ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಖ್ಯಾತ ರಾಕೆಟ್‌ ವಿಜ್ಞಾನಿ ಮತ್ತು ಗ್ಯಾಲಕ್ಟಿಕ್‌ ಎನರ್ಜಿ ವೆಂಚರ್ಸ್‌ ನ ಸಂಸ್ಥಾಪಕ ‍ಶ್ರೀ ಸಿಯಾಬುಲೆಲಾ ಕ್ಸುಝಾ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ  

Posted On: 24 AUG 2023 11:32PM by PIB Bengaluru

ಖ್ಯಾತ ರಾಕೆಟ್‌ ವಿಜ್ಞಾನಿ ಮತ್ತು ಗ್ಯಾಲಕ್ಟಿಕ್‌ ಎನರ್ಜಿ ವೆಂಚರ್ಸ್‌ ನ  ಸಂಸ್ಥಾಪಕರಾದ ‍ಶ್ರೀ ಸಿಯಾಬುಲೆಲಾ ಕ್ಸುಝಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  2023 ರ ಆಗಸ್ಟ್‌ 24 ರಂದು ಜೋಹಾನ್ಸ್‌ ಬರ್ಗ್‌ ನಲ್ಲಿ ಭೇಟಿ ಮಾಡಿದರು.

ಚಂದ್ರಯಾನ -3 ಅಭಿಯಾನದ ಯಶಸ್ಸಿಗಾಗಿ ಶ್ರೀ ಕ್ಸುಝಾ ಅವರು ಪ್ರಧಾನಮಂತ್ರಿ ಅವರನ್ನು ಅಭಿನಂದಿಸಿದರು. ತಮ್ಮ ಯಶಸ್ಸಿಗೆ ಕಾರಣವಾದ ಡಿಜಿಟಲ್‌ ಇಂಡಿಯಾಗೆ ಅವರು ಮನ್ನಣೆ ನೀಡಿದರು ಮತ್ತು ಭಾರತದಲ್ಲಿ ನಡೆಯುತ್ತಿರುವ ಯೋಜನೆಗಳ ಕುರಿತು ಬೆಳಕು ಚೆಲ್ಲಿದರು.  

ಉಭಯ ನಾಯಕರು ಭವಿಷ್ಯದ ಇಂಧನ ಮತ್ತು ಸುಸ್ಥಿರ ಪರಿಹಾರಗಳನ್ನು ಹುಡುಕುವ ವಿಷಯಗಳ ಬಗ್ಗೆ ಚರ್ಚಿಸಿದರು.

****


(Release ID: 1951953) Visitor Counter : 116