ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಾರಣಾಸಿಯಲ್ಲಿ ನಡೆದ ಜಿ20 ಸಂಸ್ಕೃತಿ ಸಚಿವರ ಸಭೆಯ ಪ್ರತಿನಿಧಿಗಳ ಗೌರವಾರ್ಥವಾಗಿ ಪ್ರದರ್ಶಿಸಲಾದ 'ಸುರ್ ವಸುಧಾ' ರಸಮಂಜರಿ ಕಾರ್ಯಕ್ರಮವನ್ನು ಶ್ಲಾಘಿಸಿದ ಪ್ರಧಾನಮಂತ್ರಿ

प्रविष्टि तिथि: 27 AUG 2023 6:23PM by PIB Bengaluru

ವಾರಣಾಸಿಯಲ್ಲಿ ನಡೆದ ಜಿ20 ಸಂಸ್ಕೃತಿ ಸಚಿವರ ಸಭೆಯ ಪ್ರತಿನಿಧಿಗಳ ಗೌರವಾರ್ಥವಾಗಿ ಪ್ರದರ್ಶಿಸಲಾದ ಸಂಗೀತದ ಅದ್ಭುತವಾದ 'ಸುರ್ ವಸುಧಾ' ಕಾರ್ಯಕ್ರಮವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ಜಿ20 ಸದಸ್ಯ ಮತ್ತು ಆಹ್ವಾನಿತ ದೇಶಗಳ ಸಂಗೀತಗಾರರನ್ನು ಈ ಸಂಗೀತ ರಸಮಂಜರಿ ಒಳಗೊಂಡಿತ್ತು.  ವೈವಿಧ್ಯಮಯ ವಾದ್ಯಗಳು ಮತ್ತು ಗಾಯಕರು ತಮ್ಮ ಸ್ಥಳೀಯ ಭಾಷೆಗಳಲ್ಲಿ ಹಾಡುವುದರೊಂದಿಗೆ ಭಾರತೀಯ ಸಂಗೀತ ಸಂಪ್ರದಾಯಗಳನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.  "ವಸುಧೈವ ಕುಟುಂಬಕಂ" - ಜಗತ್ತು ಒಂದೇ ಕುಟುಂಬ ಎಂಬ ಮನೋಭಾವವನ್ನು ಸಾಕಾರಗೊಳಿಸುವ ಮೋಡಿಮಾಡುವ ರಾಗಗಳು ರಸಮಂಜರಿಯ ವಿಶೇಷತೆಯಾಗಿತ್ತು.

 ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ಭಾರತ ಪ್ರದೇಶಾಭಿವೃದ್ಧಿ ಸಚಿವ ಶ್ರೀ ಜಿ ಕಿಶನ್ ರೆಡ್ಡಿ ಅವರ ತಮ್ಮ ಎಕ್ಸ್ ಖಾತೆಯಲ್ಲಿ ಹಾಕಿದ ಸಂದೇಶಕ್ಕೆ ಪ್ರತಿಕ್ರಿಯೆಯಾಗಿ, ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಹೇಳಿದ್ದಾರೆ;

 "ವಸುಧೈವ ಕುಟುಂಬಕಂ ಸಂದೇಶವನ್ನು ಪ್ರಸಿದ್ಧಿ ಮಾಡಲು ಉತ್ತಮ ಮಾರ್ಗವಾಗಿದೆ ಮತ್ತು ಅದು ಸಹ ಶಾಶ್ವತ ನಗರವಾದ ಕಾಶಿಯಿಂದ!" 

***


(रिलीज़ आईडी: 1952873) आगंतुक पटल : 133
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu , Malayalam