ಪ್ರಕಟಣಾ ದಿನಾಂಕ:
06 JUN 2023 10:45AM by PIB Bengaluru
ದಕ್ಷಿಣ ಅಮೆರಿಕದ ಸುರಿನಾಮ್ ದೇಶದ ಅತ್ಯುನ್ನತ ನಾಗರಿಕ ಗೌರವ " ಆರ್ಡರ್ ಆಫ್ ದಿ ಚೈನ್ ಆಫ್ ದಿ ಯೆಲ್ಲೋ ಸ್ಟಾರ್'" ಪ್ರಶಸ್ತಿಗೆ ಪಾತ್ರರಾದ ರಾಷ್ಟ್ರಪತಿಗಳಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು,"ದಕ್ಷಿಣ ಅಮೆರಿಕದ ಸುರಿನಾಮ್ ದೇಶದ ಅತ್ಯುನ್ನತ ನಾಗರಿಕ ಗೌರವ " ಆರ್ಡರ್ ಆಫ್ ದಿ ಚೈನ್ ಆಫ್ ದಿ ಯೆಲ್ಲೋ ಸ್ಟಾರ್'' ಪ್ರಶಸ್ತಿಗೆ ಪಾತ್ರರಾದ ರಾಷ್ಟ್ರಪತಿಗಳಿಗೆ ಅಭಿನಂದನೆಗಳು. ಸುರಿನಾಮ್ ದೇಶ ಹಾಗೂ ಜನತೆ ತೋರಿರುವ ಈ ವಿಶೇಷ ಗೌರವವು ಉಭಯ ರಾಷ್ಟ್ರಗಳ ನಡುವಿನ ಸ್ನೇಹ ಬಾಂದವ್ಯದ ಸಂಕೇತವೆನಿಸಿದೆ" ಎಂದು ಬಣ್ಣಿಸಿದ್ದಾರೆ.
***