ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಕ್ತದಾನದ ಅಮೃತ ಮಹೋತ್ಸವದಲ್ಲಿ ರಕ್ತದಾನ ಮಾಡಿದವರನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ 

प्रविष्टि तिथि: 14 JUN 2023 9:47PM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವ ರಕ್ತದಾನಿಗಳ ದಿನದಂದು, ರಕ್ತದಾನ ಮಾಡಿದ ದಾನಿಗಳು ಮತ್ತು ರಕ್ತದಾನ ಅಭಿಯಾನಗಳನ್ನು ಶ್ಲಾಘಿಸಿದರು.

"ರಕ್ತ ನೀಡಿ, ಪ್ಲಾಸ್ಮಾ ನೀಡಿ, ಜೀವನವನ್ನು ಹಂಚಿಕೊಳ್ಳಿ, ರಕ್ತವನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರಿ" ಎಂಬ ಸಂದೇಶವನ್ನು ಹರಡುವ ಮೂಲಕ ಇಂದು ವಿಶ್ವ ರಕ್ತದಾನಿಗಳ ದಿನವನ್ನು ರಾಷ್ಟ್ರಾದ್ಯಂತ ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ರಕ್ತದಾನ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ರಕ್ತದಾನ ಶಿಬಿರಗಳನ್ನು ಆಯೋಜಿಸಿ ರಕ್ತದಾನಿಗಳನ್ನು ಅಭಿನಂದಿಸಲಾಯಿತು.

ಈ ಕುರಿತು ಟ್ವೀಟ್ ಮಾಡಿದ ಪ್ರಧಾನ ಮಂತ್ರಿಗಳು:

"ನಾನು ಎಲ್ಲಾ ರಕ್ತದಾನಿಗಳನ್ನು ಅಭಿನಂದಿಸುತ್ತೇನೆ. ಅವರ ದಯೆಯ ಈ ಕಾರ್ಯವು ಅಸಂಖ್ಯಾತ ಜೀವಗಳನ್ನು ಉಳಿಸಲು ಸಹಾಯಕವಾಗುತ್ತದೆ. ಇದು ಭಾರತದ ಸೇವೆ ಮತ್ತು ಸಹಾನುಭೂತಿಯನ್ನು ಪುನಃ ದೃಢೀಕರಿಸುತ್ತದೆ." ಎಂದು ಬರೆದುಕೊಂಡಿದ್ದಾರೆ.

***


(रिलीज़ आईडी: 1932522) आगंतुक पटल : 189
इस विज्ञप्ति को इन भाषाओं में पढ़ें: Assamese , English , Urdu , हिन्दी , Marathi , Manipuri , Bengali , Punjabi , Gujarati , Odia , Tamil , Telugu , Malayalam