ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದ ಮೂರನೇ ಆವೃತ್ತಿಯನ್ನು ಮೇ 25 ರಂದು ಪ್ರಧಾನಿ ಉದ್ಘಾಟಿಸಲಿದ್ದಾರೆ


21 ಕ್ರೀಡೆಗಳಲ್ಲಿ 200 ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳ 4750 ಕ್ಕೂ ಹೆಚ್ಚು ಕ್ರೀಡಾಪಟುಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗುವ ಕ್ರೀಡಾಕೂಟ

ಕ್ರೀಡಾಕೂಟದ ಮ್ಯಾಸ್ಕಾಟ್‌ಗೆ ಜಿತು ಎಂದು ಹೆಸರಿಸಲಾಗಿದೆ, ಇದು ಉತ್ತರಪ್ರದೇಶ ರಾಜ್ಯ ಪ್ರಾಣಿ ಜೌಗು ಜಿಂಕೆ (ಬರಸಿಂಗ) ಯನ್ನು ಪ್ರತಿನಿಧಿಸುತ್ತದೆ

ಮೇ 25 ರಿಂದ ಜೂನ್ 3 ರವರೆಗೆ ಕ್ರೀಡಾಕೂಟ ನಡೆಯುತ್ತದೆ

Posted On: 24 MAY 2023 3:42PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ 2022 ಅನ್ನು ಮೇ 25 ರಂದು ಸಂಜೆ 7 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಲಿದ್ದಾರೆ.

ಪ್ರಧಾನಮಂತ್ರಿಯವರು ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಬೆಳೆಸಲು ಮತ್ತು ಯುವಜನತೆಯನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲು ಹೆಚ್ಚಿನ ಗಮನವನ್ನು ನೀಡಿದ್ದಾರೆ. ಉದಯೋನ್ಮುಖ ಕ್ರೀಡಾಪಟುಗಳನ್ನು ಬೆಂಬಲಿಸಲು ಸರ್ಕಾರವು ವಿವಿಧ ಯೋಜನೆಗಳನ್ನು ಪ್ರಾರಂಭಿಸಿದೆ ಮತ್ತು ದೇಶದಲ್ಲಿ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಪ್ರಯತ್ನಗಳನ್ನು ಮಾಡಲಾಗಿದೆ. ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ ಆಯೋಜನೆಯು ಈ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ.

ಈ ವರ್ಷ, ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದ ಮೂರನೇ ಆವೃತ್ತಿಯು ಉತ್ತರ ಪ್ರದೇಶದಲ್ಲಿ ಮೇ 25 ರಿಂದ ಜೂನ್ 3 ರವರೆಗೆ ನಡೆಯಲಿದೆ. ವಾರಾಣಸಿ, ಗೋರಖ್‌ಪುರ, ಲಕ್ನೋ ಮತ್ತು ಗೌತಮ್ ಬುದ್ಧ ನಗರದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. 21 ಕ್ರೀಡೆಗಳಲ್ಲಿ 200ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳ 4750ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಕ್ರೀಡಾಕೂಟದ ಸಮಾರೋಪ ಸಮಾರಂಭವು ಜೂನ್ 3 ರಂದು ವಾರಾಣಸಿಯಲ್ಲಿ ನಡೆಯಲಿದೆ.

ಗೇಮ್ಸ್‌ನ ಮ್ಯಾಸ್ಕಾಟ್‌ಗೆ ಜಿತು ಎಂದು ಹೆಸರಿಸಲಾಗಿದೆ, ಇದು ಉತ್ತರ ಪ್ರದೇಶದ ರಾಜ್ಯ ಪ್ರಾಣಿಯಾದ ಜೌಗು ಜಿಂಕೆ (ಬರಸಿಂಗ) ಅನ್ನು ಪ್ರತಿನಿಧಿಸುತ್ತದೆ.

******



(Release ID: 1927058) Visitor Counter : 153