ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಹೆಚ್ಚುತ್ತಿರುವ ಚಿಲ್ಲರೆ ಬೆಲೆಯನ್ನು ತಡೆಯಲು  ಪ್ರಮುಖವಾಗಿ ಬಳಕೆಯಾಗುವ ಸ್ಥಳಗಳಲ್ಲಿ  ವಿತರಿಸಲು ಆಂಧ್ರ ಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಟೊಮೆಟೊ ಖರೀದಿಗೆ ಗ್ರಾಹಕ ವ್ಯವಹಾರಗಳ ಇಲಾಖೆಯು ನಿರ್ದೇಶನ ನೀಡಿದೆ.


ದೆಹಲಿ-ಎನ್‌ಸಿಆರ್ ಪ್ರದೇಶದ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಟೊಮೆಟೊ ವಿತರಿಸಲಾಗುವುದು

ಮಂಡಿಗಳಿಂದ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟವು ಟೊಮೆಟೊ ಖರೀದಿಸುವುದು.

Posted On: 12 JUL 2023 12:46PM by PIB Bengaluru

ಗ್ರಾಹಕ ವ್ಯವಹಾರಗಳ ಇಲಾಖೆಯು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ಎನ್ಎಎಫ್ಇಡಿ) ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಎಫ್) ಗಳಿಗೆ ಕಳೆದ ಒಂದು ತಿಂಗಳಲ್ಲಿ ಟೊಮೆಟೊವಿನ ಚಿಲ್ಲರೆ ಬೆಲೆಗಳು ಗರಿಷ್ಠ ಏರಿಕೆಯನ್ನು ದಾಖಲಿಸಿರುವ ಪ್ರಮುಖವಾಗಿ ಬಳಸುವ ಸ್ಥಳಗಳಲ್ಲಿ  ಏಕಕಾಲದಲ್ಲಿ ವಿತರಿಸಲು ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದ ಮಂಡಿಗಳಿಂದ ತಕ್ಷಣವೇ ಟೊಮೆಟೊವನ್ನು ಖರೀದಿಸಲು ನಿರ್ದೇಶನ ನೀಡಿದೆ. ಈ ವಾರ ಶುಕ್ರವಾರದ ವೇಳೆಗೆ ದೆಹಲಿ- ರಾಷ್ಟ್ರೀಯ ರಾಜಧಾನಿ ಪ್ರದೇಶದ (ಎನ್‌ಸಿಆರ್ ) ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಚಿಲ್ಲರೆ ಮಳಿಗೆಗಳ ಮೂಲಕ ಟೊಮೆಟೊ ದಾಸ್ತಾನುಗಳನ್ನು ವಿತರಿಸಲಾಗುತ್ತದೆ.

 ಪ್ರಸ್ತುತವಿರುವ ಬೆಲೆಗಳು ಕಳೆದ ಒಂದು ತಿಂಗಳಿನಿಂದ ಚಿಲ್ಲರೆ ಬೆಲೆಯಲ್ಲಿನ ಸಂಪೂರ್ಣ ಹೆಚ್ಚಳದ ಆಧಾರದ ಮೇಲೆ ಭಾರತದೆಲ್ಲೆಡೆ ಇರುವ  ಸರಾಸರಿಗಿಂತ ಹೆಚ್ಚಿರುವ ಸ್ಥಳಗಳಲ್ಲಿ  ಬಿಡುಗಡೆಗಾಗಿ ಉದ್ದೇಶಿತ ಕೇಂದ್ರಗಳನ್ನು ಗುರುತಿಸಲಾಗಿದೆ.  ಗುರುತಿಸಲಾದ ಕೇಂದ್ರಗಳ ಹೆಚ್ಚಿನ ಸಾಂದ್ರತೆಯನ್ನು ಹೊಂದಿರುವ ರಾಜ್ಯಗಳಲ್ಲಿನ ಪ್ರಮುಖ ಬಳಕೆಯ ಕೇಂದ್ರಗಳನ್ನು ವಿತರಣೆಗಾಗಿ ಆಯ್ಕೆ ಮಾಡಲಾಗುತ್ತದೆ.

ಟೊಮೆಟೊ ವನ್ನು ಭಾರತದಲ್ಲಿ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ವಿವಿಧ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. ಭಾರತದ ದಕ್ಷಿಣ ಮತ್ತು ಪಶ್ಚಿಮ ಪ್ರದೇಶಗಳಲ್ಲಿ ಗರಿಷ್ಟ ಉತ್ಪಾದನೆಯಾಗುತ್ತಿದೆ. ಇದು ಇಡೀ ಭಾರತದ ಉತ್ಪಾದನೆಯಲ್ಲಿ 56%-58% ರಷ್ಟು ಇದೆ. ದಕ್ಷಿಣ ಮತ್ತು ಪಶ್ಚಿಮ ಪ್ರದೇಶಗಳು ಹೆಚ್ಚುವರಿ ಉತ್ಪಾದನೆ ಮಾಡುವ ರಾಜ್ಯಗಳಾಗಿದ್ದು, ಉತ್ಪಾದನೆಯ ಋತುಗಳ ಆಧಾರದ ಮೇಲೆ ಇತರ ಮಾರುಕಟ್ಟೆಗಳಿಗೆ  ಒದಗಿಸುತ್ತವೆ. ಉತ್ಪಾದನಾ ಋತುಗಳು ಪ್ರದೇಶಗಳಾದ್ಯಂತ ವಿಭಿನ್ನವಾಗಿವೆ. ಗರಿಷ್ಠ ಕೊಯ್ಲು ಅವಧಿಯು ಡಿಸೆಂಬರ್ನಿಂದ ಫೆಬ್ರವರಿ ವರೆಗೆ ಇರುತ್ತದೆ. ಜುಲೈ-ಆಗಸ್ಟ್ ಮತ್ತು ಅಕ್ಟೋಬರ್-ನವೆಂಬರ್ ಅವಧಿಗಳು ಸಾಮಾನ್ಯವಾಗಿ ಟೊಮೆಟೊಗೆ ಕಡಿಮೆ ಉತ್ಪಾದನೆಯ ತಿಂಗಳುಗಳಾಗಿವೆ. ಜುಲೈ ತಿಂಗಳು ಮಾನ್ಸೂನ್ ಋತುವಿನಲ್ಲಿರುವುದರಿಂದ, ವಿತರಣೆಗೆ ಸಂಬಂಧಿಸಿದ ಮತ್ತಷ್ಟು ಸವಾಲುಗಳು ಮತ್ತು ಹೆಚ್ಚಿದ ಸಾರಿಗೆಯಿಂದಾಗುವ ನಷ್ಟಗಳು ಬೆಲೆ ಏರಿಕೆಗೆ ಕಾರಣವಾಗುತ್ತವೆ. ನಾಟಿ ಮಾಡುವ ಮತ್ತು ಕೊಯ್ಲು ಮಾಡುವ ಋತುಗಳ ಚಕ್ರ ಮತ್ತು ಪ್ರದೇಶಗಳಾದ್ಯಂತ ವ್ಯತ್ಯಾಸವು ಪ್ರಾಥಮಿಕವಾಗಿ ಟೊಮೆಟೊದಲ್ಲಿ ಬೆಲೆಯ  ಏರಿಳಿತದ ಅವಧಿಗೆ ಕಾರಣವಾಗಿದೆ. ಸಾಮಾನ್ಯ ಬೆಲೆಯ ಅವಧಿಯ ಹೊರತಾಗಿ, ತಾತ್ಕಾಲಿಕ ಪೂರೈಕೆ ಸರಪಳಿ ಅಡಚಣೆಗಳು ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗುವ ಬೆಳೆ ಹಾನಿ ಇತ್ಯಾದಿಗಳು ಬೆಲೆಗಳಲ್ಲಿ ಹಠಾತ್ ಏರಿಕೆಗೆ ಕಾರಣವಾಗುತ್ತವೆ.

ಈಗ, ಗುಜರಾತ್, ಮಧ್ಯಪ್ರದೇಶ ಮತ್ತು ಇತರ ಕೆಲವು ರಾಜ್ಯಗಳಲ್ಲಿನ ಮಾರುಕಟ್ಟೆಗಳಿಗೆ ಸರಬರಾಜುಗಳು ಹೆಚ್ಚಾಗಿ ಮಹಾರಾಷ್ಟ್ರದಿಂದ ವಿಶೇಷವಾಗಿ ಸತಾರಾ, ನಾರಾಯಣಗಾಂವ್ ಮತ್ತು ನಾಸಿಕ್ನಿಂದ ಬರುತ್ತಿವೆ, ಇದು ಈ ತಿಂಗಳ ಅಂತ್ಯದವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಆಂಧ್ರಪ್ರದೇಶದ ಮದನಪಲ್ಲಿ (ಚಿತ್ತೂರು) ಸಹ ತಕ್ಕಮಟ್ಟಿನ ಪ್ರಮಾಣದಲ್ಲಿ  ಪೋರೈಕೆಯನ್ನು ಮುಂದುವರೆಸಿದೆ. ದೆಹಲಿ-ಎನ್ಸಿಆರ್ಗೆ  ಪೋರೈಕೆಯು ಮುಖ್ಯವಾಗಿ ಹಿಮಾಚಲ ಪ್ರದೇಶದಿಂದ ಮತ್ತು ಕೆಲವು ಪ್ರಮಾಣವು ಕರ್ನಾಟಕದ ಕೋಲಾರದಿಂದ ಆಗುತ್ತದೆ.

ನಾಸಿಕ್ ಜಿಲ್ಲೆಯಿಂದ ಶೀಘ್ರದಲ್ಲೇ ಹೊಸ ಬೆಳೆ ಬರುವ ನಿರೀಕ್ಷೆಯಿದೆ. ಇದಲ್ಲದೆ, ಆಗಸ್ಟ್ನಲ್ಲಿ, ನಾರಾಯಣಗಾಂವ್ ಮತ್ತು ಔರಂಗಾಬಾದ್ ಬೆಲ್ಟ್ನಿಂದ ಹೆಚ್ಚುವರಿ ಪೂರೈಕೆ ಬರುವ ನಿರೀಕ್ಷೆಯಿದೆ. ಮಧ್ಯಪ್ರದೇಶದಿಂದ ಪೋರೈಕೆಯು ಪ್ರಾರಂಭವಾಗುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಬೆಲೆಗಳು ಕಡಿಮೆಯಾಗುವ ನಿರೀಕ್ಷೆಯಿದೆ.

****


(Release ID: 1938908) Visitor Counter : 127