ಬಾಹ್ಯಾಕಾಶ ವಿಭಾಗ

ಚಂದ್ರಯಾನ-3ರ ಸ್ಥಿತಿ ಮತ್ತು ಬುಧವಾರ ಚಂದ್ರನ ಇಳಿಯುವಿಕೆಗೆ ಸಿದ್ಧತೆ ಕುರಿತು ಸಚಿವ ಡಾ ಜಿತೇಂದ್ರ ಸಿಂಗ್ಗೆ ಇಸ್ರೋ ಅಧ್ಯಕ್ಷರ ಜತೆ ಸಮಾಲೋಚನೆ ನಡೆಸಿದರು.

Posted On: 21 AUG 2023 4:34PM by PIB Bengaluru

 ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ, (ಸ್ವತಂತ್ರ ಉಸ್ತುವಾರಿ)  ಪ್ರಧಾನಮಂತ್ರಿ ಸಚಿವಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿಗಳು, ಅಣುಶಕ್ತಿ ಮತ್ತು ಬಾಹ್ಯಾಕಾಶ ಖಾತೆ ಸಚಿವ ಡಾ ಜಿತೇಂದ್ರ ಸಿಂಗ್ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಧ್ಯಕ್ಷರು, ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿ  ಡಾ. ಎಸ್. ಸೋಮನಾಥ್ ಇಂದು ನವದೆಹಲಿಯಲ್ಲಿ ಭೇಟಿ ಮಾಡಿ ಇದೇ 23 ರಂದು ಸಂಜೆ ಚಂದ್ರಯಾನ-3 ರ ಸ್ಥಿತಿ ಮತ್ತು ಚಂದ್ರನ ಇಳಿಯುವಿಕೆಗೆ ಸಿದ್ಧತೆಯ ಬಗ್ಗೆ ಮಾಹಿತಿ ನೀಡಿದರು.

ಚಂದ್ರಯಾನ-3ರ ಆರೋಗ್ಯ ಸ್ಥಿತಿಯ ಕುರಿತು ಸಚಿವರಿಗೆ ಇಸ್ರೋ ಅಧ್ಯಕ್ಷರು ವಿವರಿಸಿದರು ಮತ್ತು ಎಲ್ಲಾ ವ್ಯವಸ್ಥೆಗಳು ಪರಿಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಬುಧವಾರ ಯಾವುದೇ ಅನಿಶ್ಚಯತೆಗಳನ್ನು ನಿರೀಕ್ಷಿಸಲಾಗುವುದಿಲ್ಲ ಎಂದು ಹೇಳಿದರು. ಇನ್ನೆರಡು ದಿನಗಳಲ್ಲಿ ಚಂದ್ರಯಾನ-3ರ ಮೇಲೆ ಸಂಪೂರ್ಣ  ನಿಗಾ ಇಡಲಾಗುವುದು. ಲ್ಯಾಂಡಿಂಗ್ ನ ಅಂತಿಮ ಅನುಕ್ರಮವನ್ನು ಎರಡು ದಿನಗಳ ಮುಂಚಿತವಾಗಿ ಲೋಡ್ ಮಾಡಲಾಗುತ್ತದೆ ಮತ್ತು ಪರೀಕ್ಷಿಸಲಾಗುತ್ತದೆ ಎಂದು ಅವರು ಹೇಳಿದರು.

ಡಾ ಜಿತೇಂದ್ರ ಸಿಂಗ್ ಅವರು ಚಂದ್ರಯಾನ-3 ಈ ಬಾರಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಬಗ್ಗೆ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದರು ಮತ್ತು ಇದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಗ್ರಹಗಳ ಅನ್ವೇಷಣೆಯ ಹೊಸ ಇತಿಹಾಸಕ್ಕೆ ನಾಂದಿ ಹಾಡುತ್ತದೆ ಎಂದು ಆಶಿಸಿದರು.

ಚಂದ್ರಯಾನ-3 ಆಗಸ್ಟ್ 23ರಂದು ಸಂಜೆ 6.04ಕ್ಕೆ ಚಂದ್ರನ ಮೇಲೆ ಇಳಿಯಲಿದೆ ಎಂದು ಇಸ್ರೋ ಹೇಳಿದೆ. ಹಾರ್ಡ್ ಲ್ಯಾಂಡಿಂಗ್ ನಂತರ ಸಂಪರ್ಕವನ್ನು ಕಳೆದುಕೊಂಡಿದ್ದರಿಂದ ಚಂದ್ರಯಾನ-2 ಮಿಷನ್ ಭಾಗಶಃ ಯಶಸ್ವಿಯಾಗಿತ್ತು. ಈಗ ಇಸ್ರೋ ಯಶಸ್ವಿಯಾಗಿ ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ಸಾಗಿದ್ದು ಮತ್ತು ಇನ್ನೂ ಕಕ್ಷೆಯಲ್ಲಿರುವ ಚಂದ್ರಯಾನ-2 ಆರ್ಬಿಟರ್ ನಡುವೆ ದ್ವಿಮುಖ ಸಂವಹನವನ್ನು ಸ್ಥಾಪಿಸಿತು. ಚಂದ್ರಯಾನ-3 ಸೆರೆಹಿಡಿದ ಚಂದ್ರನ ದೂರದ ಪ್ರದೇಶದ ಹೊಸ ಚಿತ್ರಗಳನ್ನು ಇಸ್ರೋ ಹಂಚಿಕೊಂಡಿದೆ.

ಭಾರತವು ಅಮೆರಿಕ, ರಷ್ಯಾ ಮತ್ತು ಚೀನಾ ನಂತರ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ, ಆದರೆ ಭಾರತವು ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡರ್ ಇಳಿಕೆ ಮಾಡಿದ ವಿಶ್ವದ ಏಕೈಕ ದೇಶವಾಗಲಿದೆ.

ಚಂದ್ರಯಾನ-3 ಮಿಷನ್ ನ ಪ್ರಾಥಮಿಕ ಉದ್ದೇಶಗಳು ಮೂರು ಪಟ್ಟು, (ಎ) ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಸಾಫ್ಟ್ ಲ್ಯಾಂಡಿಂಗ್; (b) ಚಂದ್ರನ ಮೇಲೆ ರೋವರ್ ಸಂಚರಿಸುವುದು ಮತ್ತು (c) ಸ್ಥಳದಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ಕೈಗೊಳ್ಳುವುದು.

ಚಂದ್ರಯಾನ ಸರಣಿಯಲ್ಲಿ ಮೊದಲನೆಯದು ಚಂದ್ರಯಾನ-1, ಚಂದ್ರನ ಮೇಲ್ಮೈಯಲ್ಲಿ ನೀರಿನ ಉಪಸ್ಥಿತಿಯನ್ನು ಕಂಡುಹಿಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಡಾ ಜಿತೇಂದ್ರ ಸಿಂಗ್ ನೆನಪಿಸಿಕೊಂಡರು, ಇದು ಜಗತ್ತಿಗೆ ಮತ್ತು ಅತ್ಯಂತ ಪ್ರಮುಖ ಬಾಹ್ಯಾಕಾಶ ಸಂಸ್ಥೆಗಳಿಗೆ ಹೊಸ ಆವಿಷ್ಕಾರವಾಯಿತು. ಅಮೆರಿಕದ NASA (ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್) ಈ ಆವಿಷ್ಕಾರದಿಂದ ಆಕರ್ಷಿತವಾಯಿತು ಮತ್ತು ತಮ್ಮ ಮುಂದಿನ ಪ್ರಯೋಗಗಳಿಗೆ ಇದನ್ನು  ಬಳಸಿಕೊಂಡಿತು.

ಚಂದ್ರಯಾನ-3 ಮಿಷನ್ ಅನ್ನು ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ GSLV ಮಾರ್ಕ್ 3 (LVM 3) ಹೆವಿ-ಲಿಫ್ಟ್ ಉಡಾವಣಾ ವಾಹನದ ಮೂಲಕ ಮಧ್ಯಾಹ್ನ 2:35ಕ್ಕೆ ಉಡಾವಣೆ ಮಾಡಲಾಯಿತು.

*****(Release ID: 1950877) Visitor Counter : 120