ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಭಾರತದ ಜಿ20 ಅಧ್ಯಕ್ಷತೆಯ ಕುರಿತು ಇ-ಪುಸ್ತಕ "ಪೀಪಲ್ಸ್ ಜಿ20" ವನ್ನು ಶ್ರೀ ಅಪೂರ್ವ ಚಂದ್ರ ಅವರು ಅನಾವರಣಗೊಳಿಸಿದರು
Posted On:
18 SEP 2023 4:08PM by PIB Bengaluru
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಅವರು ಇಂದು ನವದೆಹಲಿಯಲ್ಲಿ ಭಾರತದ ಜಿ20 ಅಧ್ಯಕ್ಷೀಯತೆ ಕುರಿತಾದ ಇ-ಪುಸ್ತಕ "ಪೀಪಲ್ಸ್ ಜಿ20" ಅನ್ನು ಅನಾವರಣಗೊಳಿಸಿದರು. ಪ್ರೆಸ್ ಇನ್ಫೋರ್ಮೇಶನ್ ಬ್ಯೂರೋ ಇದರ ಪ್ರಧಾನ ಮಹಾನಿರ್ದೇಶಕರು ಶ್ರೀ ಮನೀಶ್ ದೇಸಾಯಿ ಮತ್ತು ಐ & ಬಿ ಹಾಗೂ ಪಿಐಬಿ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪುಸ್ತಕವು ಭಾರತದ ಜಿ20 ಅಧ್ಯಕ್ಷತೆಯ ಸಂಪೂರ್ಣ ಪ್ರಯಾಣಗಾಥೆಯನ್ನು ಪ್ರಸ್ತುತಪಡಿಸುತ್ತಿದೆ. ಪುಸ್ತಕವು ಮೂರು ಭಾಗಗಳನ್ನು ಒಳಗೊಂಡಿದೆ, ಮೊದಲ ಭಾಗವು ಹೊಸದಿಲ್ಲಿಯಲ್ಲಿ ಸೆಪ್ಟೆಂಬರ್ 9-10, 2023 ರ ನಡುವೆ ನಡೆದ ಸ್ಮಾರಕ ಜಿ20 ಶೃಂಗಸಭೆಯೊಂದಿಗೆ ವ್ಯವಹರಿಸುತ್ತದೆ. ಪುಸ್ತಕವು ಜಿ20 ರ ರಚನೆ ಮತ್ತು ಕಾರ್ಯನಿರ್ವಹಣೆಯನ್ನು ಒಳಗೊಂಡಿದೆ ಮತ್ತು ಭಾರತದ ಅಧ್ಯಕ್ಷತೆಯ ತಂಡಗಳ ಅಡಿಯಲ್ಲಿ ತೆಗೆದುಕೊಳ್ಳಲಾದ ಉಪಕ್ರಮಗಳನ್ನು ವಿವರಿಸುತ್ತದೆ.
ಎರಡನೇ ಭಾಗವು ಶೆರ್ಪಾ ಮತ್ತು ಫೈನಾನ್ಸ್ ಟ್ರ್ಯಾಕ್ ನ ಅಡಿಯಲ್ಲಿ ವಿವಿಧ ಕಾರ್ಯ ಗುಂಪುಗಳ ಸಭೆಗಳ ಸಾರಾಂಶವನ್ನು ಒದಗಿಸುತ್ತದೆ ಜೊತೆಗೆ ಭಾರತವು ಅಧ್ಯಕ್ಷತೆ ಹೊಂದಿ, ಅಧಿಕಾರ ವಹಿಸಿಕೊಂಡ ನಂತರ ಕಳೆದ ವರ್ಷ ದೇಶಾದ್ಯಂತ ನಡೆದ ಎಂಗೇಜ್‌ಮೆಂಟ್ ಗುಂಪುಗಳ ಸಭೆಗಳ ವಿವರಗನ್ನು ಒದಗಿಸುತ್ತದೆ.
ಕೊನೆಯ ಭಾಗವು ಭಾರತದ 20 ಅಧ್ಯಕ್ಷತೆಯನ್ನು ಜನ-ಚಾಲಿತ ಆಂದೋಲನವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ದೇಶಾದ್ಯಂತ ಕಳೆದ ವರ್ಷದಲ್ಲಿ ನಡೆದ ಜನ-ಭಾಗಿದರಿ ಕಾರ್ಯಕ್ರಮಗಳ ಫೋಟೋ ಪ್ರಬಂಧವನ್ನು ಪ್ರಸ್ತುತಪಡಿಸುತ್ತದೆ.
ಕೆಳಗಿನ ಜಾಲತಾಣ ಕೊಂಡಿ ಮೂಲಕ ಪುಸ್ತಕವನ್ನು ಪಡೆಯಬಹುದು:
https://static.pib.gov.in/WriteReadData/userfiles/People_g20_flipbook/index.html
********
(Release ID: 1958534)
Visitor Counter : 100
Read this release in:
English
,
Urdu
,
Marathi
,
Hindi
,
Assamese
,
Punjabi
,
Gujarati
,
Odia
,
Tamil
,
Telugu
,
Malayalam