ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು 2023ರ ಆಗಸ್ಟ್ 18ರ ಶುಕ್ರವಾರ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿರುವ ʻಸಿಆರ್‌ಪಿಎಫ್ ಗ್ರೂಪ್ ಕೇಂದ್ರʼದಲ್ಲಿ 4ನೇ ಕೋಟಿ ಸಸಿಯನ್ನು ನೆಡಲಿದ್ದಾರೆ


2020ರ ಜುಲೈ 12 ರಂದು ಗೃಹ ಸಚಿವರು ದೇಶಾದ್ಯಂತ ಗಿಡನೆಡುವ ಅಭಿಯಾನಕ್ಕೆ ಚಾಲನೆ ನೀಡಿದ್ದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಶಯದಿಂದ ಪ್ರೇರಿತರಾಗಿ, ಗೃಹ ಸಚಿವರು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ನಾಯಕತ್ವದಲ್ಲಿ, ʻಸಿಎಪಿಎಫ್ʼಗಳು 2020 ರಿಂದ 2022 ರವರೆಗೆ ಮೂರು ವರ್ಷಗಳ ಅವಧಿಯಲ್ಲಿ ದೇಶಾದ್ಯಂತ ಒಟ್ಟಾಗಿ 3.55 ಕೋಟಿಗೂ ಹೆಚ್ಚು ಸಸಿಗಳನ್ನು ನೆಟ್ಟಿವೆ

ಎಲ್ಲಾ ʻಸಿಎಪಿಎಫ್ʼಳಿಗೆ 2023ಕ್ಕೆ 1.5 ಕೋಟಿ ಸಸಿಗಳನ್ನು ನೆಡುವ ಸಾಮೂಹಿಕ ಗುರಿಯನ್ನು ನಿಗದಿಪಡಿಸಲಾಗಿದ್ದು, ಇದರಿಂದ ಒಟ್ಟು ಸಸಿಗಳ 5 ಕೋಟಿಗೆ ತಲುಪಲಿದೆ, ಇದು ರಾಷ್ಟ್ರದ ಒಟ್ಟಾರೆ ಪರಿಸರ ಸಂರಕ್ಷಣಾ ಪ್ರಯತ್ನಗಳಿಗೆ ʻಸಿಎಪಿಎಫ್ʼಗಳ ಅನುಕರಣೀಯ ಕೊಡುಗೆಯಾಗಿದೆ

ʻಸಿಆರ್‌ಪಿಎಫ್‌ʼನ 8 ವಿವಿಧ ಕ್ಯಾಂಪಸ್‌ಗಳಲ್ಲಿ ಹೊಸದಾಗಿ ನಿರ್ಮಿಸಲಾದ ವಿವಿಧ ರೀತಿಯ 15 ಭವ್ಯ ಕಟ್ಟಡಗಳನ್ನು ಗೃಹ ಸಚಿವರು ವಿದ್ಯುನ್ಮಾನವಾಗಿ ಉದ್ಘಾಟಿಸಲಿದ್ದಾರೆ

Posted On: 17 AUG 2023 4:03PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 2023ರ ಆಗಸ್ಟ್ 18ರ ಶುಕ್ರವಾರ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿರುವ ʻಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಗ್ರೂಪ್‌ ಕೇಂದ್ರದಲ್ಲಿ 4ನೇ ಕೋಟಿ ಸಸಿಯನ್ನು ನೆಡಲಿದ್ದಾರೆ. ʻಸಿಆರ್‌ಪಿಎಫ್‌ʼನ 8 ವಿವಿಧ ಕ್ಯಾಂಪಸ್‌ಗಳಲ್ಲಿ ಹೊಸದಾಗಿ ನಿರ್ಮಿಸಲಾದ ವಿವಿಧ ರೀತಿಯ 15 ಭವ್ಯ ಕಟ್ಟಡಗಳನ್ನು ಗೃಹ ಸಚಿವರು ವಿದ್ಯುನ್ಮಾನವಾಗಿ ಉದ್ಘಾಟಿಸಲಿದ್ದಾರೆ. ಗೃಹ ಸಚಿವ ಶ್ರೀ ಅಮಿತ್ ಶಾ ಅವರು 2020ರ ಜುಲೈ 12ರಂದು ದೇಶಾದ್ಯಂತ ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಿದ್ದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಶಯದಿಂದ ಪ್ರೇರಿತರಾಗಿ, ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ನಾಯಕತ್ವದಲ್ಲಿ, ʻಸಿಎಪಿಎಫ್ʼಗಳು 2020 ರಿಂದ 2022 ರವರೆಗೆ ಮೂರು ವರ್ಷಗಳ ಅವಧಿಯಲ್ಲಿ ದೇಶಾದ್ಯಂತ ಒಟ್ಟಾಗಿ 3.55 ಕೋಟಿಗೂ ಹೆಚ್ಚು ಸಸಿಗಳನ್ನು ನೆಟ್ಟಿವೆ. ಎಲ್ಲಾ ಕೇಂದ್ರ ಮೀಸಲು ಪೊಲೀಸ್ ಪಡೆಗಳು 2023ನೇ ವರ್ಷಕ್ಕೆ 1.5 ಕೋಟಿ ಸಸಿಗಳನ್ನು ನೆಡುವ ಸಾಮೂಹಿಕ ಗುರಿಯನ್ನು ನಿಗದಿಪಡಿಸಲಾಗಿದ್ದು, ಇದರಿಂದ ಒಟ್ಟು ಸಸಿ ನೆಡುವಿಕೆ 5 ಕೋಟಿಗೆ ತಲುಪಲಿದೆ. ಇದು ರಾಷ್ಟ್ರದ ಒಟ್ಟಾರೆ ಪರಿಸರ ಸಂರಕ್ಷಣಾ ಪ್ರಯತ್ನಗಳಿಗೆ ʻಸಿಎಪಿಎಫ್ʼಗಳ ಅನುಕರಣೀಯ ಕೊಡುಗೆಯಾಗಿದೆ. ಇದು ಭೂಮಿ ತಾಯಿಗೆ ನೈಜ ಕೃತಜ್ಞತೆಯ ಸಂಕೇತವಾಗಿದೆ.

ಯಾವ ಪ್ರದೇಶದಲ್ಲಿ ಯಾವ ನಿರ್ದಿಷ್ಟ ಪ್ರಭೇದಗಳ ಸಸಿಗಳನ್ನು ನೆಡಬೇಕೆಂಬ ಬಗ್ಗೆ ಪಟ್ಟಿಯೊಂದನ್ನು ರೂಪಿಸಲಾಗಿತ್ತು. ಈ ಉದ್ದೇಶಕ್ಕಾಗಿ ನೋಡಲ್ ಅಧಿಕಾರಿಯನ್ನು ನೇಮಿಸಲಾಯಿತು. ಸಾಧ್ಯವಾದಷ್ಟು ಸ್ಥಳೀಯ ಪ್ರಭೇದಗಳನ್ನು ನೆಡಬೇಕು ಮತ್ತು ಒಟ್ಟು ನೆಡುತೋಪುಗಳಲ್ಲಿ ಕನಿಷ್ಠ ಅರ್ಧದಷ್ಟು 100 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ಜೀವನಚಕ್ರವನ್ನು ಹೊಂದಿರುವ ದೀರ್ಘಕಾಲೀನ ಮರಗಳು ಇರಬೇಕು ಎಂದು ನಿರ್ಧರಿಸಲಾಯಿತು. ಇದಲ್ಲದೆ, ಔಷಧೀಯ ಮತ್ತು ಪರಿಸರ ಸ್ನೇಹಿ ಮರಗಳಿಗೆ ಆದ್ಯತೆ ನೀಡುವಂತೆ ಕಾಳಜಿ ವಹಿಸಲಾಯಿತು.

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ರಾಷ್ಟ್ರದ ಆಂತರಿಕ ಭದ್ರತೆಯನ್ನು ಕಾಪಾಡಿಕೊಳ್ಳುವ ಹಾಗೂ ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುವ ಬದ್ಧತೆಗೆ ನಿಷ್ಠರಾಗಿರುವುದರ ಜೊತೆಗೆ, ಪರಿಸರ ರಕ್ಷಣೆ ಮತ್ತು ಸಂರಕ್ಷಣೆಗೆ ಅನುಗುಣವಾಗಿ ತಮ್ಮ ಭವಿಷ್ಯದ ಪ್ರಯತ್ನಗಳನ್ನು ಹೊಂದಿಸುವ ದೃಢ ನಿರ್ಧಾರವನ್ನು ಪುನರುಚ್ಚರಿಸಿವೆ.

****



(Release ID: 1950002) Visitor Counter : 116