ಪ್ರಧಾನ ಮಂತ್ರಿಯವರ ಕಛೇರಿ
ಜಿ-20 ಶೃಂಗ ಸಭೆಯ 2 ನೇ ಅಧಿವೇಶನದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲೀಷ್ ಅನುವಾದ
Posted On:
09 SEP 2023 8:38PM by PIB Bengaluru
ನಾವು ಇದೀಗ ಒಳ್ಳೆಯ ಸುದ್ದಿಯನ್ನು ಸ್ವೀಕರಿಸಿದ್ದೇವೆ. ನಮ್ಮ ತಂಡದ ಕಠಿಣ ಪರಿಶ್ರಮ ಮತ್ತು ನೀವೆಲ್ಲರೂ ನೀಡಿದ ಬೆಂಬಲದ ಕಾರಣದಿಂದಾಗಿ ನವದೆಹಲಿಯ ಜಿ-20 ನಾಯಕರು ಜಿ-20 ಶೃಂಗಸಭೆಯ ಘೋಷಣೆಗೆ ಸಮ್ಮತಿ ನೀಡಿದ್ದಾರೆ.
ನಾಯಕರ ಘೋಷಣೆಯನ್ನು ಸಹ ಅಂಗೀಕರಿಸುವಂತೆ ನಾನು ಪ್ರಸ್ತಾಪಿಸುತ್ತಿದ್ದೇನೆ. ಈ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಸಹ ಘೋಷಿಸುತ್ತಿದ್ದೇನೆ.
ಈ ಸಂದರ್ಭದಲ್ಲಿ ನಾನು ಇದನ್ನು ಸಾಕಾರಗೊಳಿಸಲು ಅಪಾರ ಪ್ರಯತ್ನ ಮಾಡಿದ್ದರಿಂದಾಗಿ ನಮ್ಮ ಸಚಿವರು, ಶೆರ್ಪಾ ಮತ್ತು ಎಲ್ಲಾ ಅಧಿಕಾರಿಗಳು ಅಭಿನಂದನೆಗೆ ಅರ್ಹರು.
ಮಹನೀಯರೇ, ಗೌರವಾನ್ವಿತರೇ,
ನಮ್ಮ ಸಹಸ್ರಾರು ವರ್ಷಗಳ ಹಿಂದಿನ ಪ್ರಾಚೀನ ವೇದದಲ್ಲಿ ಹೀಗೆ ಹೇಳಿದ್ದಾರೆ “ಓ ದೇವರೇ” ಅಂದರೆ ಇದರ ಅರ್ಥ “ನಾನು ಒಂದೇ: ನಾನು ಅನೇಕನಾಗಲು ಬಿಡಿ” ಎಂಬುದು ಇದರ ವಿವರಣೆ.
“ನಾನು” ಎಂಬುದನ್ನು ತೆಗೆಯಬೇಕು. “ನಾವು” ಎಂದರೆ ಸೃಷ್ಟಿ, ನಾವೀನ್ಯತೆ ಮತ್ತು ಕಾರ್ಯಸಾಧ್ಯವಾದ ಪರಿಹಾರಗಳನ್ನು ಇದು ಹೊಂದಿದೆ.
“ನಾನು” ಎಂಬುದರಿಂದ “ನಾವು” ಅಂದರೆ ವೈಯಕ್ತಿಕತೆಯಿಂದ ಎಲ್ಲವನ್ನೂ ಆಲೋಚಿಸುವ ಅರ್ಥ ಇದಾಗಿದ್ದು, “ನಾನು” ಎಂಬುದರಿಂದ “ನಾವೆಲ್ಲಾ” ಎಂಬ ಯೋಗಕ್ಷೇಮವನ್ನು ಇದು ಒಳಗೊಂಡಿದೆ. ನಾವು ಈ ಕುರಿತು ಒತ್ತು ನೀಡಬೇಕು.
ನಾವು ಜಗತ್ತಿನ ಪ್ರತಿಯೊಂದು ವರ್ಗ, ಪ್ರತಿಯೊಂದು ದೇಶ, ಪ್ರತಿಯೊಂದು ಸಮಾಜ ಮತ್ತು ವಲಯವನ್ನು ಇದು ಒಳಗೊಳ್ಳಬೇಕು.
ಇದು ಒಂದು ಕುಟುಂಬ ಎಂಬ ಪ್ರಜ್ಞೆಯ ಪರಿಕಲ್ಪನೆಯಾಗಿದೆ. ಪ್ರತಿಯೊಂದು ಕುಟುಂಬ ತನ್ನದೇ ಆದ ಬೆಂಬಲ ವ್ಯವಸ್ಥೆಯನ್ನು ಹೊಂದಿರುತ್ತದೆ. ನಾವೆಲ್ಲವರೂ ಒಟ್ಟಿಗೆ ಜಾಗತಿಕ ಬೆಂಬಲ ವ್ಯವಸ್ಥೆಯನ್ನು ಕಟ್ಟುವ ಅಗತ್ಯವಿದೆ.
ಯಾರೊಬ್ಬರ ಸಂತೋಷದಿಂದ ನಾವು ಸಂತಸ ಹೊಂದುವಂತಾಗುವ ಮನೋಸ್ಥಿತಿಯನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಮತ್ತು ಮತ್ತೊಬ್ಬರ ದುಃಖ ನಮ್ಮನ್ನು ಸಮಾನವಾಗಿ ದುಃಖಿಗಳನ್ನಾಗಿ ಮಾಡಬೇಕು.
ನಾವು ಒಂದು ಕುಟುಂಬದ ಚಿಂತನೆ ಮಾಡಿದರೆ, ಅದು ಪ್ರತಿಯೊಬ್ಬ ಸದಸ್ಯರನ್ನು ಸಬಲೀಕರಣಗೊಳಿಸುವಂತಿರಬೇಕು ಎಂಬುದನ್ನು ನಮ್ಮ ಮನಸ್ಸಿನಲ್ಲಿರಿಸಿಕೊಳ್ಳಬೇಕು. ಈ ಸ್ಫೂರ್ತಿಯಿಂದ ಭಾರತ ಬೃಹತ್ ಜಾಗತಿಕ ಕುಟುಂಬದೊಂದಿಗೆ ತನ್ನ ಅನುಭವಗಳನ್ನು ಹಂಚಿಕೊಳ್ಳಲು ಬಯಸುತ್ತದೆ.
ನಾವು ಭಾರತೀಯರು ಎಲ್ಲವನ್ನೊಳಗೊಂಡ ಅಭಿವೃದ್ಧಿ ಮತ್ತು ಸುಸ್ಥಿರತೆಯಲ್ಲಿ ತಂತ್ರಜ್ಞಾನದ ಸೇತುವೆಯನ್ನು ನಿರ್ಮಿಸಿದ್ದೇವೆ. ಎಲ್ಲವನ್ನೊಳಗೊಂಡ ಪಾರದರ್ಶಕತೆಯಡಿ ಬ್ಯಾಂಕ್ ಖಾತೆ, ಆಧಾರ್ ಗುರುತು ಮತ್ತು ಮೊಬೈಲ್ ದೂರವಾಣಿಯ ಅಭಿವೃದ್ಧಿಯ ಉದ್ದೇಶಿತ ಮಧ್ಯಸ್ಥಿಕೆಗಳಾದ ಮೂರು ಹಂತದ ಜಾಮ್ ವ್ಯವಸ್ಥೆಯನ್ನು ಭಾರತ ಅಭಿವೃದ್ಧಿಪಡಿಸಿದೆ.
ಇಂತಹ ಮೂರು ಹಂತದ ಜಾಮ್ ಗೆ ವಿಶ್ವಬ್ಯಾಂಕ್ ಸಹ ಮನ್ನಣೆ ನೀಡಿದ್ದು, ಕೇವಲ ಆರು ವರ್ಷಗಳಲ್ಲಿ ಹಣಕಾಸು ಒಳಗೊಳ್ಳುವಿಕೆಯ ಗುರಿ ಸಾಧನೆ ಮಾಡಿದ್ದೇವೆ. ಈ ಸಾಧನೆಗಾಗಿ ಹಿಂದೆ 47 ವರ್ಷ ತೆಗೆದುಕೊಳ್ಳಲಾಗಿತ್ತು.
ಇಂತಹ ಮಾದರಿಯಿಂದ ಕಳೆದ ಒಂದು ದಶಕದಲ್ಲಿ ಭಾರತ 360 ಶತಕೋಟಿ ಡಾಲರ್ ಮೊತ್ತವನ್ನು ನೇರವಾಗಿ ಅಗತ್ಯವಿರುವವರಿಗೆ ವರ್ಗಾವಣೆ ಮಾಡಿದೆ. ಇದರಿಂದ ಸುಮಾರು 33 ಶತಕೋಟಿ ಡಾಲರ್ ಸೋರಿಕೆ ತಡೆಗಟ್ಟಲಾಗಿದ್ದು, ಇದು ಜಿಡಿಪಿಯ ಒಟ್ಟಾರೆ 1.25% ರಷ್ಟ್ರು.
ಸಹಜವಾಗಿಯೇ ಈ ಮಾದರಿ ಜಾಗತಿಕ ಕುಟುಂಬಕ್ಕೆ ಹೆಚ್ಚಿನ ರೀತಿಯಲ್ಲಿ ವಿಶೇಷವಾಗಿ ಜಾಗತಿಕ ದಕ್ಷಿಣ ಭಾಗಕ್ಕೆ ಲಾಭದಾಯಕವಾಗಿದೆ.
ಸ್ನೇಹಿತರೇ,
ಭಾರತದ ಯುವ ಸಮೂಹ ಪ್ರತಿಭಾವಂತರಾಗಿದ್ದು, ಒಂದು ಕುಟುಂಬ ಪರಿಕಲ್ಪನೆಗೆ ಯುವ ಪ್ರತಿಭೆಗಳು ಜಗತ್ತಿಗೆ ಉತ್ತಮರೆನಿಸಿದ್ದಾರೆ.
ನಿರ್ಣಾಯಕವಾಗಿರುವ ಜಾಗತಿಕ ಬೆಳವಣಿಗೆಗೆ ಬರುವ ದಿನಗಳಲ್ಲಿ ದೊಡ್ಡ ಮಟ್ಟದ ಕೌಶಲ್ಯವಂತರನ್ನು ದೊಡ್ಡ ಪ್ರಮಾಣದಲ್ಲಿ ಒದಗಿಸಲಿದೆ.
ಆದ್ದರಿಂದ ನಾವು “ಜಾಗತಿಕ ಕೌಶಲ್ಯ ನಕ್ಷೆ”ಯನ್ನು ರೂಪಿಸುವತ್ತ ಮುನ್ನಡೆಯಬೇಕಾಗಿದ್ದು, ಇದು ಕೂಡ ಜಾಗತಿಕ ದಕ್ಷಿಣ ಭಾಗದ ಆದ್ಯತೆಯಾಗಿದೆ.
ಸ್ನೇಹಿತರೇ
ಒಂದು ಕುಟುಂಬದ ಬಗ್ಗೆ ಮಾತನಾಡುವಾಗ ನಮ್ಮ ಜಾಗತಿಕ ಕುಟುಂಬದ ಮುಂದೆ ಇರುವ ಸವಾಲುಗಳನ್ನು ಸಹ ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು.
ನಾವು ಕೋವಿಡ್ ಸಂದರ್ಭದಲ್ಲಿ ಬಹುದೊಡ್ಡ ಜಾಗತಿಕ ಸವಾಲನ್ನು ನೋಡಿದ್ದು, ದಶಕಗಳ ಕಾಲದಿಂದ ನಿರ್ಮಿಸಿದ್ದ ಜಾಗತಿಕ ಪೂರೈಕೆ ಸರಪಳಿ ಸಂಪೂರ್ಣವಾಗಿ ತೆರೆದುಕೊಂಡಿತು.
ಒಂದು ಕುಟುಂಬದ ಪರಿಕಲ್ಪನೆಯಡಿ ಇಂದು ನಾವು ನಂಬಿಕೆ ಮತ್ತು ಪಾರದರ್ಶಕತೆಯ ಜಾಗತಿಕ ಪೂರೈಕೆ ಸರಪಳಿಯನ್ನು ಉತ್ತೇಜಿಸಬೇಕು.
ಇದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ನಾವು ದೇಶಗಳು ಮತ್ತು ಮಾನವೀಯತೆಯನ್ನು ಕೇವಲ ಮಾರುಕಟ್ಟೆಗಳಾಗಿ ನೋಡಲು ಸಾಧ್ಯವಿಲ್ಲ. ನಮಗೆ ಸೂಕ್ಷ್ಮ ಮತ್ತು ದೀರ್ಘಕಾಲೀನ ಧೋರಣೆ ಅಗತ್ಯವಾಗಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಸಾಮರ್ಥ್ಯ ಅಭಿವೃದ್ಧಿಯತ್ತ ನಾವು ವಿಶೇಷ ಗಮನಹರಿಸಬೇಕಾಗುತ್ತದೆ.
ಆದ್ದರಿಂದ ಈಗಿರುವ ಪೂರೈಕೆ ಸರಪಳಿಯನ್ನು ಬಲಗೊಳಿಸುವ ಚೌಕಟ್ಟಿನ ನಕ್ಷೆ ರೂಪಿಸಲು ಭಾರತ ಪ್ರಸ್ತಾಪ ಮಾಡುತ್ತದೆ.
ಜಾಗತಿಕ ಪೂರೈಕೆ ಸರಪಳಿಯನ್ನು ಒಳಗೊಳ್ಳಲು ಸಣ್ಣ ವ್ಯಾಪಾರಿಗಳ ಸಕ್ರಿಯ ಪಾತ್ರವನ್ನು ನಾವು ಒಪ್ಪಿಕೊಳ್ಳಬೇಕು. ನಾವು ಅಗತ್ಯವಾಗಿರುವ ಮಾರುಕಟ್ಟೆ ಮತ್ತು ಮಾಹಿತಿಯನ್ನು ಒದಗಿಸಬೇಕು. ಅದರಿಂದ ಸಣ್ಣ ವ್ಯಾಪಾರಿಗಳ ವ್ಯಾಪಾರದ ವೆಚ್ಚ ತಗ್ಗಲಿದೆ.
ಸ್ನೇಹಿತರೇ
ಒಂದು ಕುಟುಂಬ ಮಂತ್ರವನ್ನು ಮುಂದುವರೆಸುವುದಾದರೆ ಅಭಿವೃದ್ಧಿಶೀಲ ರಾಷ್ಟ್ರಗಳು ಎದುರಿಸುತ್ತಿರುವ ಸಾಲದ ಬಿಕ್ಕಟ್ಟನ್ನು ನಾವು ಸೂಕ್ಷ್ಮವಾಗಿ ಪರಿಹರಿಸಬೇಕು. ಇಂತಹ ಬಿಕ್ಕಟ್ಟಿನಿಂದ ದೇಶಗಳು ಹೊರ ಬರುವಂತಹ ವ್ಯವಸ್ಥೆಯನ್ನು ಸ್ಥಾಪಿಸಬೇಕು ಮತ್ತು ಅಂತಹ ಬಿಕ್ಕಟ್ಟು ಮತ್ತೆ ಎಂದೂ ಎದುರಾಗದಂತೆ ನಾವು ಖಚಿತಪಡಿಸಿಕೊಳ್ಳಬೇಕು.
“ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ತ್ವರಿತಗೊಳಿಸಲು ಕ್ರಿಯಾ ಯೋಜನೆ” ಎಂಬ ಒಪ್ಪಂದ ಇದ್ದು, ಈ ಉದ್ದೇಶಕ್ಕೆ ಹಣಕಾಸು ನೆರವನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಎಲ್ಲರಿಗೂ ನಾನು ಕೃತಜ್ಞತೆ ವ್ಯಕ್ತಪಡಿಸುತ್ತೇನೆ.
ಸ್ನೇಹಿತರೇ
ಒಂದು ಕುಟುಂಬದ ಧೋರಣೆ ಎಂದರೆ ಅದು ಸಮಾನವಾಗಿ “ಸಮಗ್ರ ಆರೋಗ್ಯ ಮತ್ತು ಯೋಗಕ್ಷೇಮ” ವ್ಯವಸ್ಥೆಯನ್ನು ಒಳಗೊಂಡಿದೆ.
ಜಗತ್ತಿನ ಯೋಗಕ್ಷೇಮಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಸಾಂಪ್ರದಾಯಿಕ ಔಷಧಗಳ ಜಾಗತಿಕ ಕೇಂದ್ರವನ್ನು ಭಾರತದಲ್ಲಿ ಸ್ಥಾಪಿಸಲಾಗುತ್ತಿದೆ. ಸಂಪ್ರದಾಯಿಕ ಔಷಧ ದೊರಕಿಸಿಕೊಡಲು ಜಾಗತಿಕ ಬಂಢಾರವನ್ನು ಸ್ಥಾಪಿಸಲು ನಾವು ಶೀಘ್ರದಲ್ಲೇ ಪ್ರಯತ್ನಶೀಲರಾಗುತ್ತೇವೆ.
ಸ್ನೇಹಿತರೇ
ಜಗತ್ತಿನ ಪ್ರತಿಯೊಂದು ಸಮಾಜ, ತಾಯಂದಿರು ಈ ಕುಟುಂಬದ ಚಾಲನಾ ಶಕ್ತಿಯಾಗಿದ್ದಾರೆ. ಭಾರತದಲ್ಲಿ ಇಂದು ನಾವು ಪ್ರತಿಯೊಂದು ಹಂತದಲ್ಲಿ ಮಹಿಳಾ ನಾಯಕತ್ವ ನೋಡುತ್ತೇವೆ. ಸುಮಾರು 45% ರಷ್ಟು ಸ್ಟೀಮ್ [ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ] ಮಹಿಳಾ ಪದವೀಧರರು ಭಾರತದಲ್ಲಿದ್ದಾರೆ.
ಇಂದು ಅತ್ಯಂತ ಸಂಕಿರ್ಣದಾಯಕ ಭಾರತೀಯ ಬಾಹ್ಯಾಕಾಶ ಅಭಿಯಾನದ ಕಾರ್ಯಕ್ರಮವನ್ನು ಮಹಿಳೆಯರು ಮುನ್ನಡೆಸುತ್ತಿದ್ದಾರೆ.
ಇಂದು ಸುಮಾರು 90 ದಶಲಕ್ಷ ಮಹಿಳೆಯರು ಭಾರತದ ಹಳ್ಳಿಗಳಲ್ಲಿ ಸ್ವಯಂ ಸೇವಾ ಸಂಘಟನೆಗಳನ್ನು ಸೇರಿ ಸಣ್ಣ ಉದ್ದಿಮೆದಾರರಾಗಿ ಮುನ್ನಡೆಯುತ್ತಿದ್ದಾರೆ. ಮಹಿಳಾ ಆಧಾರಿತ ಅಭಿವೃದ್ಧಿ 21 ನೇ ಶತಮಾನದಲ್ಲಿ ನಿರ್ಣಾಯಕ ಚಾಲನಾ ಶಕ್ತಿಯಾಗಲಿದೆ ಎಂದು ನಾನು ನಂಬುತ್ತೇನೆ.
ಸ್ನೇಹಿತರೇ
ಈ ಒಂದು ಕುಟುಂಬ ಅಧಿವೇಶನದಲ್ಲಿ ಮೂರು ಸಲಹೆಗಳನ್ನು ನೀಡಲು ಬಯಸುತ್ತೇನೆ. ಜಗತ್ತಿನ ದೊಡ್ಡ ಮಟ್ಟದ ಕ್ರೀಡಾ ಟೂರ್ನಿಗಳಿಂದ ಬರುವ ಆದಾಯದಲ್ಲಿ 5% ರಷ್ಟು ಮೊತ್ತವನ್ನು ಜಾಗತಿಕ ದಕ್ಷಿಣ ವಲಯದ ರಾಷ್ಟ್ರಗಳಲ್ಲಿ ಮಹಿಳಾ ಕ್ರೀಡಾ ಮೂಲ ಸೌಕರ್ಯ ನಿರ್ಮಿಸಲು ಬಳಕೆ ಮಾಡಬೇಕು. ಇದು ಜಾಗತಿಕವಾಗಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಹೊಸ ಮಾದರಿಯಾಗಿ ಸೇವೆ ಸಲ್ಲಿಸಲು ಸಹಕಾರಿಯಾಗಲಿದೆ.
ಎರಡನೆಯದಾಗಿ ಎಲ್ಲಾ ದೇಶಗಳು ವಿವಿಧ ವರ್ಗದ ವೀಸಾಗಳನ್ನು ಹೇಗೆ ನೀಡುತ್ತವೆಯೋ ಅದೇ ರೀತಿ ನಾವು “ಜಿ-20 ಟಾಲೆಂಟ್ ವೀಸಾ” ವನ್ನು ವಿಶೇಷ ವರ್ಗವಾಗಿ ಸ್ಥಾಪಿಸಬೇಕು.
ಇಂತಹ ವೀಸಾದಿಂದ ನಮ್ಮ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರತಿಭೆಗಳು ಜಾಗತಿಕ ಅವಕಾಶಗಳನ್ನು ಪಡೆದುಕೊಳ್ಳಲು ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ. ಅವರ ಪ್ರತಿಭೆ ಮತ್ತು ಪ್ರಯತ್ನದಿಂದ ನಮ್ಮ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡಬಹುದು.
ಮೂರನೆಯದಾಗಿ ವಿಶ್ವ ಆರೋಗ್ಯ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಜಾಗತಿಕ ಜೈವಿಕ ಬ್ಯಾಂಕ್ ಸ್ಥಾಪಿಸುವುದನ್ನು ಪರಿಗಣಿಸಬೇಕು. ಈ ಜೈವಿಕ ಬ್ಯಾಂಕ್ ಗಳು ವಿಶೇಷವಾಗಿ ಹೃದ್ರೋಗ, ಸಿಕಲ್ ಸೆಲ್ ಅನಿಮಿಯಾ, ಆಂತರಿಕ ಸ್ರಾವದಂತಹ ಅಸ್ವಸ್ಥತೆಗಳು ಮತ್ತು ಸ್ತನ ಕ್ಯಾನ್ಸರ್ ನಂತಹ ಸಮಸ್ಯೆಗಳನ್ನು ತಡೆಗಟ್ಟುವುದನ್ನು ಕೇಂದ್ರೀಕರಿಸುತ್ತವೆ.
ಇಂತಹ ಜಾಗತಿಕ ಜೈವಿಕ ಬ್ಯಾಂಕ್ ಅನ್ನು ಭಾರತದಲ್ಲಿ ನಿರ್ಮಿಸಿದರೆ ನಮಗೆ ಪರಮೋಚ್ಛ ತೃಪ್ತಿ ಸಿಗಲಿದೆ.
ಇದೀಗ ನಾನು ನಿಮ್ಮೆಲ್ಲರ ಆಲೋಚನೆಗಳನ್ನು ಆಲಿಸುತ್ತೇನೆ.
[ಹಕ್ಕು ನಿರಾಕರಣೆ – ಇದು ಪ್ರಧಾನಮಂತ್ರಿಯರ ಹೇಳಿಕೆ. ಮೂಲ ಹೇಳಿಕೆಯನ್ನು ಹಿಂದಿಯಲ್ಲಿ ಮಾಡಲಾಯಿತು.]
***
(Release ID: 1956099)
Visitor Counter : 126
Read this release in:
English
,
Manipuri
,
Gujarati
,
Urdu
,
Marathi
,
Hindi
,
Bengali
,
Assamese
,
Punjabi
,
Odia
,
Tamil
,
Telugu
,
Malayalam