ಪ್ರಧಾನ ಮಂತ್ರಿಯವರ ಕಛೇರಿ

​​​​​​​ಹಿಂದಿ ಚಲನ ಚಿತ್ರಗಳ ಸಂಭಾಷಣೆಗಳೊಂದಿಗೆ ಹಿಂದಿ ದಿನವನ್ನು ಆಚರಿಸಿದ ಇಸ್ರೇಲ್ ರಾಯಭಾರ ಕಚೇರಿಯನ್ನು ಶ್ಲಾಘಿಸಿದ ಪ್ರಧಾನಿ

Posted On: 14 SEP 2023 10:02PM by PIB Bengaluru

ಹಿಂದಿ ಚಲನ ಚಿತ್ರಗಳ ಪ್ರಸಿದ್ಧ ಸಂಭಾಷಣೆಗಳ ಮೂಲಕ ಹಿಂದಿ ದಿನವನ್ನು ಆಚರಿಸಿದ ಇಸ್ರೇಲ್ ರಾಯಭಾರ ಕಚೇರಿಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ರಾಯಭಾರ ಕಚೇರಿಯ ಪ್ರಯತ್ನ ಅಗಾಧವಾಗಿದೆ ಎಂದು ಪ್ರಧಾನಿ ಮೋದಿ ಕೊಂಡಾಡಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು,

“ಪರಂಪರೆ, ಪ್ರತಿಷ್ಠೆ, ಶಿಸ್ತು... ಇವು ಇಸ್ರೇಲ್ ರಾಯಭಾರ ಕಚೇರಿಯ ಮೂರು ಆಧಾರ ಸ್ತಂಭಗಳು. ಭಾರತೀಯ ಚಲನ ಚಿತ್ರಗಳ ಸಂಭಾಷಣೆಗಳ ಮೂಲಕ ಹಿಂದಿಗೆ ಸಂಬಂಧಿಸಿದಂತೆ ಇಸ್ರೇಲಿ ರಾಯಭಾರ ಕಚೇರಿಯ ಈ ಪ್ರಯತ್ನವು ಅಗಾಧವಾಗಿದೆ.'' ಎಂದು ಬರೆದಿದ್ದಾರೆ.

 

***



(Release ID: 1958399) Visitor Counter : 80