ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಅಂತರಾಷ್ಟ್ರೀಯ ಯೋಗ ದಿನಾಚರಣೆ 2023ರ ಮುಖ್ಯ ಅತಿಥಿಯಾಗಿ ಉಪರಾಷ್ಟ್ರಪತಿಗಳು ಭಾಗವಹಿಸಲಿದ್ದಾರೆ


ಉಪರಾಷ್ಟ್ರಪತಿಯವರ ನೇತೃತ್ವದಲ್ಲಿ ಮಧ್ಯಪ್ರದೇಶದ ಜಬಲ್ಪುರದಲ್ಲಿ ಸಾಮೂಹಿಕ ಯೋಗ ಪ್ರದರ್ಶನ

ಭೇಟಿಯ ವೇಳೆ ನರ್ಮದಾ ಜೀ ಅವರ ಆರತಿಯಲ್ಲಿ ಉಪರಾಷ್ಟ್ರಪತಿಯವರು ಪಾಲ್ಗೊಳ್ಳಲಿದ್ದಾರೆ

Posted On: 19 JUN 2023 4:15PM by PIB Bengaluru

2023 ರ ಜೂನ್ 21 ರಂದು ಜಬಲ್ ಪುರದಲ್ಲಿ ನಡೆಯುವ ಅಂತರಾಷ್ಟ್ರೀಯ ಯೋಗ ದಿನಾಚರಣೆ (ಐಡಿಎ 2023) ಆಚರಣೆಯ ಕಾರ್ಯಕ್ರಮದಲ್ಲಿ ಭಾರತದ ಉಪಾಧ್ಯಕ್ಷರಾದ ಶ್ರೀ ಜಗದೀಪ್ ಧನಕರ್ ಅವರು ಮುಖ್ಯ ಅತಿಥಿಯಾಗಲಿದ್ದಾರೆ. ಸಭೆಯನ್ನು ಉದ್ದೇಶಿಸಿ ಉಪರಾಷ್ಟ್ರಪತಿಯವರು ಭಾಷಣ ಮಾಡಲಿದ್ದಾರೆ, ನಂತರ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. “‘ವಸುಧೈವ ಕುಟುಂಬಕಂ’ಗಾಗಿ ಯೋಗ”ಇದು ಅಂತರಾಷ್ಟ್ರೀಯ ಯೋಗ ದಿನಾಚರಣೆ 2023 ರ ಧ್ಯೇಯವಾಕ್ಯವಾಗಿದೆ.

2014 ರಲ್ಲಿ ವಿಶ್ವಸಂಸ್ಥೆ ಮಾಡಿದ ನಿರ್ಣಯದ ಮೂಲಕ ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವೆಂದು ಗುರುತಿಸಿ ಈಗಾಗಲೇ ಒಂಬತ್ತು ವರ್ಷಗಳಾಗಿದೆ. ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ಈ ವರ್ಷ ನಡೆಯಲಿರುವ ಅಂತರರಾಷ್ಟ್ರೀಯ ಯೋಗ ದಿನ 2023 ಇದರ ಜಾಗತಿಕ ಆಚರಣೆಯ ನೇತೃತ್ವವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ವಹಿಸಲಿದ್ದಾರೆ. ಹಾಗೂ ಅಂತರರಾಷ್ಟ್ರೀಯ ಯೋಗ ದಿನ 2023 ಇದರ ರಾಷ್ಟ್ರೀಯ ಆಚರಣೆಯ ನೇತೃತ್ವವನ್ನು ಭಾರತದ ಉಪಾಧ್ಯಕ್ಷರಾದ ಶ್ರೀ ಜಗದೀಪ್ ಧನಕರ್ ಅವರು ವಹಿಸಲಿದ್ದಾರೆ.

ಶ್ರೀ ಜಗದೀಪ್ ಧನಕರ್ ಅವರು ಶ್ರೀಮತಿ (ಡಾ.) ಸುದೇಶ್ ಧನಕರ್ ಅವರ ಜೊತೆಗೆ ಜೂನ್ 20 ರಂದು ಜಬಲ್ಪುರವನ್ನು ತಲುಪಲಿದ್ದಾರೆ. ಅಲ್ಲಿಅವರು ಪ್ರಾರ್ಥನೆ ಸಲ್ಲಿಸಲಿದ್ದಾರೆ ಮತ್ತು ಗ್ವಾರಿಘಾಟ್ನಲ್ಲಿ ನರ್ಮದಾ ಜೀ ಅವರ ಆರತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಂತರರಾಷ್ಟ್ರೀಯ ಯೋಗ ದಿನ 2023 ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಮಂಗುಭಾಯಿ ಪಟೇಲ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಆಯುಷ್ ಮತ್ತು ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಶ್ರೀ ಸರ್ಬಾನಂದ ಸೋನೋವಾಲ್ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ. 

***


(Release ID: 1933468) Visitor Counter : 169