ಪ್ರಧಾನ ಮಂತ್ರಿಯವರ ಕಛೇರಿ

ಏಪ್ರಿಲ್ 27 ರಂದು ಸ್ವಾಗಾಟ್ ಉಪಕ್ರಮದ 20 ವರ್ಷಗಳ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಗಿ


​​​​​​​2003ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸ್ವಾಗಾಟ್ ಕಾರ್ಯಕ್ರಮ ಆರಂಭ

ಇದು ದೇಶದಲ್ಲೇ ಮೊದಲ ತಂತ್ರಜ್ಞಾನ ಆಧಾರಿತ ಕುಂದುಕೊರತೆ ಪರಿಹಾರ ಕಾರ್ಯಕ್ರಮ

ಜನರ ಸಮಸ್ಯೆಗಳನ್ನು ಪರಿಹರಿಸುವ ತಂತ್ರಜ್ಞಾನದ ಸಾಮರ್ಥ್ಯದ ಬಗ್ಗೆ ಆಗಿನ ಸಿಎಂ ಆಗಿದ್ದ ಮೋದಿ ಅವರು ಆರಂಭಿಕ ಕೈಗೂಡುವಿಕೆಯನ್ನು ತೋರಿಸಿಕೊಟ್ಟಿದ್ದರು

ಸ್ವಾಗಾಟ್‌ನ ವಿಶಿಷ್ಟತೆಯೆಂದರೆ ಇದು ಸಾಮಾನ್ಯ ಜನರು ತಮ್ಮ ಕುಂದುಕೊರತೆಗಳನ್ನು ನೇರವಾಗಿ ಮುಖ್ಯಮಂತ್ರಿಗಳಿಗೆ ತಿಳಿಸಲು ಸಹಾಯ ಮಾಡುತ್ತದೆ

ಜನರ ಕುಂದುಕೊರತೆಗಳಿಗೆ ಪರಿಹಾರವನ್ನು ತ್ವರಿತ, ದಕ್ಷ ಮತ್ತು ಸಮಯಕ್ಕೆ ಬದ್ಧವಾಗಿ ಒದಗಿಸಿ ಜೀವನ ಸುಲಭಗೊಳಿಸುತ್ತದೆ

ಇಲ್ಲಿಯವರೆಗೆ ಶೇಕಡಾ 99ಕ್ಕಿಂತಲೂ ಹೆಚ್ಚು ಕುಂದುಕೊರತೆಗಳನ್ನು ಪರಿಹರಿಸಲಾಗಿದೆ

Posted On: 25 APR 2023 5:06PM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ ಏಪ್ರಿಲ್ 27 ರಂದು ಸಂಜೆ 4 ಗಂಟೆಗೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಗುಜರಾತ್‌ನಲ್ಲಿ ಸ್ವಾಗಾಟ್ 20 ವರ್ಷಗಳನ್ನು ಪೂರೈಸುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ, ಪ್ರಧಾನಮಂತ್ರಿ ಅವರು ಯೋಜನೆಯ ಹಿಂದಿನ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. 20 ವರ್ಷಗಳ ಉಪಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಗುಜರಾತ್ ಸರ್ಕಾರವು ಸ್ವಾಗಾಟ್ ಸಪ್ತಾಹವನ್ನು ಆಚರಿಸುತ್ತಿದೆ.

SWAGAT (ತಂತ್ರಜ್ಞಾನದ ಅನ್ವಯದ ಮೂಲಕ ಕುಂದುಕೊರತೆಗಳನ್ನು ರಾಜ್ಯಾದ್ಯಂತ ಬಗೆಹರಿಸುವುದು-State Wide Attention on Grievances by Application of Technology) ನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಏಪ್ರಿಲ್ 2003 ರಲ್ಲಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪ್ರಾರಂಭಿಸಿದರು. ರಾಜ್ಯದ ಜನರ ಸಮಸ್ಯೆಗಳನ್ನು ಬಗೆಹರಿಸುವುದು ಮುಖ್ಯಮಂತ್ರಿಯ ಪ್ರಮುಖ ಜವಾಬ್ದಾರಿ ಎಂಬ ನಂಬಿಕೆಯಿಂದ ಕಾರ್ಯಕ್ರಮದ ಆರಂಭಕ್ಕೆ ಚಾಲನೆ ನೀಡಲಾಯಿತು. ಈ ಸಂಕಲ್ಪದೊಂದಿಗೆ, ಜನರ ಜೀವನ ಸುಲಭಗೊಳಿಸಲು ತಂತ್ರಜ್ಞಾನದ ಮೂಲಕ ಜೀವನ ಮಟ್ಟ ಸುಧಾರಿಸಲು ಆಗಿನ ಸಿಎಂ ಆಗಿ ಮೋದಿಯವರು ತಂತ್ರಜ್ಞಾನ ಆಧಾರಿತ ಕುಂದುಕೊರತೆ ಪರಿಹಾರ ಕಾರ್ಯಕ್ರಮವನ್ನು ಪ್ರಾರಂಭಿಸಿದರು. 
ಈ ಕಾರ್ಯಕ್ರಮದ ಮುಖ್ಯ ಉದ್ದೇಶವೆಂದರೆ, ಜನರು ತಮ್ಮ ದೈನಂದಿನ ಕುಂದುಕೊರತೆಗಳನ್ನು ತ್ವರಿತವಾಗಿ, ಪರಿಣಾಮಕಾರಿಯಾಗಿ ಮತ್ತು ಸಮಯಕ್ಕೆ ಅನುಗುಣವಾಗಿ ತಂತ್ರಜ್ಞಾನ ಮೂಲಕ ಬಗೆಹರಿಸಿಕೊಳ್ಳುವುದು. ತಂತ್ರಜ್ಞಾನವನ್ನು ಬಳಸಿಕೊಂಡು ನಾಗರಿಕರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವುದಾಗಿದೆ. ಕಾಲಾನಂತರದಲ್ಲಿ, SWAGAT ಜನರ ಜೀವನದಲ್ಲಿ ಸಾಕಷ್ಟು ಬದಲಾವಣೆ, ಪರಿಣಾಮವನ್ನು ಉಂಟುಮಾಡಿತು. ಕಾಗದರಹಿತ, ಪಾರದರ್ಶಕ ಮತ್ತು ಜಗಳ-ಮುಕ್ತ ರೀತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸಲು ನಾಗರಿಕರಿಗೆ ಪರಿಣಾಮಕಾರಿ ಸಾಧನವಾಯಿತು.

ಸ್ವಾಗಾಟ್‌ನ ವಿಶಿಷ್ಟತೆಯೆಂದರೆ ಇದು ಸಾಮಾನ್ಯ ಜನರು ತಮ್ಮ ಕುಂದುಕೊರತೆಗಳನ್ನು ನೇರವಾಗಿ ಮುಖ್ಯಮಂತ್ರಿಗಳಿಗೆ ತಿಳಿಸಲು ಸಹಾಯ ಮಾಡುತ್ತದೆ. ಇದು ಪ್ರತಿ ತಿಂಗಳ ನಾಲ್ಕನೇ ಗುರುವಾರದಂದು ನಡೆಯುತ್ತದೆ, ಇದರಲ್ಲಿ ಮುಖ್ಯಮಂತ್ರಿಗಳು ಕುಂದುಕೊರತೆ ಪರಿಹಾರಕ್ಕಾಗಿ ನಾಗರಿಕರೊಂದಿಗೆ ಸಂವಾದ ನಡೆಸುತ್ತಾರೆ. ಕುಂದುಕೊರತೆಗಳ ತ್ವರಿತ ಪರಿಹಾರದ ಮೂಲಕ ಜನರು ಮತ್ತು ಸರ್ಕಾರದ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ. ಎಲ್ಲಾ ಅಪ್ಲಿಕೇಶನ್‌ಗಳ ಪ್ರಕ್ರಿಯೆಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ಇಲ್ಲಿಯವರೆಗೆ ಸಲ್ಲಿಸಲಾದ ಶೇಕಡಾ 99ಕ್ಕಿಂತ ಹೆಚ್ಚು ಕುಂದುಕೊರತೆಗಳನ್ನು ಪರಿಹರಿಸಲಾಗಿದೆ.

SWAGAT ಆನ್‌ಲೈನ್ ಕಾರ್ಯಕ್ರಮ ನಾಲ್ಕು ಘಟಕಗಳನ್ನು ಹೊಂದಿದೆ: ರಾಜ್ಯ ಸ್ವಾಗತ, ಜಿಲ್ಲಾ ಸ್ವಾಗತ, ತಾಲೂಕು ಸ್ವಾಗತ ಮತ್ತು ಗ್ರಾಮ ಸ್ವಾಗತ. ರಾಜ್ಯ ಸ್ವಾಗತ್ ಸಮಯದಲ್ಲಿ ಮುಖ್ಯಮಂತ್ರಿ ಸ್ವತಃ ಸಾರ್ವಜನಿಕ ವಿಚಾರಣೆಗೆ ಹಾಜರಾಗುತ್ತಾರೆ. ಜಿಲ್ಲಾಧಿಕಾರಿಗಳು ಜಿಲ್ಲಾ ಸ್ವಾಗತ್‌ನ ಉಸ್ತುವಾರಿ ವಹಿಸಿದ್ದರೆ, ಮಮ್ಲತಾರ್ ಮತ್ತು ವರ್ಗ-1 ಅಧಿಕಾರಿ ತಾಲ್ಲೂಕು ಸ್ವಾಗತ್‌ನ ಮುಖ್ಯಸ್ಥರಾಗಿರುತ್ತಾರೆ. ಗ್ರಾಮ ಸ್ವಾಗಾಟ್‌ನಲ್ಲಿ, ನಾಗರಿಕರು ಪ್ರತಿ ತಿಂಗಳ 1 ರಿಂದ 10 ನೇ ತಾರೀಖಿನವರೆಗೆ ತಲಾತಿ/ಮಂತ್ರಿಗೆ ಅರ್ಜಿಯನ್ನು ಸಲ್ಲಿಸುತ್ತಾರೆ. ಇವುಗಳನ್ನು ಪರಿಹಾರಕ್ಕಾಗಿ ತಾಲೂಕು ಸ್ವಾಗಾಟ್ ಕಾರ್ಯಕ್ರಮದಲ್ಲಿ ಸೇರಿಸಲಾಗಿದೆ. ಹೆಚ್ಚುವರಿಯಾಗಿ, ಲೋಕ ಫರಿಯಾದ್ ಕಾರ್ಯಕ್ರಮವು ನಾಗರಿಕರಿಗಾಗಿ ಕಾರ್ಯನಿರ್ವಹಿಸುತ್ತದೆ, ಇದರಲ್ಲಿ ಅವರು ತಮ್ಮ ಕುಂದುಕೊರತೆಗಳನ್ನು SWAGAT ಘಟಕದಲ್ಲಿ ಸಲ್ಲಿಸುತ್ತಾರೆ.

ಸರ್ಕಾರದ ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸ್ಪಂದಿಸುವಿಕೆಯನ್ನು ಸುಧಾರಿಸಲು 2010 ರಲ್ಲಿ ವಿಶ್ವಸಂಸ್ಥೆ ಸಾರ್ವಜನಿಕ ಸೇವಾ ಪ್ರಶಸ್ತಿ ಸೇರಿದಂತೆ SWAGAT ಆನ್‌ಲೈನ್ ಕಾರ್ಯಕ್ರಮಕ್ಕೆ ಇದುವರೆಗೆ ಹತ್ತು ಹಲವಾರು ಪ್ರಶಸ್ತಿಗಳು ಸಂದಿವೆ.

****



(Release ID: 1921642) Visitor Counter : 91