ಸಂಪುಟ

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಧಿಕೃತ ಆರ್ಥಿಕ ಸಂಸ್ಥೆಗಳ ಪರಸ್ಪರ ಗುರುತಿಸುವಿಕೆಯ ವ್ಯವಸ್ಥೆಗೆ ಕ್ಯಾಬಿನೆಟ್ ಅನುಮೋದನೆ

Posted On: 16 AUG 2023 4:30PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ  ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ), ಕಂದಾಯ ಇಲಾಖೆ, ಮತ್ತು ಆಸ್ಟ್ರೇಲಿಯನ್ ಬಾರ್ಡರ್ ಫೋರ್ಸ್ ನಡುವಿನ ಪರಸ್ಪರ ಗುರುತಿಸುವಿಕೆ ಅರೇಂಜ್ಮೆಂಟ್ (MRA) ಗೆ ಸಹಿ ಮತ್ತು ಅನುಮೋದನೆ ನೀಡಲಾಗಿದೆ.

ಕಸ್ಟಮ್ಸ್ ಅಧಿಕಾರಿಗಳು ಸರಕುಗಳ ಕ್ಲಿಯರೆನ್ಸ್ನಲ್ಲಿ ಮಾನ್ಯತೆ ಪಡೆದ ಮತ್ತು ವಿಶ್ವಾಸಾರ್ಹ ರಫ್ತುದಾರರಿಗೆ ಪ್ರಯೋಜನಗಳನ್ನು ಒದಗಿಸುವ ಗುರಿಯನ್ನು ಈ ವ್ಯವಸ್ಥೆ ಹೊಂದಿದೆ.
ಇದು ವಿಶ್ವ ಕಸ್ಟಮ್ಸ್ ಸಂಸ್ಥೆಯ ಸುರಕ್ಷಿತ ಚೌಕಟ್ಟಿನ ಮಾನದಂಡಗಳ ಪ್ರಮುಖ ಅಂಶವಾಗಿದೆ. ಜಾಗತಿಕ ಮಟ್ಟದಲ್ಲಿ ಅಧಿಕೃತ ಆರ್ಥಿಕ ನಿರ್ವಾಹಕರ ಪರಸ್ಪರ ಗುರುತಿಸುವಿಕೆಯು ವ್ಯಾಪಾರಕ್ಕೆ ಹೆಚ್ಚಿನ ಅನುಕೂಲವನ್ನು ಒದಗಿಸುವ ಮೂಲಕ ಪೂರೈಕೆ ಸರಪಳಿಗಳ ಅಂತ್ಯದಿಂದ ಕೊನೆಯವರೆಗೆ ಭದ್ರತೆಯನ್ನು ಬಲಪಡಿಸಲು, ಜಾಗತಿಕ ವ್ಯಾಪಾರವನ್ನು ಸುರಕ್ಷಿತಗೊಳಿಸಲು ಮತ್ತು ಸುಗಮಗೊಳಿಸಲು. ಈ ವ್ಯವಸ್ಥೆಯು ಆಸ್ಟ್ರೇಲಿಯಾಕ್ಕೆ ನಮ್ಮ ರಫ್ತುದಾರರಿಗೆ ಹೆಚ್ಚಿನ  ಪ್ರಯೋಜನವನ್ನುಒದಗಿಸುತ್ತದೆ ಮತ್ತು ಆ ಮೂಲಕ ಎರಡು ದೇಶಗಳ ನಡುವಿನ ವ್ಯಾಪಾರ ಸಂಬಂಧವನ್ನು ಉತ್ತೇಜಿಸುತ್ತದೆ.

ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯನ್ ಟ್ರಸ್ಟೆಡ್ ಟ್ರೇಡರ್ ಪ್ರೋಗ್ರಾಂನ ಪರಸ್ಪರ ಗುರುತಿಸುವಿಕೆ ಮತ್ತು ಭಾರತದಲ್ಲಿ ಅಧಿಕೃತ ಆರ್ಥಿಕ ಆಪರೇಟರ್ ಪ್ರೋಗ್ರಾಂ ಎರಡೂ ದೇಶಗಳ ಅಧಿಕೃತ ಪ್ರತಿನಿಧಿಗಳು ಸಹಿ ಮಾಡಿದ ದಿನಾಂಕದಿಂದ ಈ ಒಪ್ಪಂದ ಜಾರಿಗೆ ಬರುತ್ತವೆ. ಉಭಯ ದೇಶಗಳ ಕಸ್ಟಮ್ಸ್ ಆಡಳಿತಗಳ ಒಪ್ಪಿಗೆಯೊಂದಿಗೆ ಉದ್ದೇಶಿತ ಪರಸ್ಪರ ಗುರುತಿಸುವಿಕೆ ಅರೇಂಜ್ಮೆಂಟ್ ಅನ್ನು ಅಂತಿಮಗೊಳಿಸಲಾಗಿದೆ.

****



(Release ID: 1949507) Visitor Counter : 92