ಹಣಕಾಸು ಸಚಿವಾಲಯ
azadi ka amrit mahotsav

ರಾಜ್ಯಗಳ ಬಂಡವಾಳ ವೆಚ್ಚಕ್ಕೆ ಉತ್ತೇಜನ ನೀಡಲು ‘ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು 2023-24’ ಯೋಜನೆಯಡಿ ಬಂಡವಾಳ ಹೂಡಿಕೆಗಾಗಿ ಕರ್ನಾಟಕ ಸೇರಿದಂತೆ 16 ರಾಜ್ಯಗಳಿಗೆ ಕೇಂದ್ರದಿಂದ 56,415 ಕೋಟಿ ರೂ. ಗಳ ಅನುಮೋದನೆ

Posted On: 26 JUN 2023 4:00PM by PIB Bengaluru

ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ 16 ರಾಜ್ಯಗಳಲ್ಲಿ 56,415 ಕೋಟಿ ರೂ.ಗಳ ಬಂಡವಾಳ ಹೂಡಿಕೆ ಪ್ರಸ್ತಾವನೆಗಳನ್ನು ಅನುಮೋದಿಸಿದೆ. ‘ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು 2023-24’ ಎಂಬ ಯೋಜನೆಯಡಿ ಈ ಅನುಮೋದನೆ ನೀಡಲಾಗಿದೆ. ರಾಜ್ಯವಾರು ಅನುಮೋದಿತ ಮೊತ್ತವು ಕೆಳಕಂಡಂತಿದೆ:

                                                                        (ಕೋಟಿ ರೂ.ಗಳಲ್ಲಿ)

ಕ್ರ.ಸಂಖ್ಯೆ

ರಾಜ್ಯ

ಅನುಮೋದಿತ ಮೊತ್ತ

  1.  

ಅರುಣಾಚಲ ಪ್ರದೇಶ

1255

  1.  

ಬಿಹಾರ

9640

  1.  

ಛತ್ತೀಸ್‌ಗಢ

3195

  1.  

ಗೋವಾ

386

  1.  

ಗುಜರಾತ್

3478

  1.  

ಹರಿಯಾಣ

1093

  1.  

ಹಿಮಾಚಲ ಪ್ರದೇಶ

826

  1.  

ಕರ್ನಾಟಕ

3647

  1.  

ಮಧ್ಯಪ್ರದೇಶ

7850

  1.  

ಮಿಜೋರಾಂ

399

  1.  

ಒಡಿಶಾ

4528

  1.  

ರಾಜಸ್ಥಾನ

6026

  1.  

ಸಿಕ್ಕಿಂ

388

  1.  

ತಮಿಳುನಾಡು

4079

  1.  

ತೆಲಂಗಾಣ

2102

  1.  

ಪಶ್ಚಿಮ ಬಂಗಾಳ

7523

 

ಆರೋಗ್ಯ, ಶಿಕ್ಷಣ, ನೀರಾವರಿ, ನೀರು ಸರಬರಾಜು, ವಿದ್ಯುತ್, ರಸ್ತೆಗಳು, ಸೇತುವೆಗಳು ಮತ್ತು ರೈಲ್ವೆ ಸೇರಿದಂತೆ ವಿವಿಧ ವಲಯಗಳಲ್ಲಿ ಬಂಡವಾಳ ಹೂಡಿಕೆ ಯೋಜನೆಗಳನ್ನು ಅನುಮೋದಿಸಲಾಗಿದೆ. ಈ ವಲಯಗಳಲ್ಲಿನ ಯೋಜನೆಗಳ ವೇಗವನ್ನು ಹೆಚ್ಚಿಸಲು ಜಲ ಜೀವನ್ ಮಿಷನ್ ಮತ್ತು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ರಾಜ್ಯ ಪಾಲನ್ನು ಪೂರೈಸಲು ಈ ಯೋಜನೆಯಡಿಯಲ್ಲಿ ರಾಜ್ಯಗಳಿಗೆ ಹಣವನ್ನು ಒದಗಿಸಲಾಗಿದೆ.

ಬಂಡವಾಳ ವೆಚ್ಚದ ಹೆಚ್ಚಿನ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಮತ್ತು ರಾಜ್ಯಗಳಿಂದ ಬಂಡವಾಳ ವೆಚ್ಚಕ್ಕೆ ಉತ್ತೇಜನ ನೀಡುವ ಸಲುವಾಗಿ, 2023-24 ರ ಕೇಂದ್ರ ಬಜೆಟ್‌ನಲ್ಲಿ 'ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು 2023-24' ಯೋಜನೆಯನ್ನು ಘೋಷಿಸಲಾಯಿತು. ಈ ಯೋಜನೆಯಡಿಯಲ್ಲಿ, 2023-24ರ ಆರ್ಥಿಕ ವರ್ಷದಲ್ಲಿ ಒಟ್ಟಾರೆ 1.3 ಲಕ್ಷ ಕೋಟಿ ರೂಪಾಯಿಗಳವರೆಗೆ 50 ವರ್ಷಗಳ ಬಡ್ಡಿ ರಹಿತ ಸಾಲದ ರೂಪದಲ್ಲಿ ರಾಜ್ಯ ಸರ್ಕಾರಗಳಿಗೆ ವಿಶೇಷ ನೆರವು ಒದಗಿಸಲಾಗುತ್ತಿದೆ.

ಯೋಜನೆಯು ಎಂಟು ಭಾಗಗಳನ್ನು ಹೊಂದಿದೆ. 1 ಲಕ್ಷ ಕೋಟಿ ರೂ.ಗಳ ಭಾಗ-1 ಹಂಚಿಕೆಯಲ್ಲಿ ದೊಡ್ಡದಾಗಿದೆ. 15 ನೇ ಹಣಕಾಸು ಆಯೋಗದ ನಿಗದಿಯ ಪ್ರಕಾರ ಕೇಂದ್ರ ತೆರಿಗೆಗಳು ಮತ್ತು ಸುಂಕಗಳ ಪಾಲಿನ ಅನುಪಾತದಲ್ಲಿ ಈ ಮೊತ್ತವನ್ನು ರಾಜ್ಯಗಳ ನಡುವೆ ಹಂಚಿಕೆ ಮಾಡಲಾಗಿದೆ. ಯೋಜನೆಯ ಇತರ ಭಾಗಗಳು ಸುಧಾರಣೆಗಳಿಗೆ ಸಂಬಂಧಿಸಿವೆ ಅಥವಾ ವಲಯದ ನಿರ್ದಿಷ್ಟ ಯೋಜನೆಗಳಿಗೆ ಸಂಬಂಧಿಸಿವೆ.

ಯೋಜನೆಯ ಭಾಗ-II ರಲ್ಲಿ, ರಾಜ್ಯ ಸರ್ಕಾರದ ಹಳೆಯ ವಾಹನಗಳು ಮತ್ತು ಆಂಬ್ಯುಲೆನ್ಸ್‌ಗಳನ್ನು ರದ್ದುಗೊಳಿಸಲು ರಾಜ್ಯಗಳಿಗೆ ಪ್ರೋತ್ಸಾಹವನ್ನು ನೀಡಲು, ಹಳೆಯ ವಾಹನಗಳ ಮೇಲಿನ ಹೊಣೆಗಾರಿಕೆಗಳನ್ನು ಮನ್ನಾ ಮಾಡಲು, ಹಳೆಯ ವಾಹನಗಳನ್ನು ಗುಜರಿಗೆ ಹಾಕಲು ವ್ಯಕ್ತಿಗಳಿಗೆ ತೆರಿಗೆ ರಿಯಾಯಿತಿಗಳನ್ನು ಒದಗಿಸಲು ಮತ್ತು ಸ್ವಯಂಚಾಲಿತ ವಾಹನ ಪರೀಕ್ಷಾ ಸೌಲಭ್ಯಗಳನ್ನು ಸ್ಥಾಪಿಸಲು 3,000 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಯೋಜನೆಯ ಭಾಗ-III ಮತ್ತು IV ನಗರ ಯೋಜನೆ ಮತ್ತು ನಗರ ಹಣಕಾಸು ಸುಧಾರಣೆಗಳಿಗಾಗಿ ರಾಜ್ಯಗಳಿಗೆ ಪ್ರೋತ್ಸಾಹವನ್ನು ಒದಗಿಸುವ ಗುರಿಯನ್ನು ಹೊಂದಿವೆ. ನಗರ ಯೋಜನಾ ಸುಧಾರಣೆಗಳಿಗಾಗಿ 15,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ, ಅಲ್ಲದೇ, ಹೆಚ್ಚುವರಿ 5,000 ಕೋಟಿ ರೂ.ಗಳನ್ನು ನಗರ ಸ್ಥಳೀಯ ಸಂಸ್ಥೆಗಳನ್ನು ಸಾಲಯೋಗ್ಯವಾಗಿಸಲು ಮತ್ತು ಅವುಗಳ ಆರ್ಥಿಕತೆಯನ್ನು ಸುಧಾರಿಸಲು ರಾಜ್ಯಗಳನ್ನು ಉತ್ತೇಜಿಸುವ ಸಲುವಾಗಿ ಒದಗಿಸಲಾಗಿದೆ.

ಈ ಯೋಜನೆಯು ನಗರ ಪ್ರದೇಶಗಳಲ್ಲಿನ ಪೊಲೀಸ್ ಠಾಣೆಗಳಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ವಸತಿ ಸೌಲಭ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಯೋಜನೆಯ ಭಾಗ-V ಅಡಿಯಲ್ಲಿ ಈ ಉದ್ದೇಶಕ್ಕಾಗಿ 2,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಯೋಜನೆಯ ಮತ್ತೊಂದು ಉದ್ದೇಶವೆಂದರೆ ರಾಷ್ಟ್ರೀಯ ಏಕೀಕರಣವನ್ನು ಉತ್ತೇಜಿಸುವುದು, "ಮೇಕ್ ಇನ್ ಇಂಡಿಯಾ" ಪರಿಕಲ್ಪನೆಯನ್ನು ಮುಂದಕ್ಕೆ ಕೊಂಡೊಯ್ಯುವುದು ಮತ್ತು ಪ್ರತಿ ರಾಜ್ಯದಲ್ಲಿ ಯೂನಿಟಿ ಮಾಲ್ ನಿರ್ಮಾಣದ ಮೂಲಕ "ಒಂದು ಜಿಲ್ಲೆ, ಒಂದು ಉತ್ಪನ್ನ (ಒಡಿಒಪಿ)" ಪರಿಕಲ್ಪನೆಯನ್ನು ಉತ್ತೇಜಿಸುವುದು. ಯೋಜನೆಯ ಭಾಗ-VI ಅಡಿಯಲ್ಲಿ ಈ ಉದ್ದೇಶಕ್ಕಾಗಿ 5,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

ಯೋಜನೆಯ ಭಾಗ-VII, ಮಕ್ಕಳು ಮತ್ತು ಹದಿಹರೆಯದವರಿಗೆ ಪಂಚಾಯತ್ ಮತ್ತು ವಾರ್ಡ್ ಮಟ್ಟದಲ್ಲಿ ಡಿಜಿಟಲ್ ಮೂಲಸೌಕರ್ಯದೊಂದಿಗೆ ಗ್ರಂಥಾಲಯಗಳನ್ನು ಸ್ಥಾಪಿಸಲು ರಾಜ್ಯಗಳಿಗೆ 5,000 ಕೋಟಿ ರೂಪಾಯಿಗಳ ಹಣಕಾಸಿನ ನೆರವು ಒದಗಿಸಲಾಗುವುದು.

'2022-23ಕ್ಕೆ ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು' ಎಂಬ ಹೆಸರಿನ ಇದೇ ರೀತಿಯ ಯೋಜನೆಯನ್ನು ಹಣಕಾಸು ಸಚಿವಾಲಯವು ಕಳೆದ ಹಣಕಾಸು ವರ್ಷದಲ್ಲಿ ಕಾರ್ಯಗತಗೊಳಿಸಿದೆ. ಯೋಜನೆಯಡಿಯಲ್ಲಿ, 95,147.19 ಕೋಟಿ ರೂ.ಗಳ ಬಂಡವಾಳ ಹೂಡಿಕೆ ಪ್ರಸ್ತಾವನೆಗಳನ್ನು ಅನುಮೋದಿಸಲಾಗಿತ್ತು ಮತ್ತು ಕಳೆದ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ 81,195.35 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು.

ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 2020-21ರಲ್ಲಿ ಹಣಕಾಸು ಸಚಿವಾಲಯವು ಮೊದಲ ಬಾರಿಗೆ ಸ್ಥಾಪಿಸಿದ ಬಂಡವಾಳ ಹೂಡಿಕೆ/ವೆಚ್ಚಗಳಿಗಾಗಿ ರಾಜ್ಯಗಳಿಗೆ ಹಣಕಾಸಿನ ನೆರವು ನೀಡುವ ಯೋಜನೆಯು ರಾಜ್ಯಗಳ ಬಂಡವಾಳ ವೆಚ್ಚಕ್ಕೆ ಉತ್ತೇಜನವನ್ನು ನೀಡಿದೆ. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 2020-21ರಲ್ಲಿ ಹಣಕಾಸು ಸಚಿವಾಲಯವು ಮೊದಲ ಬಾರಿಗೆ ಸ್ಥಾಪಿಸಿದ ಬಂಡವಾಳ ಹೂಡಿಕೆ/ಖರ್ಚುಗಳಿಗಾಗಿ ರಾಜ್ಯಗಳಿಗೆ ಹಣಕಾಸಿನ ನೆರವು ನೀಡುವ ಯೋಜನೆಯು ರಾಜ್ಯಗಳ ಬಂಡವಾಳ ವೆಚ್ಚಕ್ಕೆ ಬಹಳ ಸಮಯೋಚಿತ ಉತ್ತೇಜನವನ್ನು ನೀಡಿದೆ. ಯೋಜನೆಯಲ್ಲಿನ ಹೊಂದಾಣಿಕೆ ಮತ್ತು ಸರಳತೆಯ ವಿನ್ಯಾಸವು ಸತತವಾಗಿ ಬಜೆಟ್ ಪೂರ್ವ ಸಮಾಲೋಚನೆಗಳಲ್ಲಿ ಮುಖ್ಯಮಂತ್ರಿಗಳು ಮತ್ತು ರಾಜ್ಯಗಳ ಹಣಕಾಸು ಮಂತ್ರಿಗಳಿಂದ ಪ್ರಶಂಸೆಯನ್ನು ಗಳಿಸಿದೆ.

****

 


(Release ID: 1935556) Visitor Counter : 222