ಪ್ರಧಾನ ಮಂತ್ರಿಯವರ ಕಛೇರಿ
ಹಲವು ವರ್ಷಗಳ ನಂತರ ಪಾರ್ವತಿ ಕುಂಡ್ ಮತ್ತು ಜಾಗೇಶ್ವರ ದೇವಾಲಯಗಳಿಗೆ ನಾನು ಹಿಂತಿರುಗುವುದು ಬಹಳ ವಿಶೇಷ ಅನುಭವವಾಗಿದೆ: ಪ್ರಧಾನಮಂತ್ರಿ
Posted On:
14 OCT 2023 11:52AM by PIB Bengaluru
ಉತ್ತರಾಖಂಡದ ಕುಮಾನ್ ಪ್ರದೇಶದಲ್ಲಿನ ಪಾರ್ವತಿ ಕುಂಡ್ ಮತ್ತು ಜಾಗೇಶ್ವರ ದೇವಾಲಯಗಳನ್ನು ಪ್ರತಿಯೊಬ್ಬರೂ ಭೇಟಿ ಮಾಡಿ ನೋಡಲೇಬೇಕಾದ ಸ್ಥಳವೆಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಿಫಾರಸು ಮಾಡಿದ್ದಾರೆ.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ:
" ಉತ್ತರಾಖಂಡದಲ್ಲಿ ಭೇಟಿ ನೀಡಲೇಬೇಕಾದ ಒಂದು ಸ್ಥಳವಿದ್ದರೆ ಅದು ಯಾವ ಸ್ಥಳವಾಗಿದೆ ಎಂದು ಯಾರಾದರೂ ನನ್ನನ್ನು ಕೇಳಿದರೆ - ನಾನು ಹೇಳುತ್ತೇನೆ, ನೀವು ರಾಜ್ಯದ ಕುಮಾವೂನ್ ಪ್ರದೇಶದ ಪಾರ್ವತಿ ಕುಂಡ್ ಮತ್ತು ಜಾಗೇಶ್ವರ ದೇವಾಲಯಗಳಿಗೆ ಭೇಟಿ ನೀಡಬೇಕು. ಪ್ರಕೃತಿ ಸೌಂದರ್ಯ ಮತ್ತು ದೈವಿಕತೆ ಇಲ್ಲಿ ಬೀಡುಬಿಟ್ಟು ಹೋಗಿದೆ. ನೀವು ಮಂತ್ರಮುಗ್ಧರಾಗುತ್ತೀರಿ.
ಸಹಜವಾಗಿ, ಉತ್ತರಾಖಂಡವು ಭೇಟಿ ನೀಡಲು ಯೋಗ್ಯವಾದ ಅನೇಕ ಪ್ರಸಿದ್ಧ ಸ್ಥಳಗಳನ್ನು ಹೊಂದಿದೆ ಮತ್ತು ನಾನು ಆಗಾಗ್ಗೆ ಉತ್ತರಾಖಂಡ ರಾಜ್ಯಕ್ಕೆ ಭೇಟಿ ನೀಡಿದ್ದೇನೆ. ಇದು ಅತ್ಯಂತ ಸ್ಮರಣೀಯ ಅನುಭವಗಳಾದ ಕೇದಾರನಾಥ ಮತ್ತು ಬದರಿನಾಥದ ಪವಿತ್ರ ಸ್ಥಳಗಳನ್ನು ಒಳಗೊಂಡಿದೆ. ಆದರೆ, ಹಲವು ವರ್ಷಗಳ ನಂತರ ಪಾರ್ವತಿ ಕುಂಡ್ ಮತ್ತು ಜಾಗೇಶ್ವರ ದೇವಾಲಯಗಳಿಗೆ ನಾನು ಮರಳಿ ಭೇಟಿ ನೀಡಿರುವುದು ವಿಶೇಷ ಅನುಭವವಾಗಿದೆ.”
(Release ID: 1967715)
Visitor Counter : 106
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam