ಪ್ರಧಾನ ಮಂತ್ರಿಯವರ ಕಛೇರಿ

ನಗರ ಅನಿಲ ವಿತರಣಾ ಜಾಲದ ಪ್ರಗತಿಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ


ನಗರ ಅನಿಲ ವಿತರಣಾ ಜಾಲವು ಈಗ 630 ಜಿಲ್ಲೆಗಳನ್ನು ಒಳಗೊಂಡಿದೆ, ಇದು 2014 ರಲ್ಲಿ 66 ರಷ್ಟಿತ್ತು

Posted On: 05 APR 2023 11:12AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಗರ ಅನಿಲ ವಿತರಣಾ ಜಾಲದ ವ್ಯಾಪ್ತಿಯನ್ನು ಸುಧಾರಿಸಿದ್ದಕ್ಕಾಗಿ ಅದರಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಶ್ಲಾಘಿಸಿದರು.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು ಟ್ವೀಟ್ ಮಾಡಿ, ಅನುಕೂಲಕರ ಮತ್ತು ಕೈಗೆಟುಕುವ ಇಂಧನವನ್ನು ಒದಗಿಸಲು ನಗರ ಅನಿಲ ವಿತರಣಾ ಜಾಲವು ಭಾರಿ ದಾಪುಗಾಲು ಇಟ್ಟಿದೆ ಎಂದು ಮಾಹಿತಿ ನೀಡಿದರು. 2014 ರಲ್ಲಿ ಕೇವಲ 66 ಜಿಲ್ಲೆಗಳಿಂದ, ಸಿಜಿಡಿ ಜಾಲವು 2023 ರಲ್ಲಿ 630 ಜಿಲ್ಲೆಗಳನ್ನು ಒಳಗೊಂಡಿದೆ; 2014 ರಲ್ಲಿ ಕೇವಲ 25.40 ಲಕ್ಷ ಇದ್ದ ದೇಶೀಯ ಪಿಎನ್ಜಿ ಸಂಪರ್ಕಗಳ ಸಂಖ್ಯೆ ಈಗ 103.93 ಲಕ್ಷಕ್ಕೆ ಏರಿದೆ.

ಕೇಂದ್ರ ಸಚಿವರ ಟ್ವೀಟ್ ಗೆ ಪ್ರತ್ಯುತ್ತರವಾಗಿ, ಪ್ರಧಾನಿ ಟ್ವೀಟ್ ಮಾಡಿದ್ದಾರೆ;

"ಇವು ಉತ್ತಮ ಸಂಖ್ಯೆಗಳು. ಈ ಕವರೇಜ್ ಅನ್ನು ಸಾಧ್ಯವಾಗಿಸಲು ವರ್ಷಗಳಿಂದ ಶ್ರಮಿಸಿದ ಎಲ್ಲರನ್ನೂ ನಾನು ಪ್ರಶಂಸಿಸುತ್ತೇನೆ."

 

***



(Release ID: 1926823) Visitor Counter : 93