ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಅಮೆರಿಕದ ಕಾಂಗ್ರೆಸ್ ನಿಯೋಗ


ಭಾರತ-ಅಮೆರಿಕ ಸಂಬಂಧಗಳಿಗೆ ಅಮೆರಿಕದ ಕಾಂಗ್ರೆಸ್ ನ ಸ್ಥಿರ ಮತ್ತು ದ್ವಿಪಕ್ಷೀಯ ಬೆಂಬಲಕ್ಕೆ  ಪ್ರಧಾನಮಂತ್ರಿ ಶ್ಲಾಘನೆ

ಪ್ರಧಾನಿ ಅವರು ಜೂನ್ ನಲ್ಲಿ ಅಮೆರಿಕಕ್ಕೆ ಐತಿಹಾಸಿಕ ಭೇಟಿ ನೀಡಿ ಕಾಂಗ್ರೆಸ್ ಅನ್ನು ಉದ್ದೇಶಿಸಿ ಮಾಡಿದ ಭಾಷಣ ನೆನಪಿಸಿಕೊಂಡ ಗಣ್ಯರು

ಪ್ರಜಾಪ್ರಭುತ್ವ ಮೌಲ್ಯಗಳು, ಕಾನೂನಿನ ಆಳ್ವಿಕೆಗೆ ಗೌರವ ಮತ್ತು ಜನರಿಂದ ಜನರ ಸಂಬಂಧಗಳ ಬಗ್ಗೆ ಪ್ರಧಾನಮಂತ್ರಿ ಮತ್ತು ಅಮೆರಿಕ ನಿಯೋಗದ ಸದಸ್ಯರು ಮನವರಿಕೆ ಮಾಡಿಕೊಟ್ಟರು.

Posted On: 16 AUG 2023 7:43PM by PIB Bengaluru

 ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ ಎಂಟು ಸದಸ್ಯರ ಅಮೆರಿಕ ಕಾಂಗ್ರೆಷನಲ್ ನಿಯೋಗವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು.

ನಿಯೋಗದಲ್ಲಿ ಇಂಡಿಯಾ ಕಾಕಸ್ ನ ಡೆಮಾಕ್ರಟಿಕ್ ಸಹ-ಅಧ್ಯಕ್ಷ ರೋ ಖನ್ನಾ, ಇಂಡಿಯಾ ಕಾಕಸ್ ನ ರಿಪಬ್ಲಿಕನ್ ಸಹ ಅಧ್ಯಕ್ಷ ಮೈಕ್ ವಾಲ್ಟ್ಜ್, ಎಡ್ ಕೇಸ್, ಕ್ಯಾಟ್ ಕ್ಯಾಮ್ಯಾಕ್, ಡೆಬೊರಾ ರಾಸ್, ಜಾಸ್ಮಿನ್ ಕ್ರೋಕೆಟ್, ರಿಚ್ ಮೆಕ್ಕಾರ್ಮಿಕ್ ಮತ್ತು ಥಾನೇಡರ್ ಇದ್ದರು.

ನಿಯೋಗವನ್ನು ಸ್ವಾಗತಿಸಿದ ಪ್ರಧಾನಮಂತ್ರಿಯವರು, ಭಾರತ-ಅಮೆರಿಕ ಸಂಬಂಧಗಳಿಗೆ ಅಮೆರಿಕ ಕಾಂಗ್ರೆಸ್ ನ ಸ್ಥಿರ ಮತ್ತು ದ್ವಿಪಕ್ಷೀಯ ಬೆಂಬಲಕ್ಕಾಗಿ ತಮ್ಮ ಮೆಚ್ಚುಗೆಯನ್ನು ತಿಳಿಸಿದರು.

ಅಧ್ಯಕ್ಷ ಬಿಡೆನ್ ಅವರ ಆಹ್ವಾನದ ಮೇರೆಗೆ ಜೂನ್ ನ ಲ್ಲಿ ಯುಎಸ್ ಗೆ ಐತಿಹಾಸಿಕ ಭೇಟಿ ನೀಡಿದ ಸಂದರ್ಭ, ಈ ಸಮಯದಲ್ಲಿ ಯುಎಸ್ ಕಾಂಗ್ರೆಸ್ ನ ಜಂಟಿ ಅಧಿವೇಶನವನ್ನು ಎರಡನೇ ಬಾರಿಗೆ ಉದ್ದೇಶಿಸಿ ಮಾತನಾಡಲು ಅವಕಾಶ ಸಿಕ್ಕಿದ ಬಗ್ಗೆ ಪ್ರಧಾನಿ ಪ್ರೀತಿಯಿಂದ ನೆನಪಿಸಿಕೊಂಡರು,

ಪ್ರಧಾನಮಂತ್ರಿ ಮತ್ತು ಅಮೆರಿಕ ನಿಯೋಗವು ಭಾರತ-ಯುಎಸ್ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯು ಪ್ರಜಾಪ್ರಭುತ್ವ ಮೌಲ್ಯಗಳು, ಕಾನೂನಿನ ನಿಯಮಕ್ಕೆ ಗೌರವ ಮತ್ತು ಬಲವಾದ ಜನರ ನಡುವಿನ ಸಂಬಂಧಗಳನ್ನು ಆಧರಿಸಿದೆ ಎಂದು ಪ್ರಸ್ತಾಪಿಸಿದರು.

***


(Release ID: 1949761) Visitor Counter : 115