ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ದೇಶಾದ್ಯಂತ ನನ್ನ ಕುಟುಂಬ ಸದಸ್ಯರೊಂದಿಗೆ ಸಂಪರ್ಕ ಸಾಧಿಸಲು ವಾಟ್ಸಾಪ್ ನನಗೆ ಮತ್ತೊಂದು ಪ್ರಬಲ ಮಾಧ್ಯಮವಾಗಿದೆ: ಪ್ರಧಾನಮಂತ್ರಿ ನರೇಂದ್ರ ಮೋದಿ

ಪ್ರಕಟಣಾ ದಿನಾಂಕ: 09 OCT 2023 6:31PM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ದೇಶಾದ್ಯಂತ ಇರುವ ನನ್ನ ಕುಟುಂಬ ಸದಸ್ಯರೊಂದಿಗೆ ಸಂಪರ್ಕ ಸಾಧಿಸಲು ವಾಟ್ಸಾಪ್ ನನಗೆ ಮತ್ತೊಂದು ಪ್ರಬಲ ಮಾಧ್ಯಮವಾಗುತ್ತಿದೆ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ತಮ್ಮ ವಾಟ್ಸಾಪ್ ಚಾನೆಲ್‌ನ ಲಿಂಕ್ ನ್ನು ಸಹ ಹಂಚಿಕೊಂಡಿದ್ದಾರೆ.

ಇದನ್ನು ಟ್ವೀಟ್ ಮೂಲಕ ತಿಳಿಸಿರುವ ಅವರು,“ದೇಶಾದ್ಯಂತ ನನ್ನ ಕುಟುಂಬ ಸದಸ್ಯರೊಂದಿಗೆ ಸಂಪರ್ಕ ಸಾಧಿಸಲು ವಾಟ್ಸಾಪ್ ನನಗೆ ಮತ್ತೊಂದು ಪ್ರಬಲ ಮಾಧ್ಯಮವಾಗುತ್ತಿದೆ. ನನ್ನ ಈ ಚಾನಲ್ ಮೂಲಕ ನೀವು ನನ್ನೊಂದಿಗೆ ಸಂಪರ್ಕ ಸಾಧಿಸಬಹುದು. ನಿಮ್ಮ ಫೋನ್‌ನಲ್ಲಿ ಕೂಡ ಎಲ್ಲಾ ನವೀಕರಣ ಸೌಲಭ್ಯಗಳನ್ನು ಕೂಡಲೇ ಪಡೆದುಕೊಳ್ಳಿ'' ಎಂದು ಬರೆದುಕೊಂಡಿದ್ದಾರೆ.

https://www.whatsapp.com/channel/0029Va8IaebCMY0C8oOkQT1F

***


(ಪ್ರಕಟಣೆ ಐ.ಡಿ.: 1966555) ವಿಸಿಟರ್ ಕೌಂಟರ್ : 171