ಪ್ರಕಟಣಾ ದಿನಾಂಕ:
04 OCT 2023 7:22PM by PIB Bengaluru
ಹ್ಯಾಂಗ್ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಪುರುಷರ 5000 ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅವಿನಾಶ್ ಸಾಬ್ಲೆ ಅವರನ್ನು ಅಭಿನಂದಿಸಿದರು.
ಪ್ರಧಾನಮಂತ್ರಿಯವರು ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹೇಳಿದ್ದಾರೆ
"ಪುರುಷರ 5000 ಮೀ ಓಟದಲ್ಲಿ ಅವಿನಾಶ್ ( @avinash3000m ) ಅವರಿಗೆ ಮಹತ್ತರವಾದ ಬೆಳ್ಳಿ ಪದಕ ಲಭಿಸಿದೆ. ಇಂತಹ ಅದ್ಬುತ ಕ್ರೀಡಾ ಪ್ರದರ್ಶನ ನೀಡಿದ ಅವಿನಾಶ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಅವರು ಅತ್ಯುತ್ತಮ ಚಾಂಪಿಯನ್! ”…
***