ಪ್ರಧಾನ ಮಂತ್ರಿಯವರ ಕಛೇರಿ
ತಮಿಳುನಾಡಿನ ಕೃಷ್ಣಗಿರಿಯ ಪಟಾಕಿ ಕಾರ್ಖಾನೆಯ ಬೆಂಕಿ ಅವಘಡದಲ್ಲಿ ಸಂಭವಿಸಿದ ಸಾವಿಗೆ ಸಂತಾಪ ಸೂಚಿಸಿದ ಪ್ರಧಾನಮಂತ್ರಿ
ಸಂತ್ರಸ್ತರ ಕುಟುಂಬಗಳಿಗೆ ಪರಿಹಾರಧನ ಘೋಷಿಸಿದರು
Posted On:
29 JUL 2023 4:32PM by PIB Bengaluru
ತಮಿಳುನಾಡಿನ ಕೃಷ್ಣಗಿರಿಯ ಪಟಾಕಿ ಕಾರ್ಖಾನೆಯ ಬೆಂಕಿ ಅವಘಡದಲ್ಲಿ ಸಂಭವಿಸಿದ ಸಾವಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಪಿ.ಎಂ.ಎನ್.ಆರ್.ಎಫ್. ನಿಧಿಯಿಂದ ರೂ. 2 ಲಕ್ಷಗಳನ್ನು ಮೃತರ ಅವಲಂಭಿತ ಸಂಬಂಧಿಕರಿಗೆ ನೀಡಲಾಗುವುದು ಮತ್ತು ಗಾಯಾಳುಗಳಿಗೆ ರೂ. 50,000 ಗಳ ಪರಿಹಾರ ನೀಡುವುದಾಗಿ ಪ್ರಧಾನಮಂತ್ರಿ ಅವರು ಘೋಷಿಸಿದರು.
ಪ್ರಧಾನಮಂತ್ರಿ ಕಾರ್ಯಾಲಯವು ಈ ರೀತಿ ಟ್ವೀಟ್ ಮಾಡಿದೆ:
"ತಮಿಳುನಾಡಿನ ಕೃಷ್ಣಗಿರಿಯಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಘಟಿಸಿದ ಅಗ್ನಿ ದುರಂತದಿಂದ ಅಮೂಲ್ಯವಾದ ಜೀವಹಾನಿ ಸಂಭವಿಸಿದೆ. ಈ ಅತ್ಯಂತ ಕಷ್ಟಕರ ಸಮಯದಲ್ಲಿ ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಸಂತ್ರಸ್ತರ ಕುಟುಂಬಗಳೊಂದಿಗೆ ಇವೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಪರಿಹಾರ ನಿಟ್ಟಿನಲ್ಲಿ ಪಿ.ಎಂ.ಎನ್.ಆರ್.ಎಫ್. ನಿಧಿಯಿಂದ ರೂ. 2 ಲಕ್ಷಗಳನ್ನು ಮೃತರ ಅವಲಂಭಿತ ಸಂಬಂಧಿಕರಿಗೆ ನೀಡಲಾಗುವುದು ಮತ್ತು ಗಾಯಾಳುಗಳಿಗೆ ರೂ. 50,000 ಗಳ ಸಹಾಯಧನವನ್ನು ಪರಿಹಾರವಾಗಿ ನೀಡಲಾಗುವುದು: ಪ್ರಧಾನಮಂತ್ರಿ
*****
(Release ID: 1943980)
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam