ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ವಿಶೇಷ ಒಲಿಂಪಿಕ್ಸ್‌ ವಿಶ್ವ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವ ಭಾರತ ತಂಡಕ್ಕೆ ಶುಭ ಹಾರೈಸಿದ ಪ್ರಧಾನಮಂತ್ರಿ

प्रविष्टि तिथि: 18 JUN 2023 4:31PM by PIB Bengaluru

ಬರ್ಲಿನ್‌ ನಲ್ಲಿ ಆರಂಭವಾಗಲಿರುವ ವಿಶೇಷ ಒಲಿಂಪಿಕ್ಸ್‌ ವಿಶ್ವ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶುಭ ಕೋರಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್‌ ನಲ್ಲಿ :

“ಬರ್ಲಿನ್‌ ನಲ್ಲಿ ವಿಶೇಷ ಒಲಿಂಪಿಕ್ಸ್‌ ವಿಶ್ವ ಕ್ರೀಡಾಕೂಟ ಆರಂಭವಾಗುತ್ತಿದ್ದು, ಭಾರತ ತಂಡಕ್ಕೆ ನನ್ನ ಶುಭಾಶಯಗಳು. ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿರುವ ಪ್ರತಿಯೊಬ್ಬ ಅಥ್ಲೀಟ್‌ ಬಗ್ಗೆ ನಮಗೆ ಹೆಮ್ಮೆ ಇದ್ದು, ಇವರು ತಮ್ಮ ಚೈತನ್ಯ, ದೃಢ ನಿಶ್ಚಯ ಮತ್ತು ಪುಟಿದೇಳುವ ಮೂಲಕ ಪ್ರಕಾಶಮಾನವಾಗಿ ಬೆಳಗಲಿ” ಎಂದು ಹೇಳಿದ್ದಾರೆ.

***


(रिलीज़ आईडी: 1933287) आगंतुक पटल : 163
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Assamese , Bengali , Punjabi , Gujarati , Odia , Tamil , Telugu , Malayalam