ಗ್ರಾಮೀಣಾಭಿವೃದ್ಧಿ ಸಚಿವಾಲಯ

ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯ (ಎ.ಬಿ.ಪಿ.ಎಸ್.) ಪ್ರಗತಿಯನ್ನು ಪರಿಶೀಲಿಸಲಾಗಿದೆ ಮತ್ತು ವೇತನ ಪಾವತಿಯ ಸಂಮಿಶ್ರ ಮಾರ್ಗವನ್ನು (ಎನ್.ಎ.ಸಿ.ಹೆಚ್. ಮತ್ತು ಎ.ಬಿ.ಪಿ.ಎಸ್. ಮಾರ್ಗ) ಡಿಸೆಂಬರ್,31, 2023 ರವರೆಗೆ ಅಥವಾ ಮುಂದಿನ ಆದೇಶದವರೆಗೆ ವಿಸ್ತರಿಸಲಾಗಿದೆ.


ಕೆಲಸಕ್ಕಾಗಿ ಬರುವ ಫಲಾನುಭವಿಗಳಿಗೆ ಆಧಾರ್ ಸಂಖ್ಯೆಯನ್ನು ನೀಡುವಂತೆ ಸೂಚಿಸಬೇಕು ಆದರೆ ಈ ಆಧಾರ ಸಂಖ್ಯೆಯಿಲ್ಲ ಎಂದಾದರೆ ಅವರಿಗೆ ಕೆಲಸವನ್ನು ನಿರಾಕರಿಸಲಾಗುವುದಿಲ್ಲ ಎಂದು ಕೇಂದ್ರ ಗ್ರಾಮೀಣಾಭವೃದ್ಧಿ ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಸ್ಪಷ್ಟಪಡಿಸಿದೆ.

Posted On: 30 AUG 2023 11:34AM by PIB Bengaluru

ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ಪದೇ ಪದೇ ಬದಲಾಯಿಸುವುದರಿಂದ ಮತ್ತು ಹೊಸ ಖಾತೆಯ ಸಂಖ್ಯೆಯನ್ನು ಅದೇ ಸಂಬಂಧಿತ ಕಾರ್ಯಕ್ರಮ ಅಧಿಕಾರಿಯಿಂದ ಸಕಾಲಿಕವಾಗಿ ನವೀಕರಿಸದಿರುವುದು, ಫಲಾನುಭವಿಯಿಂದ ಸಮಯಾಸಮಯಕ್ಕೆ ಹೊಸ ಖಾತೆ, ಬ್ಯಾಂಕ್ ಶಾಖೆಯಿಂದ ವೇತನ ಪಾವತಿಯ ಹಲವಾರು ವಹಿವಾಟುಗಳನ್ನು (ಹಳೆಯ ಖಾತೆ ಸಂಖ್ಯೆಯಿಂದಾಗಿ) ತಿರಸ್ಕರಿಸಲಾಗುತ್ತಿದೆ ಎಂದು ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ. 

ವಿವಿಧ ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಿದಾಗ, ಅಂತಹ ಪಾವತಿ ನಿರಾಕರಣೆಗಳನ್ನು ತಪ್ಪಿಸಲು, ನೇರ ಲಾಭ ವರ್ಗಾವಣೆ (ಡಿ.ಬಿ.ಟಿ.) ಮೂಲಕ ವೇತನ ಪಾವತಿ ಮಾಡಲು ಆಧಾರ್ ಸಂಖ್ಯೆ ಮೂಲಕ ಪಾವತಿಗಳ ಸಂಪರ್ಕ ವ್ಯವಸ್ಥೆಯು (ಎ.ಪಿ.ಬಿ.ಎಸ್.) ಉತ್ತಮ ಮಾರ್ಗವಾಗಿದೆ ಎಂದು ಕಂಡುಬಂದಿದೆ. ಫಲಾನುಭವಿಗಳಿಗೆ ಸಕಾಲದಲ್ಲಿ ವೇತನ ಪಾವತಿಗೆ ಆಧಾರ್ ಸಂಖ್ಯೆ ಮೂಲಕ ಪಾವತಿಗಳ ಸಂಪರ್ಕ ವ್ಯವಸ್ಥೆಯು (ಎ.ಪಿ.ಬಿ.ಎಸ್.)  ಸಹಕಾರಿಯಾಗಲಿದೆ.

ಯೋಜನೆಯ ಮಾಹಿತಿ(ಸ್ಕೀಮ್ ಡೇಟಾಬೇಸ್)ಯಲ್ಲಿ ಒಮ್ಮೆ ಆಧಾರ್ ಸಂಖ್ಯೆಯನ್ನು ಜೋಡಿಸಿ ನವೀಕರಿಸಿದ ನಂತರ, ಫಲಾನುಭವಿಯು ಸ್ಥಳ ಬದಲಾವಣೆ ಅಥವಾ ಬ್ಯಾಂಕ್ ಖಾತೆ ಸಂಖ್ಯೆ ಬದಲಾವಣೆ ಮಾಡಿಕೊಂಡರೂ ಕೂಡಾ ತಮ್ಮ  ಖಾತೆ ಸಂಖ್ಯೆಗಳನ್ನು ಪುನಃ ಪುನಃ ನವೀಕರಿಸಬೇಕಾಗಿಲ್ಲ. ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಿದ ಖಾತೆ ಸಂಖ್ಯೆಗೆ ಹಣವನ್ನು ನೇರವಾಗಿ ವರ್ಗಾಯಿಸಲಾಗುತ್ತದೆ. ವಿಶೇಷವಾಗಿ ಎಂ.ಜಿ.ಎನ್.ಆರ್.ಇ.ಜಿ.ಎ. ಸಂದರ್ಭದಲ್ಲಿ ಕೆಲವೊಂದು ಅಪರೂಪದ ಫಲಾನುಭವಿಗಳು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದ್ದ ಸಂದರ್ಭದಲ್ಲಿ, ಫಲಾನುಭವಿಗಳು ತಮ್ಮ ಖಾತೆಯನ್ನು ಆಯ್ಕೆ ಮಾಡುವ ಅವಕಾಶ ಕೂಡಾ ಹೊಂದಿರುತ್ತಾರೆ.

ಖಾತೆ ಆಧಾರಿತ ಪಾವತಿಯ ಸಂದರ್ಭದಲ್ಲಿ ಯಶಸ್ಸು ಸರಿಸುಮಾರು 98% ಆಗಿದ್ದರೆ, ಡಿಬಿಟಿಗಾಗಿ ಆಧಾರ್ ಸಂಖ್ಯೆಯನ್ನು ಜೋಡಿಸಿ ಸಕ್ರಿಯಗೊಳಿಸಿದಾಗ ಪಾವತಿಯ ಯಶಸ್ಸಿನ ಶೇಕಡಾವಾರು ಸುಮಾರು 99.55% ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್.ಪಿ.ಸಿ.ಐ.) ಬಿಡುಗಡೆ ಮಾಡಿದ ಡೇಟಾವು ತೋರಿಸುತ್ತದೆ. 

ನಿಜವಾದ ಫಲಾನುಭವಿಗಳಿಗೆ ಅವರ ಬಾಕಿ ಪಾವತಿಯನ್ನು ನೇರವಾಗಿ ವರ್ಗಾವಣೆ ಮಾಡಲು ಎ.ಪಿ.ಬಿ.ಎಸ್. ವ್ಯವಸ್ಥೆ ಸಹಾಯ ಮಾಡುತ್ತಿದೆ. ಇದು ನಕಲಿ ಫಲಾನುಭವಿಗಳನ್ನು ತಡೆಯುವ ಮತ್ತು ಹೊರಹಾಕುವ ಮೂಲಕ ಭ್ರಷ್ಟಾಚಾರವನ್ನು ತಡೆಯುವಲ್ಲಿ ಸಹಕಾರಿಯಾಗಿದೆ. ಮಹಾತ್ಮ ಗಾಂಧಿ ಎನ್.ಆರ್.ಇ.ಜಿ.ಎ ಯೋಜನೆಯು ಕೇವಲ ಆಧಾರ್ ಸಂಖ್ಯೆ ಜೋಡಿಸಿ ಸಕ್ರಿಯಗೊಳಿಸಿದ ಪಾವತಿಯನ್ನು ಅಳವಡಿಸಿಕೊಂಡಿಲ್ಲ, ಬದಲಾಗಿ ಈ ಯೋಜನೆಯು ಆಧಾರ್ ಸಂಖ್ಯೆ ಆಧಾರಿತ ಪಾವತಿ ಸೇತುವೆ ವ್ಯವಸ್ಥೆಯನ್ನು (ಎ.ಪಿ.ಬಿ.ಎಸ್.) ಆರಿಸಿಕೊಂಡಿದೆ. 

ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯ (ಎ.ಬಿ.ಪಿ.ಎಸ್.)  ಪ್ರಗತಿಯನ್ನು ಪರಿಶೀಲಿಸಲಾಗಿದೆ ಮತ್ತು ವೇತನ ಪಾವತಿಯ ಸಂಮಿಶ್ರ ಮಾರ್ಗವನ್ನು (ಎನ್.ಎ.ಸಿ.ಹೆಚ್. ಮತ್ತು ಎ.ಬಿ.ಪಿ.ಎಸ್. ಮಾರ್ಗ) ಡಿಸೆಂಬರ್,31, 2023 ರವರೆಗೆ ಅಥವಾ ಮುಂದಿನ ಆದೇಶದವರೆಗೆ ವಿಸ್ತರಿಸಲಾಗಿದೆ. ಕೆಲಸಕ್ಕಾಗಿ ಬರುವ ಫಲಾನುಭವಿಗಳಿಗೆ ಆಧಾರ್ ಸಂಖ್ಯೆಯನ್ನು ನೀಡುವಂತೆ ಮನವಿ ಮಾಡಬೇಕು ಆದರೆ ಒಂದುವೇಳೆ ಇವರು ಆಧಾರ ಸಂಖ್ಯೆ ನೀಡದಿದ್ದರೆ, ಇದರ ಆಧಾರದ ಮೇಲೆ ಅವರಿಗೆ ಕೆಲಸ ಮಾಡಲು ನಿರಾಕರಿಸಬಾರದು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಸ್ಪಷ್ಟಪಡಿಸಿದೆ. ಫಲಾನುಭವಿಯು ಕೆಲಸಕ್ಕಾಗಿ ಬೇಡಿಕೆಯಿಡದಿದ್ದರೆ, ಅಂತಹ ಸಂದರ್ಭದಲ್ಲಿ ಆಧಾರ್ ಆಧಾರಿತ ಪಾವತಿ ಸೇತುವೆ ವ್ಯವಸ್ಥೆಯ(ಎ.ಪಿ.ಬಿ.ಎಸ್.) ಅರ್ಹತೆಯ ಬಗ್ಗೆ ಅವಳ/ಅವನ ಸ್ಥಿತಿಗತಿಗಳು, ಕೆಲಸದ ಬೇಡಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ. ಕಾರ್ಮಿಕರು ಎ.ಪಿ.ಬಿ.ಎಸ್.ಗೆ ಅರ್ಹರಲ್ಲ ಎಂಬ ಕಾರಣಕ್ಕಾಗಿ ಅವರ ಜಾಬ್ ಕಾರ್ಡ್ಗಳನ್ನು ಅಳಿಸಿ ಹಾಕಲಾಗುವುದಿಲ್ಲ ಹಾಗೂ ಅವರ ಕೆಲಸವನ್ನು ತಿರಸ್ಕರಿಸಲಾಗುವುದಿಲ್ಲ.

2017 ರಿಂದ ಮಹಾತ್ಮ ಗಾಂಧಿ ಎನ್.ಆರ್.ಇ.ಜಿ.ಎ. ಯೋಜನೆಯಲ್ಲಿ, ಆಧಾರ್ ಸಂಖ್ಯೆ ಆಧಾರಿತ ಪಾವತಿ ಸೇತುವೆ ವ್ಯವಸ್ಥೆ (ಎ.ಪಿ.ಬಿ.ಎಸ್.)  ಬಳಕೆಯಲ್ಲಿದೆ. ಪ್ರತಿ ವಯಸ್ಕ ನಾಗರೀಕರಿಗೆ ಆಧಾರ್ ಸಂಖ್ಯೆಯ ಸಾರ್ವತ್ರಿಕ ಲಭ್ಯತೆಯ ನಂತರ, ಈಗ ಭಾರತ ಸರ್ಕಾರವು ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ಆಧಾರ್ ಆಧಾರಿತ ಪಾವತಿ ಸೇತುವೆ ವ್ಯವಸ್ಥೆ (ಎ.ಪಿ.ಬಿ.ಎಸ್.) ಯನ್ನು ಸಾರ್ವತ್ರಿಕವಾಗಿ ವಿಸ್ತರಿಸಲು ನಿರ್ಧರಿಸಿದೆ. ಪಾವತಿಯು ಆಧಾರ್ ಆಧಾರಿತ ಪಾವತಿ ಸೇತುವೆ ವ್ಯವಸ್ಥೆ(ಎ.ಪಿ.ಬಿ.ಎಸ್.)ಯೊಂದಿಗೆ ಸಂಯೋಜಿತವಾಗಿರುವ ಖಾತೆಗೆ ಮಾತ್ರ ಎ.ಪಿ.ಬಿ.ಎಸ್. ಮೂಲಕ ಪಾವತಿಯಾಗುತ್ತದೆ, ಅಂದರೆ ಇದು ಪಾವತಿ ವರ್ಗಾವಣೆಯ ಅತ್ಯಂತ ಸುರಕ್ಷಿತ ಮತ್ತು ಅತಿವೇಗವಾದ ಮಾರ್ಗವಾಗಿದೆ.

ಒಟ್ಟು 14.33 ಕೋಟಿ ಸಕ್ರಿಯ ಫಲಾನುಭವಿಗಳ ಪೈಕಿ 13.97 ಕೋಟಿಗೆ ಆಧಾರ್ ಜೊತೆ ಮಾಡಲಾಗಿದೆ. ಈ ಜೊತೆಗೊಳಿಸಿದ ಆಧಾರ್ – ಪಾವತಿ ವ್ಯವಸ್ಥೆಯಲ್ಲಿ, ಒಟ್ಟು 13.34 ಕೋಟಿ ಯಷ್ಟು ಮಂದಿಯ ಆಧಾರ್ ಅನ್ನು ದೃಢೀಕರಿಸಲಾಗಿದೆ ಮತ್ತು 81.89% ಸಕ್ರಿಯ ಕಾರ್ಮಿಕರು ಈಗ ಎ.ಪಿ.ಬಿ.ಎಸ್.ಗೆ ಅರ್ಹರಾಗಿದ್ದಾರೆ. ಜುಲೈ 2023 ರಲ್ಲಿ, ಸುಮಾರು 88.51% ವೇತನ ಪಾವತಿಯನ್ನು ಎ.ಪಿ.ಬಿ.ಎಸ್. ಮೂಲಕ ಮಾಡಲಾಗಿದೆ.  

ಮಹಾತ್ಮ ಗಾಂಧಿ ಎನ್.ಆರ್.ಇ.ಜಿ.ಎ ಯೋಜನೆಯು ಒಂದು ಬೇಡಿಕೆ ಚಾಲಿತ ಯೋಜನೆಯಾಗಿದೆ ಮತ್ತು ವಿವಿಧ ಆರ್ಥಿಕ ಅಂಶಗಳಿಂದ ಪ್ರಭಾವಿತವಾಗಿದೆ. ಎ.ಪಿ.ಬಿ.ಎಸ್.ಗಾಗಿ ಸರಿಯಾದ ಪರಿಸರ - ವ್ಯವಸ್ಥೆಯು ಈಗ ಜಾರಿಯಲ್ಲಿದೆ. ಫಲಾನುಭವಿಗಳಿಗೆ ಎ.ಪಿ.ಬಿ.ಎಸ್. ವ್ಯವಸ್ಥೆಯಿಂದಾಗುವ ಉತ್ತಮ ಪ್ರಯೋಜನಗಳನ್ನು ಪರಿಗಣಿಸಿದಾಗ, ನೇರ ಹಣ ವರ್ಗಾವಣೆಯ ಪಾವತಿಗೆ ಅನುಸರಿಸಬೇಕಾದ ಅತ್ಯುತ್ತಮ ಪಾವತಿ ವ್ಯವಸ್ಥೆ ಇದಾಗಿದೆ ಎಂದು ಕಂಡುಬಂದಿದೆ.  

ಆಧಾರ್ ಸಂಖ್ಯೆ ಆಧಾರಿತ ಪಾವತಿ ವ್ಯವಸ್ಥೆಯು ಫಲಾನುಭವಿಗಳ ಖಾತೆಗೆ ಪಾವತಿಯನ್ನು ನೇರವಾಗಿ ಪಡೆಯುವ ಅತ್ಯುತ್ತಮ ಮಾರ್ಗವಾಗಿದೆ. ಈ ಪಾವತಿ ವ್ಯವಸ್ಥೆಯಲ್ಲಿ ಉತ್ತಮವಾಗಿ ವ್ಯಾಖ್ಯಾನಿಸಲಾದ ಹಣ ವರ್ಗಾವಣೆ ಕ್ರಮಗಳನ್ನು ಅಳವಡಿಸಲಾಗಿದೆ, ಹಾಗೂ ಫಲಾನುಭವಿಗಳು, ಕ್ಷೇತ್ರ ಕಾರ್ಯನಿರ್ವಾಹಕರು ಮತ್ತು ಎಲ್ಲಾ ಇತರ ಮಧ್ಯಸ್ಥಗಾರರ ಪಾತ್ರವನ್ನು , ಜೊತೆಗೆ ಪ್ರತಿ ಹಂತದ ವಿಧಿವಿಧಾನಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ. 

*****
 



(Release ID: 1953470) Visitor Counter : 173