ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದರು


ಮಹಿಳಾ ಸಬಲೀಕರಣಕ್ಕೆ ಮಹಿಳೆಯರೇ ದಾರಿದೀಪವಾಗುತ್ತಾರೆ ಎಂಬುದಕ್ಕೆ ಶ್ರೀಮತಿ ವಹೀದಾ ರೆಹಮಾನ್ ಉದಾಹರಣೆ: ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು

ಕಲಾವಿದರು ಬದಲಾವಣೆ-ಸೃಷ್ಟಿಸುವವರು, ಉತ್ಕೃಷ್ಟತೆಯ ಮಾನದಂಡಗಳನ್ನು ಹೊಂದಿಸುವುದನ್ನು ಮುಂದುವರಿಸುತ್ತಾರೆ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುತ್ತಾರೆ: ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು

ಯಾವುದೇ ವಿಷಯವು ಪ್ರಾದೇಶಿಕವಲ್ಲ, ಉತ್ತಮ ಪ್ರಾದೇಶಿಕ ವಿಷಯವು ಜಾಗತಿಕ ಪ್ರೇಕ್ಷಕರನ್ನು ಕಂಡುಕೊಳ್ಳುತ್ತದೆ: ಶ್ರೀ ಅನುರಾಗ್ ಠಾಕೂರ್


ನಕಲಿ(ಪೈರಸಿ) ವಿರುದ್ಧದ ಹೋರಾಟದಲ್ಲಿ ಚಲನಚಿತ್ರ ಬಂಧುಗಳೊಂದಿಗೆ ಕೇಂದ್ರ ಸರ್ಕಾರ ನಿಂತಿದೆ, ಶೀಘ್ರದಲ್ಲೇ ಎ.ವಿ.ಜಿ.ಸಿ. ನೀತಿ ಜಾರಿಯಾಗಲಿದೆ: ಶ್ರೀ ಅನುರಾಗ್ ಠಾಕೂರ್

Posted On: 17 OCT 2023 6:10PM by PIB Bengaluru

ವದೆಹಲಿಯಲ್ಲಿ ಇಂದು ನಡೆದ ಸಮಾರಂಭದಲ್ಲಿ, 69 ನೇ ಆವೃತ್ತಿಯ ವಿವಿಧ ವಿಭಾಗಗಳ ಅಡಿಯಲ್ಲಿ 2021 ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಶ್ರೀಮತಿ ವಹೀದಾ ರೆಹಮಾನ್ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕೇಂದ್ರ ಮಾಹಿತಿ ಮತ್ತು ಪ್ರಸಾರ (ಐ&ಬಿ) ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್, ಕೇಂದ್ರ ಮಾಹಿತಿ ಮತ್ತು ಪ್ರಸಾರ (ಐ&ಬಿ) ರಾಜ್ಯ ಸಚಿವ ಡಾ. ಎಲ್. ಮುರುಗನ್, ಕೇಂದ್ರ ಮಾಹಿತಿ ಮತ್ತು ಪ್ರಸಾರ (ಐ&ಬಿ) ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ, ತೀರ್ಪುಗಾರರ ತಂಡದ ಅಧ್ಯಕ್ಷರು ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಶ್ರೀಮತಿ ವಹೀದಾ ರೆಹಮಾನ್ ಅವರನ್ನು ಅಭಿನಂದಿಸಿದರು ಮತ್ತು “ಶ್ರೀಮತಿ ವಹೀದಾ ರೆಹಮಾನ್ ಅವರು ತಮ್ಮ ಕಲೆ ಮತ್ತು ವ್ಯಕ್ತಿತ್ವದಿಂದ ಚಿತ್ರರಂಗದ ಉತ್ತುಂಗದಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ. ವೈಯುಕ್ತಿಕ ಜೀವನದಲ್ಲೂ ಘನತೆ, ಆತ್ಮವಿಶ್ವಾಸ, ಸ್ವಂತಿಕೆಯ ಹೆಣ್ಣಾಗಿ ಛಾಪು ಮೂಡಿಸಿದ್ದಾರೆ. ಅವರು ಅನೇಕ ಚಲನಚಿತ್ರಗಳನ್ನು ಆಯ್ಕೆ ಮಾಡಿದ್ದರೂ ಕೂಡಾ, ಅದರಲ್ಲಿ ಅವರ ಪಾತ್ರಗಳು ಸಾಮಾನ್ಯವಾಗಿ ಮಹಿಳೆಯರಿಗೆ ಸಂಬಂಧಿಸಿದ ಅನೇಕ ಅಡೆತಡೆಗಳನ್ನು ಮುರಿದವುಗಳೇ ಆಗಿದ್ದವು. ಮಹಿಳಾ ಸಬಲೀಕರಣಕ್ಕೆ ಮಹಿಳೆಯರೇ ಮುಂದಾಗಬೇಕು ಎಂಬುದಕ್ಕೆ ಶ್ರೀಮತಿ ವಹೀದಾ ಜೀ ಅವರು ಉದಾಹರಣೆಯಾಗಿದ್ದಾರೆ.” ಎಂದು ಅವರು ಹೇಳಿದರು.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಕುರಿತು ಮಾತನಾಡಿದ ರಾಷ್ಟ್ರಪತಿಯವರು, “ಪ್ರಶಸ್ತಿ ಪ್ರದಾನ ಸಮಾರಂಭವು ಭಾರತದ ವೈವಿಧ್ಯತೆ ಮತ್ತು ಅದರಲ್ಲಿ ಅಂತರ್ಗತವಾಗಿರುವ ಏಕತೆಯನ್ನು ಚಿತ್ರಿಸುತ್ತದೆ. ಸಮಾರಂಭದಲ್ಲಿ ಉಪಸ್ಥಿತರಿರುವ ಈ ಪ್ರತಿಭಾವಂತ ಗಣ್ಯರು, ಅನೇಕ ಭಾಷೆಗಳು, ಪ್ರಾದೇಶಿಕ ಗುಣಲಕ್ಷಣಗಳು, ಸಾಮಾಜಿಕ ನಂಬಿಕೆಗಳು, ಸಾಧನೆಗಳು ಮತ್ತು ಸಮಸ್ಯೆಗಳಿಗೆ ಅರ್ಥಪೂರ್ಣ ಅಭಿವ್ಯಕ್ತಿ ನೀಡಿದ್ದಾರೆ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಹಲವಾರು ತಲೆಮಾರುಗಳು ಮತ್ತು ವರ್ಗಗಳ ಜನರು ಒಟ್ಟುಗೂಡಿದರು” ಎಂದು ಹೇಳಿದರು.

ಚಲನಚಿತ್ರ ಕ್ಷೇತ್ರದವರು ಮತ್ತು ಕಲಾವಿದರನ್ನು ಸಾಮಾಜಿಕ ಬದಲಾವಣೆ ಮಾಡುವವರು ಎಂದು ಕರೆದ ರಾಷ್ಟ್ರಪತಿಯವರು, “ಚಲನಚಿತ್ರ ಕಲಾವಿದರು ತಮ್ಮ ಚಲನಚಿತ್ರಗಳ ಮೂಲಕ ಭಾರತೀಯ ಸಮಾಜದ ವೈವಿಧ್ಯಮಯ ವಾಸ್ತವಕ್ಕೆ ಜೀವಂತ ಪರಿಚಯವನ್ನು ನೀಡುತ್ತಾರೆ. ಸಿನಿಮಾ ನಮ್ಮ ಸಮಾಜದ ದಾಖಲೆಯಾಗಿದೆ ಮತ್ತು ಸಮಾಜವನ್ನು ಸುಧಾರಿಸುವ ಮಾಧ್ಯಮವಾಗಿದೆ ಮತ್ತು ಅವರ ಕೆಲಸವು ಜನರನ್ನು ಪರಸ್ಪರ ಸಂಪರ್ಕಿಸುತ್ತದೆ” ಎಂದು ಹೇಳಿದರು.

“ಪ್ರತಿಭೆಯಿಂದ ಸಮೃದ್ಧವಾಗಿರುವ ದೇಶದಲ್ಲಿ, ಚಿತ್ರರಂಗಕ್ಕೆ ಸಂಬಂಧಿಸಿದ ಜನರು ವಿಶ್ವ ದರ್ಜೆಯ ಶ್ರೇಷ್ಠತೆಯ ಹೊಸ ಮಾನದಂಡಗಳನ್ನು ಸ್ಥಾಪಿಸುವುದನ್ನು ಮುಂದುವರಿಸುತ್ತಾರೆ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ಚಲನಚಿತ್ರಗಳು ಪ್ರಮುಖ ಪಾತ್ರ ವಹಿಸುತ್ತವೆ” ಎಂದು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಭಾರತೀಯ ಚಲನಚಿತ್ರೋದ್ಯಮದ ಬಗ್ಗೆ ತಮ್ಮ ಹೆಮ್ಮೆಯನ್ನು ವ್ಯಕ್ತಪಡಿಸಿದರು ಮತ್ತು “ಇಂದು ಯಾವುದೂ ಪ್ರಾದೇಶಿಕವಾಗಿಲ್ಲ, ವಿಷಯವು ಉತ್ತಮವಾಗಿದ್ದರೆ, ಪ್ರಾದೇಶಿಕ ವಿಷಯವು ಜಾಗತಿಕ ಪ್ರೇಕ್ಷಕರನ್ನು ಕಂಡುಕೊಳ್ಳುತ್ತದೆ” ಎಂದು ಹೇಳಿದರು.

ಚಲನಚಿತ್ರರಂಗದ ದಂತಕಥೆ ಶ್ರೀಮತಿ ವಹೀದಾ ರೆಹಮಾನ್ ಅವರ ಕುರಿತು ಕೇಂದ್ರ ಸಚಿವ ಶ್ರೀ ಠಾಕೂರ್ ಅವರು ಮಾತನಾಡುತ್ತಾ, “ಭಾರತೀಯ ಚಲನಚಿತ್ರಗಳು ಅಂತರಾಷ್ಟ್ರೀಯ ಗಡಿಗಳನ್ನು ಮೀರಿದಂತೆ, ಖ್ಯಾತಿಯ ಅಂತಹ ಹಕ್ಕು ಅವರಿಗೆ ಮೀಸಲಾಗಿದೆ. ಆವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ಹೃತ್ಪೂರ್ವಕ ಅಭಿನಂದನೆಗಳು” ಎಂದು ಹೇಳಿದರು.

ಭಾರತದಲ್ಲಿ ಎ.ವಿ.ಜಿ.ಸಿ. ಕ್ಷೇತ್ರದ ಸಾಮರ್ಥ್ಯದ ಬಗ್ಗೆ ಮಾತನಾಡುತ್ತಾ, “ಚಲನಚಿತ್ರ ನಕಲಿ ವ್ಯವಹಾರ(ಪೈರಸಿ) ವ್ಯವಸ್ಥೆಯನ್ನು ಎದುರಿಸುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರವು ಉದ್ಯಮದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ, ಮತ್ತು ಇದಕ್ಕಾಗಿ ಸಿನಿಮಾಟೋಗ್ರಾಫ್ ಕಾಯ್ದೆಯನ್ನು ತಂದಿದೆ ಇದು ಈ ಹಾವಳಿಯನ್ನು ತಡೆಯುವಲ್ಲಿ ದೊಡ್ಡ ಹೆಜ್ಜೆಯಾಗಿದೆ. ನಕಲಿ ವ್ಯವಹಾರ(ಪೈರಸಿ) ಬಗ್ಗೆ ಕೇಂದ್ರ ಸರ್ಕಾರವು ನೀತಿಯನ್ನು ಹೊರತರಲಿದೆ ಮತ್ತು ಅದು ಭಾರತವು 'ವಿಶ್ವದ ವಿಷಯ ಕೇಂದ್ರ'ವಾಗಿ ತನ್ನ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ” ಎಂದು ಕೇಂದ್ರ ಸಚಿವರು ಸಭಿಕರಿಗೆ ಮಾಹಿತಿ ನೀಡಿದರು.

ಕೇಂದ್ರ ಮಾಹಿತಿ ಮತ್ತು ಪ್ರಸಾರ (ಐ&ಬಿ) ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರನ ಅವರು ಮಾತನಾಡುತ್ತಾ “2021 ನೇ ವರ್ಷಕ್ಕೆ ಮೀಸಲಾದ ಪ್ರಶಸ್ತಿಗಳನ್ನು ಈಗ ನೀಡಲಾಗುತ್ತಿದೆ. ಇದರ ಕಾಲಘಟ್ಟ ಕೋವಿಡ್-19 ವರ್ಷವಾಗಿದೆ. ಅಂದು ಸಿನಿಮಾ ಮಂದಿರಗಳನ್ನು ಮುಚ್ಚಿದಾಗ ಮತ್ತು ಉದ್ಯಮವು ಹೆಣಗಾಡುತ್ತಿತ್ತು, ಹಾಗಿದ್ದರೂ, ನಾವು ಶೀಘ್ರವಾಗಿ ಎಲ್ಲಾ ಅಡೆತಡೆಗಳನ್ನು ಹಿಂದಕ್ಕೆ ಹಾಕಿ ಇಂದು ಬಹಳ ಎತ್ತರ ಏರಿದ್ದೇವೆ. ಈಗ ದೇಶ ಮತ್ತು ಚಲನಚಿತ್ರೋದ್ಯಮ, ಎರಡೂ ಬೆಳವಣಿಗೆಯ ಹಾದಿಗೆ ಮರಳಿದೆ. ಕಳೆದ ತ್ರೈಮಾಸಿಕವು ಭಾರತದ ಚಲನಚಿತ್ರೋದ್ಯಮಕ್ಕೆ ಅತ್ಯುತ್ತಮವಾಗಿದೆ. ವ್ಯವಹಾರಿಕವಾಗಿ, ಬಾಕ್ಸ್ ಆಫೀಸ್ ಯಶಸ್ಸು ಮುಖ್ಯವಾಗಿದ್ದರೂ ಕೂಡಾ, ಚಲನಚಿತ್ರ ಪ್ರಶಸ್ತಿಗಳು ಕೇವಲ ಗುಣಮಟ್ಟವನ್ನು ಮಾತ್ರ ಮಾನದಂಡವಾಗಿಸುತ್ತವೆ.” ಎಂದು ಹೇಳಿದರು.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದ್ದಕ್ಕಾಗಿ ಶ್ರೀಮತಿ ವಹೀದಾ ರೆಹಮಾನ್ ಅವರಿಗೆ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರನ ಅವರು ಕೃತಜ್ಞತೆ ಸಲ್ಲಿಸಿದರು.

ಚಲನಚಿತ್ರ ಪ್ರಶಸ್ತಿಗಳ ಸಂಪೂರ್ಣ ಪಟ್ಟಿಯನ್ನು ಕೆಳಗಿನ ಕೊಂಡಿ ಮೂಲಕ ನೋಡಬಹುದು

https://pib.gov.in/PressReleasePage.aspx?PRID=1951758

 

https://static.pib.gov.in/WriteReadData/userfiles/image/image001M7KE.jpg

https://static.pib.gov.in/WriteReadData/userfiles/image/image002GAKM.jpg

 

https://static.pib.gov.in/WriteReadData/userfiles/image/image003PRHZ.jpg

https://static.pib.gov.in/WriteReadData/userfiles/image/image004QUX9.jpg

https://static.pib.gov.in/WriteReadData/userfiles/image/image005NL7H.jpg

https://static.pib.gov.in/WriteReadData/userfiles/image/image006FOFZ.jpg

https://static.pib.gov.in/WriteReadData/userfiles/image/image00735WF.jpg

https://static.pib.gov.in/WriteReadData/userfiles/image/image00888JG.jpg

ಕಾರ್ಯಕ್ರಮದ ವೀಕ್ಷಣೆಗಾಗಿ ಕೆಳಗಿನ ಯೂಟ್ಯೂಬ್ ಕೊಂಡಿ ಬಳಸಬಹುದು

********

 

 


(Release ID: 1968554) Visitor Counter : 126