ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
azadi ka amrit mahotsav

29 ಜೂನ್, 2023 ಅನ್ನು "ಅಂಕಿಅಂಶಗಳ ದಿನ"ವಾಗಿ ಆಚರಿಸಲಾಗುತ್ತದೆ


ವಿಷಯ: ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಮೇಲ್ವಿಚಾರಣೆ ಮಾಡಲು ರಾಷ್ಟ್ರೀಯ ಸೂಚಕ ಚೌಕಟ್ಟಿನೊಂದಿಗೆ ರಾಜ್ಯ ಸೂಚಕ ಚೌಕಟ್ಟಿನ್ನು ಜೋಡಣೆ ಮಾಡುವುದು

Posted On: 29 JUN 2023 3:05PM by PIB Bengaluru

ಹೆಸರಾಂತ ಸಂಖ್ಯಾಶಾಸ್ತ್ರಜ್ಞ (ದಿವಂಗತ) ಪ್ರೊಫೆಸರ್ ಪ್ರಶಾಂತ ಚಂದ್ರ ಮಹಲನೋಬಿಸ್ ಅವರು ಅಂಕಿಅಂಶ ಮತ್ತು ಆರ್ಥಿಕ ಯೋಜನಾ ಕ್ಷೇತ್ರಗಳಲ್ಲಿ ನೀಡಿರುವ ಗಮನಾರ್ಹ ಕೊಡುಗೆಗಳನ್ನು ಗುರುತಿಸಿ, ಭಾರತ ಸರ್ಕಾರವು ಅವರ ಜನ್ಮ ವಾರ್ಷಿಕೋತ್ಸವವನ್ನು ಜೂನ್ 29 ರಂದು “ಸಂಖ್ಯಾಶಾಸ್ತ್ರ (ಅಂಕಿಅಂಶಗಳ) ದಿನ” ಎಂದು 2007 ರಿಂದ ಪ್ರತಿ ವರ್ಷವೂ ಆಚರಿಸುತ್ತಿದೆ. 

ಈ ವರ್ಷ, ಸ್ಕೋಪ್ ಕನ್ವೆನ್ಷನ್ ಸೆಂಟರ್, ಸ್ಕೋಪ್ ಕಾಂಪ್ಲೆಕ್ಸ್, ಲೋಧಿ ರಸ್ತೆ, ನವದೆಹಲಿ ಇಲ್ಲಿ “ಅಂಕಿಅಂಶಗಳ ದಿನ 2023” ಇದರ ಮುಖ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ, ಯೋಜನಾ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಗಳ ರಾಜ್ಯ ಖಾತೆ ಸಚಿವ ಶ್ರೀ ರಾವ್ ಇಂದರ್ ಜಿತ್ ಸಿಂಗ್ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾಂದರ್ಭಿಕವಾಗಿ ಮಾತನಾಡಿದರು. ರಾಷ್ಟ್ರೀಯ ಸಾಂಖ್ಯಿಕ ಆಯೋಗದ ಅಧ್ಯಕ್ಷ ಪ್ರೊ. ರಾಜೀವ ಲಕ್ಷ್ಮಣ್ ಕರಂಡಿಕರ್, ಭಾರತದ ಮುಖ್ಯ ಅಂಕಿಅಂಶ ಮತ್ತು ಸಾಂಖ್ಯಿಕ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವಾಲಯಗಳ ಕಾರ್ಯದರ್ಶಿ ಡಾ. ಜಿ.ಪಿ. ಸಮಂತ ಅವರು ಸಮಾರಂಭದಲ್ಲಿ ಭಾಗವಹಿಸಿ, ಸಭಿಕರನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಹಿರಿಯ ಅಧಿಕಾರಿಗಳು, ಇತರ ಕೇಂದ್ರ ಸಚಿವಾಲಯಗಳು/ ಇಲಾಖೆಗಳು ಮತ್ತು ವಿವಿಧ ರಾಜ್ಯಗಳ/ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳ ಪ್ರತಿನಿಧಿಗಳು, ವಿಶ್ವಸಂಸ್ಥೆಯ ವಿವಿಧ ಇಲಾಖೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಚಿವಾಲಯದ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಕಾರ್ಯಕ್ರಮವನ್ನು ನೇರಪ್ರಸಾರ(ಲೈವ್-ಸ್ಟ್ರೀಮ್) ಮಾಡಲಾಯಿತು. 

ಈ ಸಂದರ್ಭದಲ್ಲಿ ಹಮ್ಮಿಕೊಂಡ 'ತಕ್ಷಣದ ಪ್ರಬಂಧ ಬರವಣಿಗೆ ಸ್ಪರ್ಧೆ-2023' ಇದರಲ್ಲಿ ವಿಜೇತರನ್ನು ಕಾರ್ಯಕ್ರಮದಲ್ಲಿ  ಸನ್ಮಾನಿಸಿ ಗೌರವಿಸಲಾಯಿತು.

“ಅಂಕಿಅಂಶಗಳ ದಿನ 2023” ಇದರ ಮಹತ್ವಗಳ ಕುರಿತು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಮತ್ತು ಯೋಜನಾ ಸಚಿವಾಲಯದ ಉಪ ಮಹಾನಿರ್ದೇಶಕ ಡಾ. ಅಶುತೋಷ್ ಓಜಾ ಅವರು ಪ್ರಸ್ತುತಿ ಮೂಲಕ ಸಂಕ್ಷಿಪ್ತ ಮಾಹಿತಿ ನೀಡಿದರು. ವಿಶ್ವಸಂಸ್ಥೆಯ ಭಾರತದ ಸಂಯೋಜಕ  ಶ್ರೀ ಶೋಂಬಿ ಶಾರ್ಪ್, ನೀತಿ (ಎನ್.ಐ.ಟಿ.ಐ.) ಆಯೋಗದ ಹಿರಿಯ ಸಲಹೆಗಾರ ಡಾ. ಯೋಗೇಶ್ ಸೂರಿ ಮತ್ತು ನೀತಿ (ಎನ್.ಐ.ಟಿ.ಐ.) ಆಯೋಗದ ನಿರ್ದೇಶಕ ಶ್ರೀ ರಾಜೇಶ್ ಗುಪ್ತಾ ಅವರು “ಅಂಕಿಅಂಶಗಳ ದಿನ 2023” ಇದರ ಕುರಿತು ಮಾತನಾಡಿದರು .
 
“ಸುಸ್ಥಿರ ಅಭಿವೃದ್ಧಿ ಗುರಿಗಳು-ರಾಷ್ಟ್ರೀಯ ಸೂಚಕ ಚೌಕಟ್ಟು, ಪ್ರಗತಿ ವರದಿ-2023” ಅನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. “ಸುಸ್ಥಿರ ಅಭಿವೃದ್ಧಿ ಗುರಿಗಳು-ರಾಷ್ಟ್ರೀಯ ಸೂಚಕ ಚೌಕಟ್ಟು, ಪ್ರಗತಿ ವರದಿ-2023” ಇದರ ಕುರಿತು ವರದಿ ಹಾಗೂ  ಸಂಕ್ಷಿಪ್ತ ಡೇಟಾವನ್ನು ಸಹ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.  ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ, ಯೋಜನಾ ಸಚಿವಾಲಯದ ಜಾಲತಾಣದಲ್ಲಿ ಈ ವರದಿಗಳನ್ನು ಎಕ್ಸೆಲ್ ಫೈಲ್ ರೂಪದಲ್ಲಿ ಡೌನ್ ಲೋಡ್ ಮಾಡಲು ಅವಕಾಶವಿದೆ. 

***


(Release ID: 1936274) Visitor Counter : 186