ಪ್ರಧಾನ ಮಂತ್ರಿಯವರ ಕಛೇರಿ

ಈಸ್ಟರ್ ಪ್ರಯುಕ್ತ ಜನತೆಗೆ ಶುಭ ಕೋರಿದ ಪ್ರಧಾನಿ

Posted On: 09 APR 2023 10:02AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈಸ್ಟರ್ ಪ್ರಯುಕ್ತ ಜನತೆಗೆ ಶುಭ ಕೋರಿದ್ದಾರೆ. ಈ ವಿಶೇಷ ಸಂದರ್ಭವು ನಮ್ಮ ಸಮಾಜದಲ್ಲಿ ಸೌಹಾರ್ದತೆಯ ಮನೋಭಾವವನ್ನು ಮತ್ತಷ್ಟು ಆಳವಾಗಿಸಲಿ ಎಂದು ಹಾರೈಸಿದ್ದಾರೆ.

ಈ ಕುರಿತು ಟ್ವೀಟ್ನಲ್ಲಿ ಪ್ರಧಾನಿ ಹೀಗೆ ಹೇಳಿದ್ದಾರೆ:

"ಹ್ಯಾಪಿ ಈಸ್ಟರ್! ಈ ವಿಶೇಷ ಸಂದರ್ಭವು ನಮ್ಮ ಸಮಾಜದಲ್ಲಿ ಸಾಮರಸ್ಯದ ಮನೋಭಾವವನ್ನು ಆಳವಾಗಿಸಲಿ. ಸಮಾಜಕ್ಕೆ ಸೇವೆ ಸಲ್ಲಿಸಲು ಮತ್ತು ದೀನದಲಿತರ ಸಬಲೀಕರಣಕ್ಕೆ ಸಹಾಯ ಮಾಡಲು ಜನರನ್ನು ಪ್ರೇರೇಪಿಸಲಿ. ಈ ದಿನದಂದು ನಾವು ಭಗವಾನ್ ಕ್ರಿಸ್ತನ ಪವಿತ್ರ ಆಲೋಚನೆಗಳನ್ನು ನೆನಪಿಸಿಕೊಳ್ಳೋಣ.

 

***



(Release ID: 1921919) Visitor Counter : 78