ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಮನ್ ಕಿ ಬಾತ್ ನ 99 ನೇ ಸಂಚಿಕೆಯಲ್ಲಿ ಮಾಹಿತಿಗಳನ್ನು ಹಂಚಿಕೊಳ್ಳಲು ಮತ್ತು ಸ್ಪೂರ್ತಿದಾಯಕ ಪ್ರಯತ್ನಗಳನ್ನು ಪ್ರಮುಖವಾಗಿ ಎತ್ತಿ ತೋರಿಸಲು ನಾಗರಿಕರಿಗೆ ಪ್ರಧಾನ ಮಂತ್ರಿ ಪ್ರೋತ್ಸಾಹ

प्रविष्टि तिथि: 17 MAR 2023 8:14PM by PIB Bengaluru

ಮನ್ ಕಿ ಬಾತ್ ನ 99ನೇ ಸಂಚಿಕೆಗಾಗಿ ಸಾಮಾಜಿಕ ಬದಲಾವಣೆಗೆ ಕಾರಣವಾಗಿರುವ ಸ್ಪೂರ್ತಿದಾಯಕ ಪ್ರಯತ್ನಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಲು ಅನುಕೂಲವಾಗುವಂತೆ ಮತ್ತು ತಮ್ಮಲ್ಲಿರುವ ಮಾಹಿತಿಗಳನ್ನು ಒದಗಿಸಲು  ಮೈಗೌ ಅಥವಾ ನಮೋ ಆ್ಯಪ್ (MyGov or NaMo App) ನಲ್ಲಿ ಅವುಗಳನ್ನು ಹಂಚಿಕೊಳ್ಳುವಂತೆ ಅಥವಾ 1800-11-7800 ಸಂಖ್ಯೆಗೆ ಕರೆ ಮಾಡುವ ಮೂಲಕ ಸಂದೇಶವನ್ನು ರೆಕಾರ್ಡ್ ಮಾಡಿ ಮಾಹಿತಿಯನ್ನು ದಾಖಲಿಸುವಂತೆ  ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಗರಿಕರನ್ನು ಪ್ರೋತ್ಸಾಹಿಸಿದ್ದಾರೆ. ಈ ಸಂಚಿಕೆ 2023ರ ಮಾರ್ಚ್ 26ರಂದು ಆಯೋಜನೆಯಾಗಿದೆ.

ಈ ಬಗ್ಗೆ ಎಂದು ಪ್ರಧಾನ ಮಂತ್ರಿ ಅವರು  ಟ್ವೀಟ್ ಮಾಡಿದ್ದಾರೆ.

“26ರಂದು #MannKiBaat ನ  99ನೇ ಸಂಚಿಕೆ ಆಯೋಜನೆಯಾಗಿದೆ. ಅನೇಕ ಜನರು ತಮ್ಮಲ್ಲಿರುವ ಮಾಹಿತಿಗಳನ್ನು (ಒಳಹರಿವುಗಳನ್ನು) ಹಂಚಿಕೊಳ್ಳುತ್ತಿದ್ದಾರೆ ಮತ್ತು ಸಾಮಾಜಿಕ ಬದಲಾವಣೆಗಳನ್ನು ತರುತ್ತಿರುವ ಸ್ಪೂರ್ತಿದಾಯಕ ಪ್ರಯತ್ನಗಳನ್ನು ಎತ್ತಿ ತೋರಿಸುತ್ತಿದ್ದಾರೆ. MyGov ಅಥವಾ Namo App ನಲ್ಲಿ ನಿಮ್ಮಲ್ಲಿರುವ ಮಾಹಿತಿಗಳನ್ನು (ಇನ್ ಪುಟ್) ಗಳನ್ನು ಹಂಚಿಕೊಳ್ಳುತ್ತಲೇ ಇರಿ ಅಥವಾ ಸಂದೇಶವನ್ನು ರೆಕಾರ್ಡ್ ಮಾಡಲು 1800-11-7800 ಡಯಲ್ ಮಾಡಿ.” ಎಂದವರು ಹೇಳಿದ್ದಾರೆ.

 

***


(रिलीज़ आईडी: 1908409) आगंतुक पटल : 177
इस विज्ञप्ति को इन भाषाओं में पढ़ें: Bengali , Telugu , Assamese , Tamil , English , Urdu , हिन्दी , Marathi , Manipuri , Punjabi , Gujarati , Odia , Malayalam