ಹಣಕಾಸು ಸಚಿವಾಲಯ
azadi ka amrit mahotsav

ವಿಶ್ವ ಬ್ಯಾಂಕ್ ಸಿದ್ಧಪಡಿಸಿದ ಜಿ-20 ದಾಖಲೆ ಪತ್ರ(ವರದಿ)ಯಲ್ಲಿ ಭಾರತದ ಪ್ರಗತಿಯನ್ನು ಶ್ಲಾಘಿಸಿದೆ

Posted On: 08 SEP 2023 11:38AM by PIB Bengaluru

ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ(ಡಿಪಿಐ) ಅಭಿವೃದ್ಧಿಯು ಭಾರತದ ಮೇಲೆ ಪರಿವರ್ತನೀಯ  ಸಕಾರಾತ್ಮಕ ಪರಿಣಾಮಗಳನ್ನು ಬೀರಿದೆ, ಎಲ್ಲರನ್ನೂ ಒಳಗೊಂಡ  ಹಣಕಾಸು ಸೇರ್ಪಡೆಯು ಎಲ್ಲೆ ಮೀರಿ ವಿಸ್ತರಿಸಿದೆ. ವಿಶ್ವಬ್ಯಾಂಕ್ ಸಿದ್ಧಪಡಿಸಿದ “ಜಿ-20 ಗ್ಲೋಬಲ್ ಪಾರ್ಟ್‌ನರ್‌ಶಿಪ್ ಫಾರ್ ಫೈನಾನ್ಷಿಯಲ್ ಇನ್‌ಕ್ಲೂಷನ್” ದಾಖಲೆ ಪತ್ರ ಅಥವಾ ವರದಿಯು, ಕಳೆದ ದಶಕಕ್ಕಿಂತ ಮೋದಿ ಸರ್ಕಾರದ ನೇತೃತ್ವದಲ್ಲಿ ಭಾರತದಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ(ಡಿಪಿಐ) ಅಭಿವೃದ್ಧಿಯು ಪರಿವರ್ತನೀಯ ಪರಿಣಾಮಗಳನ್ನು ಉಂಟುಮಾಡಿದೆ ಎಂದು ಶ್ಲಾಘಿಸಿದೆ.

ಮೋದಿ ಸರ್ಕಾರವು ಕೈಗೊಂಡ ಅದ್ಭುತ ಕ್ರಮಗಳು ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ(ಡಿಪಿಐ) ಭೂದೃಶ್ಯ ರೂಪಿಸುವಲ್ಲಿ ಸರ್ಕಾರದ ನೀತಿ ಮತ್ತು ನಿಯಂತ್ರಣ ಕ್ರಮಗಳ ಪ್ರಮುಖ ಪಾತ್ರವನ್ನು ಡಾಕ್ಯುಮೆಂಟ್ ಎತ್ತಿ ತೋರಿಸಿದೆ.

  • ಹಣಕಾಸು ಸೇರ್ಪಡೆ: ಭಾರತದ ಡಿಪಿಐ ವಿಧಾನವನ್ನು ಶ್ಲಾಘಿಸಿರುವ ವಿಶ್ವಬ್ಯಾಂಕ್ ವರದಿ, ಭಾರತವು ಸುಮಾರು 5 ದಶಕಗಳಲ್ಲಿ ಸಾಧಿಸಬೇಕಾದ್ದನ್ನು ಕೇವಲ 6 ವರ್ಷಗಳಲ್ಲಿ ಸಾಧನೆ ಮಾಡಿ ತೋರಿಸಿದೆ ಎಂದು ತಿಳಿಸಿದೆ.
  1. ಜನ್ ಧನ್, ಆಧಾರ್ ಮತ್ತು ಮೊಬೈಲ್(ಜೆಎಎಂ) ತ್ರಿಕೂಟವು ಹಣಕಾಸಿನ ಸೇರ್ಪಡೆ ದರವನ್ನು 2008ರಲ್ಲಿ ಇದ್ದ 25% ನಿಂದ ಕಳೆದ 6 ವರ್ಷಗಳಲ್ಲಿ 80%ಗಿಂತ ಹೆಚ್ಚಿನ ವಯಸ್ಕರಿಗೆ ಹೆಚ್ಚಿಸಿದೆ. ಡಿಪಿಐನಿಂದಾಗಿ ಆರ್ಥಿಕ ಅಭಿವೃದ್ಧಿ ಪ್ರಯಾಣವನ್ನು 47 ವರ್ಷಗಳವರೆಗೆ ಕಡಿಮೆಗೊಳಿಸಿದೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ(ಡಿಪಿಐ) ಅಭಿವೃದ್ಧಿಗಾಗಿ ಅಭಿನಂದನೆಗಳು.
  2. ಡಾಕ್ಯುಮೆಂಟ್ ನಿರ್ದಿಷ್ಟವಾಗಿ ಹೇಳುವುದೇನೆಂದರೆ, “ಹಣಕಾಸು ಸೇರ್ಪಡೆಯ ಈ ಜಿಗಿತದಲ್ಲಿ ಡಿಪಿಐ ಪಾತ್ರ ನಿಸ್ಸಂದೇಹ. ಆದರೆ, ಡಿಪಿಐ ಲಭ್ಯತೆಯ ಮೇಲೆ ನಿರ್ಮಿಸುವ ಇತರ ಪರಿಸರ ವ್ಯವಸ್ಥೆಯ ಅಸ್ಥಿರತೆಗಳ ನಿವಾರಣೆ ಮತ್ತು ನೀತಿಗಳು ನಿರ್ಣಾಯಕವಾಗಿವೆ. ಹೆಚ್ಚು ಸಕ್ರಿಯಗೊಳಿಸುವ ಕಾನೂನು ಮತ್ತು ನಿಯಂತ್ರಕ ಮಾರ್ಗಸೂಚಿಗಳನ್ನು ರೂಪಿಸುವುದು ಇದರಲ್ಲಿ ಸೇರಿದೆ. ಖಾತೆಯ ಮಾಲೀಕತ್ವ ವಿಸ್ತರಿಸಲು ರಾಷ್ಟ್ರೀಯ ನೀತಿಗಳು ಮತ್ತು ಗುರುತಿನ ಪರಿಶೀಲನೆಗಾಗಿ ಆಧಾರ್ ನಿಯಂತ್ರಿಸುವುದು ಸಹ ಒಳಗೊಂಡಿವೆ.
  3. ಪಿಎಂಜೆಡಿವೈ – ಪ್ರಧಾನ ಮಂತ್ರಿಗಳ ಜನ್ ಧನ್ ಯೋಜನೆ ಪ್ರಾರಂಭವಾದಾಗಿನಿಂದ, 2015 ಮಾರ್ಚ್  ನಲ್ಲಿ ಇದ್ದ ಖಾತೆಗಳ ಸಂಖ್ಯೆ 147.2 ದಶಲಕ್ಷದಿಂದ 3 ಪಟ್ಟು ಅಂದರೆ 2022 ಜೂನ್ ವೇಳೆಗೆ 462 ದಶಲಕ್ಷಕ್ಕೆ ಹೆಚ್ಚಾಯಿತು. ಮಹಿಳೆಯರು ಈ ಖಾತೆಗಳಲ್ಲಿ 56 ಪ್ರತಿಶತ ಹೊಂದಿದ್ದಾರೆ. ಅವರ ಪ್ರಮಾಣವೇ 260 ದಶಲಕ್ಷಕ್ಕಿಂತ ಹೆಚ್ಚಿದೆ.
  4. ಜನ್ ಧನ್ ಪ್ಲಸ್ ಕಾರ್ಯಕ್ರಮವು ಕಡಿಮೆ ಆದಾಯದ ಮಹಿಳೆಯರ ಉಳಿತಾಯವನ್ನು ಪ್ರೋತ್ಸಾಹಿಸುತ್ತದೆ, ಇದರ ಪರಿಣಾಮವಾಗಿ 12 ದಶಲಕ್ಷಕ್ಕೂ ಹೆಚ್ಚು ಮಹಿಳಾ ಗ್ರಾಹಕರ (2023 ಏಪ್ರಿಲ್ ಗೆ ಅನ್ವಯವಾಗುವಂತೆ) ಕೇವಲ 5 ತಿಂಗಳ ಸರಾಸರಿ ಬ್ಯಾಲೆನ್ಸ್‌ಗಳಲ್ಲಿ 50% ಹೆಚ್ಚಳವಾಗಿದೆ. 100 ದಶಲಕ್ಷ ಕಡಿಮೆ ಆದಾಯದ ಮಹಿಳೆಯರನ್ನು ಉಳಿತಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ, ಭಾರತದಲ್ಲಿನ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಸರಿಸುಮಾರು 25,000 ಕೋಟಿ ರೂ. ($3.1 ಬಿಲಿಯನ್) ಠೇವಣಿಗಳನ್ನು ಆಕರ್ಷಿಸಬಹುದು ಎಂದು ಅಂದಾಜಿಸಲಾಗಿದೆ.
  • ಸರ್ಕಾರದಿಂದ ವ್ಯಕ್ತಿಗೆ (ಜಿ2ಪಿ) ಪಾವತಿಗಳು:
  1. ಕಳೆದ ದಶಕದಲ್ಲಿ ಭಾರತವು ಡಿಪಿಐ ಅಭಿವೃದ್ಧಿಪಡಿಸಿದ ವಿಶ್ವದ ಅತಿದೊಡ್ಡ ಡಿಜಿಟಲ್ ಜಿ2ಪಿ ವಾಸ್ತುಶಿಲ್ಪಿಯಾಗಿ ಹೊರಹೊಮ್ಮಿದೆ.
  2. ಈ ವಿಧಾನವು ಕೇಂದ್ರ ಸರ್ಕಾರದ 53 ಸಚಿವಾಲಯಗಳಿಂದ 312 ಪ್ರಮುಖ ಯೋಜನೆಗಳ ಮೂಲಕ ನೇರವಾಗಿ ಫಲಾನುಭವಿಗಳಿಗೆ ಸುಮಾರು 361 ಶತಕೋಟಿ ಡಾಲರ್ ಮೊತ್ತದ ನೇರ ನಗದು ವರ್ಗಾವಣೆಯನ್ನು ಬೆಂಬಲಿಸಿದೆ.
  3. 2022 ಮಾರ್ಚ್ ಹೊತ್ತಿಗೆ, ಇದು ಒಟ್ಟು 33 ಶತಕೋಟಿ ಡಾಲರ್ ಹಣದ ಉಳಿತಾಯಕ್ಕೆ ಕಾರಣವಾಯಿತು, ಇದು ಜಿಡಿಪಿಯ ಸುಮಾರು 1.14 ಪ್ರತಿಶತಕ್ಕೆ ಸಮನಾಗಿದೆ.
  • ಯುಪಿಐ:
  1. ಸುಮಾರು 14.89 ಟ್ರಿಲಿಯನ್ ಮೌಲ್ಯದ 9.41 ಶತಕೋಟಿಗೂ ಹೆಚ್ಚು ವಹಿವಾಟುಗಳನ್ನು 2023 ಮೇ ತಿಂಗಳಲ್ಲೇ ನಡೆಸಲಾಗಿದೆ.
  2. 2022–23ರ ಆರ್ಥಿಕ ವರ್ಷದಲ್ಲಿ ಯುಪಿಐ ವಹಿವಾಟಿನ ಒಟ್ಟು ಮೌಲ್ಯವು ಭಾರತದ ನಾಮಮಾತ್ರ(ನಾಮಿನಲ್) ಜಿಡಿಪಿಯ ಸುಮಾರು 50 ಪ್ರತಿಶತದಷ್ಟಿತ್ತು.
  • ಖಾಸಗಿ ವಲಯಕ್ಕೆ ಡಿಪಿಐಗಳ ಸಂಭಾವ್ಯ ವರ್ಧಿತ ಮೌಲ್ಯ:
  1. ಭಾರತದಲ್ಲಿನ ಡಿಪಿಐ ಸಂಕೀರ್ಣತೆ, ವೆಚ್ಚ ಮತ್ತು ಭಾರತದಲ್ಲಿ ವ್ಯಾಪಾರ ಕಾರ್ಯಾಚರಣೆಗಳಿಗೆ ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುವ ಮೂಲಕ ಖಾಸಗಿ ಸಂಸ್ಥೆಗಳ ದಕ್ಷತೆ ಹೆಚ್ಚಿಸಿದೆ.
  2. ಕೆಲವು ಬ್ಯಾಂಕಿಂಗ್ ಯೇತರ ಹಣಕಾಸು ಸಂಸ್ಥೆಗಳು ಸಹ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ನೀಡುವ ಸಾಲದಲ್ಲಿ 8% ಹೆಚ್ಚಿನ ಪರಿವರ್ತನೆ ದರವನ್ನು ಸಕ್ರಿಯಗೊಳಿಸಲಾಗಿದೆ, ಸವಕಳಿ ವೆಚ್ಚದಲ್ಲಿ 65% ಉಳಿತಾಯ ಮತ್ತು ವಂಚನೆ ಪತ್ತೆಗೆ ಸಂಬಂಧಿಸಿದ ವೆಚ್ಚದಲ್ಲಿ 66% ಕಡಿತವಾಗಿದೆ.
  3. ಉದ್ಯಮ ಅಂದಾಜಿನ ಪ್ರಕಾರ, ಡಿಪಿಐ ಬಳಕೆಯಿಂದ ಭಾರತದ ಗ್ರಾಹಕರನ್ನು ಸಂಯೋಜಿಸಲು ಅಥವಾ ಪರಿಚಯಿಸಲು ಬ್ಯಾಂಕ್‌ಗಳಿಗೆ ತಗುಲುವ ವೆಚ್ಚವು 23 ಡಾಲರ್ ನಿಂದ 0.1 ಡಾಲರ್ ಗೆ ತಗ್ಗಿದೆ ಅಥವಾ ಕಡಿಮೆಯಾಗಿದೆ.
  • ಕೆವೈಸಿಗಾಗಿ ಬ್ಯಾಂಕ್‌ಗಳಿಗೆ ಅನುಸರಣೆಯ ಕಡಿಮೆ ವೆಚ್ಚ
  1. ಇಂಡಿಯಾ ಸ್ಟಾಕ್ ಕೆವೈಸಿ ಕಾರ್ಯವಿಧಾನಗಳನ್ನು ಡಿಜಿಟೈಸ್ ಮಾಡಿದೆ ಮತ್ತು ಸರಳೀಕರಿಸಿದೆ, ಇದು ವೆಚ್ಚವನ್ನು ಕಡಿಮೆ ಮಾಡುತ್ತದೆ; ಇ-ಕೆವೈಸಿ ಬಳಸುವ ಬ್ಯಾಂಕುಗಳು ತಮ್ಮ ಅನುಸರಣೆಯ ವೆಚ್ಚವನ್ನು 0.12 ಡಾಲರ್ ನಿಂದ 0.06 ಡಾಲರ್ ಗೆ ಇಳಿಸಿವೆ. ವೆಚ್ಚ ಇಳಿಕೆಯು ಕಡಿಮೆ ಆದಾಯದ ಗ್ರಾಹಕರನ್ನು ಸೇವೆಗೆ ಹೆಚ್ಚು ಆಕರ್ಷಕವಾಗಿಸಿದೆ ಮತ್ತು ಹೊಸ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಲಾಭ ತಂದುಕೊಡುತ್ತಿದೆ.
  • ಗಡಿಯಾಚೆಗಿನ ಪಾವತಿಗಳು:
  1. ಭಾರತ ಮತ್ತು ಸಿಂಗಾಪುರದ ನಡುವೆ ಯುಪಿಐ-ಪೇನೌ ಇಂಟರ್‌ಲಿಂಕಿಂಗ್, 2023 ಫೆಬ್ರವರಿಯಿಂದ ಕಾರ್ಯಾರಂಭವಾಗಿದೆ. ಜಿ-20ರ ಆರ್ಥಿಕ ಸೇರ್ಪಡೆ ಆದ್ಯತೆಗಳೊಂದಿಗೆ ಹೊಂದಾಣಿಕೆಯಾಗುತ್ತಿದೆ. ಇದು ವೇಗವಾಗಿ, ಅಗ್ಗದ ದರದಲ್ಲಿ ಮತ್ತು ಹೆಚ್ಚು ಪಾರದರ್ಶಕವಾಗಿ ಗಡಿಯಾಚೆಯ ಪಾವತಿಗಳನ್ನು ಸುಗಮಗೊಳಿಸುತ್ತಿದೆ.
  • ಖಾತೆ ಸಂಗ್ರಾಹಕ (ಎಎ) ಮಾರ್ಗಸೂಚಿ:
  1. ಭಾರತದ ಅಕೌಂಟ್ ಅಗ್ರಿಗೇಟರ್ (ಎಎ) ಫ್ರೇಮ್‌ವರ್ಕ್ ಭಾರತದ ದತ್ತಾಂಶ ಮೂಲಸೌಕರ್ಯ ಬಲಪಡಿಸುವ ಗುರಿ ಹೊಂದಿದೆ, ಗ್ರಾಹಕರು ಮತ್ತು ಉದ್ಯಮಗಳು ತಮ್ಮ ಡೇಟಾವನ್ನು ಎಲೆಕ್ಟ್ರಾನಿಕ್ ಒಪ್ಪಿಗೆ ಚೌಕಟ್ಟಿನ ಮೂಲಕ ತಮ್ಮ ಒಪ್ಪಿಗೆಯೊಂದಿಗೆ ಮಾತ್ರ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಮೂರ್ಗಸೂಚಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿಸುತ್ತದೆ.
  2. ಡೇಟಾ ಹಂಚಿಕೆಗಾಗಿ ಒಟ್ಟು 1.13 ಬಿಲಿಯನ್ ಸಂಚಿತ ಖಾತೆಗಳನ್ನು ಸಕ್ರಿಯಗೊಳಿಸಲಾಗಿದೆ, 2023 ಜೂನ್ ನಲ್ಲಿ 13.46 ದಶಲಕ್ಷ ಸಂಚಿತ ಸಮ್ಮತಿಗಳನ್ನು ಸಂಗ್ರಹಿಸಲಾಗಿದೆ.
  • ದತ್ತಾಂಶ ಸಬಲೀಕರಣ ಮತ್ತು ಸಂರಕ್ಷಣಾ ವಾಸ್ತುಶಿಲ್ಪ(ಡಿಇಪಿಎ)
  1. ಭಾರತದ ಡಿಇಪಿಎ, ವ್ಯಕ್ತಿಗಳಿಗೆ ಅವರ ದತ್ತಾಂಶದ ಮೇಲೆ ನಿಯಂತ್ರಣ  ನೀಡುತ್ತದೆ, ಅದನ್ನು ಪೂರೈಕೆದಾರರ ಜತೆಗೆ ಹಂಚಿಕೊಳ್ಳಲು ಅವರಿಗೆ ಅನುವು ಮಾಡಿಕೊಡುತ್ತದೆ. ಹೊಸಬರು ಮೊದಲೇ ಅಸ್ತಿತ್ವದಲ್ಲಿರುವ ಕ್ಲೈಂಟ್ ಸಂಬಂಧಗಳಲ್ಲಿ ಹೆಚ್ಚು ಹೂಡಿಕೆ ಮಾಡುವ ಅಗತ್ಯವಿಲ್ಲದೆ, ನಾವೀನ್ಯತೆ ಮತ್ತು ಸ್ಪರ್ಧೆಯನ್ನು ಉತ್ತೇಜಿಸುವ ಅಗತ್ಯವಿಲ್ಲದೆಯೇ ಇದು ಸೂಕ್ತ ಉತ್ಪನ್ನ ಮತ್ತು ಸೇವೆಗೆ ಪ್ರವೇಶಿಸಲು ಉತ್ತೇಜಿಜನ ನೀಡುತ್ತದೆ.

****

 

 

 


(Release ID: 1955540) Visitor Counter : 155