏರ್ ಪಿಸ್ತೂಲ್ ಎಸ್.ಹೆಚ್.1 ಸ್ಪರ್ಧೆಯಲ್ಲಿ ಅವರ ಅತ್ಯುತ್ತಮ ಪ್ರದರ್ಶನವು ಅವರ ನಿಖರತೆ ಮತ್ತು ನಿರಂತರ ಅಭ್ಯಾಸದ ಫಲವಾಗಿದೆ.

ಅವರ ಈ ಅದ್ಭುತ ಸಾಧನೆಯನ್ನು ಭಾರತ ಶ್ಲಾಘಿಸುತ್ತದೆ!

 ***


(Release ID: 1970535) Visitor Counter : 91