ಪ್ರಧಾನ ಮಂತ್ರಿಯವರ ಕಛೇರಿ

ಡಿಆರ್ ಡಿಒ ಮಾಜಿ ಮಹಾನಿರ್ದೇಶಕ ಡಾ. ವಿ.ಎಸ್. ಅರುಣಾಚಲಂ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 17 AUG 2023 10:08AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಡಿಆರ್ ಡಿಒ ಮಾಜಿ ಮಹಾನಿರ್ದೇಶಕ ಡಾ. ವಿ.ಎಸ್. ಅರುಣಾಚಲಂ ಅವರ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪ್ರಧಾನಮಂತ್ರಿ ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ;

"ಡಾ.ವಿ.ಎಸ್.ಅರುಣಾಚಲಂ ಅವರ ನಿಧನವು ವೈಜ್ಞಾನಿಕ ಸಮುದಾಯ ಮತ್ತು ಕಾರ್ಯತಂತ್ರದ ಜಗತ್ತಿನಲ್ಲಿ ದೊಡ್ಡ ಶೂನ್ಯವನ್ನು ಉಂಟುಮಾಡಿದೆ. ಅವರ ಜ್ಞಾನ, ಸಂಶೋಧನೆಯ ಉತ್ಸಾಹ ಮತ್ತು ಭಾರತದ ಭದ್ರತಾ ಸಾಮರ್ಥ್ಯಗಳನ್ನು ಬಲಪಡಿಸುವಲ್ಲಿ ಶ್ರೀಮಂತ ಕೊಡುಗೆಗಾಗಿ ಅವರನ್ನು ಬಹಳವಾಗಿ ಪ್ರಶಂಸಿಸಲಾಯಿತು. ಅವರ ಕುಟುಂಬ ಮತ್ತು ಹಿತೈಷಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ," ಎಂದಿದ್ದಾರೆ.

 

Dr. V.S. Arunachalam’s passing away leaves a major void in scientific community and the strategic world. He was greatly admired for his knowledge, passion for research and rich contribution towards strengthening India’s security capabilities. Condolences to his family and well…

— Narendra Modi (@narendramodi) August 17, 2023

 

***



(Release ID: 1949818) Visitor Counter : 99