ಪ್ರಧಾನ ಮಂತ್ರಿಯವರ ಕಛೇರಿ

40.2 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಎನ್ಎಚ್-334ಬಿ ಅಭಿವೃದ್ಧಿಗೆ  ಬಾಳಿಕೆ ಬರುವ ಕಚ್ಚಾವಸ್ತುಗಳ ಬಳಕೆ; ಪ್ರಧಾನ ಮಂತ್ರಿ ಶ್ಲಾಘನೆ

Posted On: 14 JUN 2023 9:45PM by PIB Bengaluru

40.2 ಕಿಲೋ ಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿ ಎನ್ಎಚ್-334ಬಿ ಅಭಿವೃದ್ಧಿಪಡಿಸಲು  ಬಾಳಿಕೆ ಬರುವ ಕಚ್ಚಾವಸ್ತುಗಳನ್ನು ಬಳಕೆ ಮಾಡಿರುವ ಕ್ರಮಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವೆಚ್ಚ ಪರಿಣಾಮಕಾರಿ ಮತ್ತು ಪರಿಸರ-ಸ್ನೇಹಿ ಆಗಿರುವ ಕಚ್ಚಾ ವಸ್ತುಗಳಾದ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಹಾರು ಬೂದಿ ಬಳಕೆಗೆ ಆದ್ಯತೆ ನೀಡಿರುವುದು ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.. ಉತ್ತರ ಪ್ರದೇಶ-ಹರಿಯಾಣ ಗಡಿ ಭಾಗದ ಬಾಗ್ಪತ್ ನಿಂದ ಆರಂಭವಾಗುವ ಈ ರಾಷ್ಟ್ರೀಯ ಹೆದ್ದಾರಿಯು ಹರಿಯಾಣದ ರೊಹ್ನಾವರೆಗೆ ವ್ಯಾಪಿಸಿದೆ.

ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಟ್ವೀಟ್ ಗೆ ಮರುಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ;

"ಈ ಹೆದ್ದಾರಿಯು ಸುಸ್ಥಿರ ಅಭಿವೃದ್ಧಿ ಮತ್ತು ಸಂಪರ್ಕ ಹೆಚ್ಚಳದ ಪರಿಪೂರ್ಣ ಮಿಶ್ರಣ. ಇದು ಈ ಪ್ರದೇಶದಲ್ಲಿ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ" ಎಂದು ಪ್ರಧಾನಿ ತಿಳಿಸಿದ್ದಾರೆ.

***



(Release ID: 1932520) Visitor Counter : 100