ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ದೆಹಲಿಯ ಕೆಂಪು ಕೋಟೆಯಲ್ಲಿ ಭಾಷಣ ವೇಳೆ ಮಾಡಿದ ಘೋಷಣೆಗಳನ್ನು ಪರಿಶೀಲಿಸಲು ಪ್ರಧಾನಿ ಮೋದಿ ಮಹತ್ವದ ಸಭೆ

Posted On: 07 OCT 2023 5:42PM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ದೆಹಲಿಯ ಕೆಂಪುಕೋಟೆ ಭಾಷಣದಲ್ಲಿ ಮಾಡಿದ ಘೋಷಣೆಗಳನ್ನು ಪರಿಶೀಲಿಸಲು ಮಹತ್ವದ ಸಭೆ ನಡೆಸಿದರು.

ಪ್ರಧಾನಿ ಮೋದಿಯವರು ಕಳೆದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ವಸತಿ ಸೌಲಭ್ಯ ಕಲ್ಪಿಸಲು ಕೈಗೆಟುಕುವ ರೀತಿಯಲ್ಲಿ ಸಾಲವನ್ನು ನೀಡುವ ಬಗ್ಗೆ ಖಾತರಿಪಡಿಸಿದ್ದರು. ಈ ಘೋಷಣೆಗೆ ಅನುಗುಣವಾಗಿ, ಯೋಜನೆಯನ್ನು ಕಾರ್ಯಗತಗೊಳಿಸುವ ಸಿದ್ಧತೆಗಳನ್ನು ಪ್ರಧಾನ ಮಂತ್ರಿ ಪರಿಶೀಲಿಸಿದರು.

ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿಯವರು ಮನೆಗಳಿಗೆ ಸೌರಶಕ್ತಿ ಸಂಪರ್ಕ ಒದಗಿಸುವ ಬಗ್ಗೆ ಪ್ರಸ್ತಾಪಿಸಿದ್ದರು. ಈ ಯೋಜನೆಯನ್ನು ಸಹ ಕಾರ್ಯಗತಗೊಳಿಸಲು ಸಿದ್ಧತೆಗಳನ್ನು ಪರಿಶೀಲಿಸಿದರು.

https://indianexpress.com/article/opinion  “
 

 ***


(Release ID: 1965538) Visitor Counter : 94