ಪ್ರಧಾನ ಮಂತ್ರಿಯವರ ಕಛೇರಿ

ರಕ್ಷಣಾ ಸಚಿವಾಲಯವು ಭಾರತೀಯ ಸೇನೆಗೆ ಸುಧಾರಿತ ಆಕಾಶ್ ವೆಪನ್ ಸಿಸ್ಟಮ್ ಹಾಗೂ  12 'ಸ್ವಾತಿ' (ವಿಮಾನಗಳು)  ವೆಪನ್ ಲೊಕೇಟಿಂಗ್ ರಾಡಾರ್‌ಗಳನ್ನು 9,100 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿ ಒಪ್ಪಂದಗಳಿಗೆ ಸಹಿ ಹಾಕಿದೆ


ಇದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು, ಸ್ವಾವಲಂಬನೆ ಸಾಧನೆಗೆ ಸಹಕಾರಿಯಾಗುವ ಜತೆಗೆ ಎಂಎಸ್ಎಂಇ ವಲಯಕ್ಕೆ ನೆರವಾಗಲಿದೆ ಎಂದು ಪ್ರಧಾನ ಮಂತ್ರಿಗಳ ಶ್ಲಾಘನೆ

Posted On: 31 MAR 2023 9:14AM by PIB Bengaluru

ರಕ್ಷಣಾ ಸಚಿವರ ಕಚೇರಿಯು ಮಾರ್ಚ್ 30ರಂದು ಮಹತ್ವದ ಮಾಹಿತಿಯೊಂದನ್ನುಟ್ವೀಟ್ ಮೂಲಕ ಹಂಚಿಕೊಂಡಿದೆ. 

ರಕ್ಷಣಾ ಸಚಿವಾಲಯವು ಭಾರತೀಯ ಸೇನೆಗೆ ಸುಧಾರಿತ ಆಕಾಶ್ ವೆಪನ್ ಸಿಸ್ಟಮ್ ಹಾಗೂ  12  ವೆಪನ್ ಲೊಕೇಟಿಂಗ್ ರಾಡಾರ್‌ಗಳನ್ನುಅಂದರೆ ಡಬ್ಲ್ಯೂಎಲ್ಆರ್ 'ಸ್ವಾತಿ' (ವಿಮಾನಗಳು) 
 9,100 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿ ಒಪ್ಪಂದಗಳಿಗೆ ಸಹಿ ಹಾಕಿದೆ ಎಂದು ಘೋಷಿಸಿದೆ.

ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, 'ಇದೊಂದು ಸ್ವಾಗತಾರ್ಹ ಬೆಳವಣಿಗೆ. ಇದು ಸ್ವಾವಲಂಬನೆಗೆ ಸಹಕಾರಿಯಾಗಲಿದ್ದು, ಮುಖ್ಯವಾಗಿ ಎಂಎಸ್ಎಂಇ ವಲಯಕ್ಕೆ ಹೆಚ್ಚಿನ ನೆರವಾಗಲಿದೆ,' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

****(Release ID: 1914088) Visitor Counter : 78