ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಮೆರಿಕ ಕಾಂಗ್ರೆಸ್ ನ ಜಂಟಿ ಅಧಿವೇಶನವನ್ನುದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

प्रविष्टि तिथि: 23 JUN 2023 7:33AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಜೂನ್ 22ರಂದು ಅಮೆರಿಕದ  ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ ಸ್ಪೀಕರ್ ಘನತೆವೆತ್ತ ಶ್ರೀ ಕೆವಿನ್ ಮೆಕಾರ್ಥಿ ಅವರ ಆಹ್ವಾನದ ಮೇರೆಗೆ ಅಮೆರಿಕ ಕಾಂಗ್ರೆಸ್ ನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸೆನೆಟ್ ಬಹುಮತದ ನಾಯಕ ಗೌರವಾನ್ವಿತ ಶ್ರೀ ಚಾರ್ಲ್ಸ್ ಶುಮರ್ ; ಸೆನೆಟ್ ರಿಪಬ್ಲಿಕನ್ ನಾಯಕ ಗೌರವಾನ್ವಿತ ಶ್ರೀ ಮಿಚ್ ಮೆಕಾನೆಲ್ ; ಮತ್ತು ಹೌಸ್ ಡೆಮಾಕ್ರಟಿಕ್ ಲೀಡರ್ ಗೌರವಾನ್ವಿತ ಶ್ರೀ ಹಕೀಮ್ ಜೆಫ್ರಿಸ್ ಉಪಸ್ಥಿತರಿದ್ದರು.
ಅಮೆರಿಕದ ಉಪಾಧ್ಯಕ್ಷೆ ಗೌರವಾನ್ವಿತ ಶ್ರೀಮತಿ ಕಮಲಾ ಹ್ಯಾರಿಸ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕ್ಯಾಪಿಟಲ್ ಹಿಲ್ ಗೆ ಆಗಮಿಸಿದ ಪ್ರಧಾನಮಂತ್ರಿ ಅವರಿಗೆ ಕಾಂಗ್ರೆಸ್ ನಾಯಕರು ಔಪಚಾರಿಕ ಸ್ವಾಗತ ನೀಡಿದರು. ತದನಂತರ, ಪ್ರಧಾನ ಮಂತ್ರಿ ಅವರು ಹೌಸ್ ಸ್ಪೀಕರ್ ಕೆವಿನ್ ಮೆಕಾರ್ಥಿ ಮತ್ತು ಕಾಂಗ್ರೆಸ್ ನಾಯಕರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿದರು.

ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ, ಭಾರತ-ಅಮೆರಿಕ ಬಾಂಧವ್ಯವನ್ನು ಗಾಢಗೊಳಿಸಲು ಅಮೆರಿಕ ಕಾಂಗ್ರೆಸ್ ನಲ್ಲಿ ದೀರ್ಘಕಾಲದ ಮತ್ತು ಬಲವಾದ ದ್ವಿಪಕ್ಷೀಯ ಬೆಂಬಲಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಅವರು ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧಗಳಲ್ಲಿ ಆಗಿರುವ ಕ್ಷಿಪ್ರ ಪ್ರಗತಿಯ ಬಗ್ಗೆ ಮಾತನಾಡಿದರು ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸುವ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು. ಭಾರತ ಸಾಧಿಸಿರುವ ಅಗಾಧ ಪ್ರಗತಿ ಮತ್ತು ಅದು ವಿಶ್ವಕ್ಕೆ ನೀಡುತ್ತಿರುವ ಅವಕಾಶಗಳ ಬಗ್ಗೆಯೂ ಅವರು ವಿವರಿಸಿದರು.

ಪ್ರಧಾನ ಮಂತ್ರಿ ಅವರ ಗೌರವಾರ್ಥ ಸ್ಪೀಕರ್ ಮೆಕಾರ್ಥಿ ಸ್ವಾಗತವನ್ನು ಆಯೋಜಿಸಿದ್ದರು. ಅಮೆರಿಕ ಕಾಂಗ್ರೆಸ್ ನ ಜಂಟಿ ಅಧಿವೇಶನವನ್ನುದ್ದೇಶಿಸಿ ಪ್ರಧಾನಿ ಮಾಡಿದ ಎರಡನೇ ಭಾಷಣ ಇದಾಗಿದೆ. ಅವರು ಈ ಹಿಂದೆ  2016 ರ ಸೆಪ್ಟೆಂಬರ್ ನಲ್ಲಿ ಅಮೆರಿಕಗೆ ಅಧಿಕೃತ ಭೇಟಿಯ ಸಮಯದಲ್ಲಿ ಅಮೆರಿಕ ಕಾಂಗ್ರೆಸ್ ಅನ್ನು ಉದ್ದೇಶಿಸಿ ಮಾತನಾಡಿದರು.

****


(रिलीज़ आईडी: 1934743) आगंतुक पटल : 167
इस विज्ञप्ति को इन भाषाओं में पढ़ें: Punjabi , English , Urdu , Marathi , Marathi , हिन्दी , Nepali , Assamese , Bengali , Manipuri , Gujarati , Odia , Tamil , Telugu , Malayalam