ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

77ನೇ ಸ್ವಾತಂತ್ರ್ಯ ದಿನಾಚರಣೆಯಂದು ಶುಭಹಾರೈಸಿ, ಶುಭಾಶಯ ಕೋರಿದ ವಿಶ್ವದ ಜನನಾಯಕರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿ

Posted On: 15 AUG 2023 4:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, 77ನೇ ಸ್ವಾತಂತ್ರ್ಯ ದಿನಾಚರಣೆಯಂದು ಶುಭಾಶಯ ಕೋರಿದ ವಿಶ್ವದ ಎಲ್ಲಾ ನಾಯಕರಿಗೆ ಧನ್ಯವಾದ ಅರ್ಪಿಸಿದರು.

ಮಾಲ್ಡೀವ್ಸ್ ಗಣರಾಜ್ಯದ ಅಧ್ಯಕ್ಷರ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿಯವರು;

"ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಆವರೇ, ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳಿಗಾಗಿ ಧನ್ಯವಾದಗಳು" ಎಂದು ಉತ್ತರಿಸಿದ್ದಾರೆ.

ಭೂತಾನ್ ನ ಪ್ರಧಾನಿಯವರ ಟ್ವೀಟ್ ಗೆ ಉತ್ತರಿಸಿದ ಪ್ರಧಾನಮಂತ್ರಿಯವರು;

"ಭೂತಾನ್ ನ ಪ್ರಧಾನಿಯವರಾದ ಡಾ.ಲೋಟೆ ಶೆರಿಂಗ್ ರವರೇ, ನಮ್ಮ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳಿಗೆ ಕೃತಜ್ಞತೆಗಳು" ಎಂದು ಹೇಳಿದ್ದಾರೆ.

ನೇಪಾಳದ ಪ್ರಧಾನಮಂತ್ರಿಯವರ ಕಛೇರಿಯ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿಯವರು;

"ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡರವರೇ, ನಿಮ್ಮ ಆತ್ಮೀಯ ಶುಭಾಶಯಗಳಿಗಾಗಿ ಧನ್ಯವಾದಗಳು" ಎಂದು ತಿಳಿಸಿದ್ದಾರೆ.

 


 

ಫ್ರಾನ್ಸ್ ಅಧ್ಯಕ್ಷರ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿಯವರು ಹೀಗೆ ಮರು ಟ್ವೀಟ್ ಮಾಡಿದ್ದಾರೆ-

"ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ರವರೇ, ನಿಮ್ಮ ಹಾರ್ದಿಕ ಶುಭ ಹಾರೈಕೆಗಳಿಗೆ ಧನ್ಯವಾದಗಳು. ನಾನು ನಮ್ಮ ಪ್ಯಾರಿಸ್ ಭೇಟಿಯನ್ನು ಸದಾ ನೆನಪಿಸಿಕೊಳ್ಳುತ್ತೇನೆ. ಭಾರತ-ಫ್ರಾನ್ಸ್ ದೇಶಗಳ ನಡುವಿನ ಸಂಬಂಧವನ್ನು ಹೆಚ್ಚಿಸುವ ನಿಮ್ಮ ಉತ್ಸಾಹವನ್ನು ಪ್ರಶಂಸಿಸುತ್ತೇನೆ."

 


 

ಮಾರಿಷಸ್ ನ ಪ್ರಧಾನಿಯವರ ಟ್ವೀಟ್ ಗೆ-

"ನಿಮ್ಮ ಹೃತ್ಪೂರ್ವಕ ಶುಭಾಶಯಗಳಿಗಾಗಿ ಧನ್ಯವಾದಗಳು ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನೌತ್ ಅವರೇ" ಎಂದು ಉತ್ತರಿಸಿದ್ದಾರೆ.

ಐರೋಪ್ಯ ಒಕ್ಕೂಟದ ಅಧ್ಯಕ್ಷರಾದ ಉರ್ಸುಲಾ ವಾನ್ ಡೆರ್ ಲೆಯೆನ್ ರವರ ಟ್ವೀಟ್ ಗೆ ಉತ್ತರಿಸಿದ ಪ್ರಧಾನಮಂತ್ರಿಯವರು-

"ಈ ವಿಶೇಷ ಸಂದರ್ಭದಲ್ಲಿ ನಿಮ್ಮ ಶುಭಾಶಯಗಳಿಗಾಗಿ ಧನ್ಯವಾದಗಳು." ಎಂದು ತಮ್ಮ ಧನ್ಯವಾದಗಳನ್ನು ತಿಳಿಸಿದ್ದಾರೆ.

ಇಸ್ರೇಲ್ ಪ್ರಧಾನಿಯವರ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿಯವರು,

"ನನ್ನ ಆತ್ಮೀಯ ಸ್ನೇಹಿತರಾದ ಪಿಎಂ ಬೆಂಜಮಿನ್ ನೆತನ್ಯಾಹುರವರೇ, ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು." ಎಂದು ತಿಳಿಸಿದ್ದಾರೆ.

ಡೊಮಿನಿಕಾದ ಪ್ರಧಾನಿಯವರ ಟ್ವೀಟ್ ಗೆ ಉತ್ತರಿಸಿದ ಪ್ರಧಾನಿಯವರು-

"ನಮ್ಮ ಸ್ವಾತಂತ್ರ್ಯ ದಿನಕ್ಕಾಗಿ ನೀವು ತಿಳಿಸಿದ ಶುಭಾಶಯಗಳಿಗಾಗಿ ಪ್ರಧಾನಿ ರೂಸ್ವೆಲ್ಟ್ ಸ್ಕೆರಿಟ್ ಅವರಿಗೆ ಧನ್ಯವಾದಗಳು" ಎಂದು ಹೇಳಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್ ನ ಪ್ರಧಾನ ಮಂತ್ರಿಯವರ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ,

"ಘನತೆವೆತ್ತ ಶೇಖ್ ಮೊಹಮ್ಮದ್ ರವರೇ ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು" ಎಂದು ಪ್ರಧಾನಮಂತ್ರಿಯವರು ತಮ್ಮ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

*****


(Release ID: 1949283) Visitor Counter : 121