ಗೃಹ ವ್ಯವಹಾರಗಳ ಸಚಿವಾಲಯ

2023 ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ 954 ಪೊಲೀಸ್ ಸಿಬ್ಬಂದಿಗೆ ಪೊಲೀಸ್ ಪದಕ ಪ್ರದಾನ

Posted On: 14 AUG 2023 10:29AM by PIB Bengaluru

ಒಬ್ಬರಿಗೆ ಶೌರ್ಯಕ್ಕಾಗಿ ರಾಷ್ಟ್ರಪತಿಗಳ  ಪೊಲೀಸ್ ಪದಕ (ಪಿಪಿಎಂಜಿ),  229  ಪೊಲೀಸರಿಗೆ  ಶೌರ್ಯಕ್ಕಾಗಿ ಪೊಲೀಸ್ ಪದಕ (ಪಿಎಂಜಿ), 82 ಪೊಲೀಸರಿಗೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ (ಪಿಪಿಎಂ) ಮತ್ತು 642 ಪೊಲೀಸರಿಗೆ ಶ್ಲಾಘನೀಯ  ಸೇವೆಗಾಗಿ ಪೊಲೀಸ್ ಪದಕ (ಪಿಎಂ)

2023 ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಒಟ್ಟು 954 ಪೊಲೀಸ್ ಸಿಬ್ಬಂದಿಗೆ ಪೊಲೀಸ್ ಪದಕಗಳನ್ನು ನೀಡಲಾಗಿದೆ.  ಸಿಆರ್‌ಪಿಎಫ್‌ ಸಿಬ್ಬಂದಿಗೆ ಶೌರ್ಯಕ್ಕಾಗಿ ರಾಷ್ಟ್ರಪತಿಗಳ ಒಂದು ಪೊಲೀಸ್ ಪದಕ (ಪಿಪಿಎಂಜಿ),  229 ಪೊಲೀಸರಿಗೆ ಶೌರ್ಯಕ್ಕಾಗಿ ಪೊಲೀಸ್ ಪದಕ (ಪಿಎಂಜಿ ),  82 ಪೊಲೀಸರಿಗೆ ವಿಶೇಷ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ (ಪಿಪಿಎಂ) ಮತ್ತು ಶ್ಲಾಘನೀಯ  ಸೇವೆಗಾಗಿ  ಪೊಲೀಸ್ ಪದಕ (ಪಿಎಂ) 642 ಸಿಬ್ಬಂದಿಗಳಿಗೆ ನೀಡಲಾಗಿದೆ.

230 ಶೌರ್ಯ ಪ್ರಶಸ್ತಿಗಳಲ್ಲಿ ಹೆಚ್ಚಿನವುಗಳಲ್ಲಿ,  ವಾಮಪಂಥೀಯ ಉಗ್ರಗಾಮಿ ಪೀಡಿತ ಪ್ರದೇಶಗಳ 125 ಸಿಬ್ಬಂದಿಗಳಿಗೆ, ಜಮ್ಮು ಮತ್ತು ಕಾಶ್ಮೀರ ಪ್ರದೇಶದ 71 ಸಿಬ್ಬಂದಿಗಳಿಗೆ ಮತ್ತು ಈಶಾನ್ಯ ಪ್ರದೇಶದ 11 ಸಿಬ್ಬಂದಿಗಳಿಗೆ ಅವರ ಶೌರ್ಯ ಕಾರ್ಯಕ್ಕಾಗಿ ನೀಡಲಾಗುತ್ತದೆ. ಶೌರ್ಯ ಪ್ರಶಸ್ತಿಗಳನ್ನು ಪಡೆದ ಸಿಬ್ಬಂದಿಗಳಲ್ಲಿ, 28 ಸಿಆರ್‌ಪಿಎಫ್‌, 33 ಮಹಾರಾಷ್ಟ್ರ, 55 ಜಮ್ಮು ಮತ್ತು ಕಾಶ್ಮೀರ ಪೊಲೀಸ್‌, 24 ಛತ್ತೀಸ್‌ಗಢ, 22 ತೆಲಂಗಾಣ ಮತ್ತು 18 ಆಂಧ್ರಪ್ರದೇಶಉಳಿದವರು ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಮತ್ತು ಸಿಎಪಿಎಫ್‌ಗಳಿಗೆ ಸೇರಿದವರು.

ರಾಷ್ಟ್ರಪತಿಗಳ ಶೌರ್ಯಕ್ಕಾಗಿ ಅಧ್ಯಕ್ಷರ ಪೊಲೀಸ್ ಪದಕ (ಪಿಪಿಎಂಜಿ) ಮತ್ತು ಶೌರ್ಯಕ್ಕಾಗಿ ಪೊಲೀಸ್ ಪದಕ (ಪಿಎಂಜಿ)ಗಳನ್ನು  ಜೀವ ಮತ್ತು ಆಸ್ತಿಯನ್ನು ಉಳಿಸುವಲ್ಲಿ ಅಥವಾ ಅಪರಾಧವನ್ನು ತಡೆಗಟ್ಟುವಲ್ಲಿ ಅಥವಾ ಅಪರಾಧಿಗಳನ್ನು ಬಂಧಿಸುವಲ್ಲಿ ಕಂಡುಬರುವ ಅಸಾಧಾರಣ ಶೌರ್ಯದ ಆಧಾರದ ಮೇಲೆ ನೀಡಲಾಗುತ್ತದೆ. ಶ್ಲಾಘನೀಯ  ಸೇವೆಗಾಗಿ ಪೊಲೀಸ್ ಮೆಡಲ್  (ಪಿಪಿಎಂ) ಅನ್ನು ಪೊಲೀಸ್ ಸೇವೆಯಲ್ಲಿನ ವಿಶೇಷ ಸೇವೆಗಾಗಿ ನೀಡಲಾಗುತ್ತದೆ ಮತ್ತು  ಶ್ಲಾಘನೀಯ ಸೇವೆಗಾಗಿ ಪೊಲೀಸ್ ಮೆಡಲ್ (ಪಿಎಂ) ಅನ್ನು ಸಂಪನ್ಮೂಲ ಮತ್ತು ಕರ್ತವ್ಯದ ಶ್ರದ್ಧೆಯಿಂದ ಕೂಡಿದ ಮೌಲ್ಯಯುತ ಸೇವೆಗಾಗಿ ನೀಡಲಾಗುತ್ತದೆ.

ಪ್ರಶಸ್ತಿ ಪುರಸ್ಕೃತರ ಪಟ್ಟಿಗಳ ವಿವರಗಳನ್ನು ಈ ಕೆಳಗಿನಂತಿವೆ:

ಕ್ರಮ ಸಂಖ್ಯೆ

ವಿವರ

ಪುರಸ್ಕೃತರ
ಸಂಖ್ಯೆ

ಪಟ್ಟಿ

1

ಶೌರ್ಯಕ್ಕಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕಗಳು (ಪಿಪಿಎಂಜಿ)

01

ಪಟ್ಟಿ-I

2

ಶೌರ್ಯಕ್ಕಾಗಿ ಪೊಲೀಸ್ ಪದಕಗಳು (ಪಿಎಂಜಿ)

229

ಪಟ್ಟಿ -II

3

ವಿಶೇಷ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕಗಳು

82

ಪಟ್ಟಿ -III

4

ಶ್ಲಾಘನೀಯ ಸೇವೆಗಾಗಿ ಪೊಲೀಸ್ ಪದಕ

642

ಪಟ್ಟಿ -IV

5

ಪೊಲೀಸ್ ಸಿಬ್ಬಂದಿಗೆ ಪದಕ ಪುರಸ್ಕೃತರ ದಳ / ರಾಜ್ಯವಾರು ಪಟ್ಟಿ

ಪಟ್ಟಿಯ ಪ್ರಕಾರ

ಪಟ್ಟಿ -V

 

ಪಟ್ಟಿ-I ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಪಟ್ಟಿ -II ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಪಟ್ಟಿ -III ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಪಟ್ಟಿ -IV ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಪಟ್ಟಿ-V ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ವಿವರಗಳು http://www.mha.gov.in ಮತ್ತು https://awards.gov.in ನಲ್ಲಿ ಲಭ್ಯವಿದೆ.

*****



(Release ID: 1948491) Visitor Counter : 117