ಪ್ರಧಾನ ಮಂತ್ರಿಯವರ ಕಛೇರಿ
ಪ್ರಕಾಶ್ ಪುರಬ್ ಸಂದರ್ಭದಲ್ಲಿ ಶುಭ ಕೋರಿದ ಪ್ರಧಾನಿ
Posted On:
16 SEP 2023 1:27PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ರೀ ಗುರು ಗ್ರಂಥ ಸಾಹಿಬ್ ನ ಪ್ರಕಾಶ್ ಪುರಬ್ ಸಂದರ್ಭದಲ್ಲಿ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.
ಈ ಸಂಬಂಧ ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ:
"ಶ್ರೀ ಗುರು ಗ್ರಂಥ ಸಾಹಿಬ್ ಕಾಲಾತೀತ ಜ್ಞಾನ ಮತ್ತು ಮಿತಿಯಿಲ್ಲದ ಸಹಾನುಭೂತಿಯ ದೀಪವಾಗಿ ನಿಂತಿದೆ. ದೈವತ್ವದಲ್ಲಿ ಮುಳುಗಿರುವ ಅದರ ಪದ್ಯಗಳು ಸಮಯ ಮತ್ತು ಗಡಿಗಳನ್ನು ಮೀರಿ, ಲಕ್ಷಾಂತರ ಜನರನ್ನು ಪ್ರೀತಿ, ಏಕತೆ ಮತ್ತು ಶಾಂತಿಯ ಮಾರ್ಗದ ಕಡೆಗೆ ಕರೆದೊಯ್ಯುತ್ತವೆ. ಇದು ಮಾನವೀಯತೆಯನ್ನು ಅಪ್ಪಿಕೊಳ್ಳಲು, ನಿಸ್ವಾರ್ಥ ಸೇವೆಯನ್ನು ಪೋಷಿಸಲು ಮತ್ತು ಜೀವನದ ಪ್ರತಿಯೊಂದು ಅಂಶದಲ್ಲೂ ಸಾಮರಸ್ಯವನ್ನು ಹುಡುಕಲು ನಮ್ಮನ್ನು ಪ್ರೇರೇಪಿಸುತ್ತದೆ. ಶ್ರೀ ಗುರು ಗ್ರಂಥ ಸಾಹಿಬ್ ನ ಪ್ರಕಾಶ್ ಪುರಬ್ ಗೆ ನನ್ನ ಶುಭಾಶಯಗಳು,’’ ಎಂದಿದ್ದಾರೆ.
(Release ID: 1957995)
Visitor Counter : 97
Read this release in:
Marathi
,
English
,
Urdu
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam