ಪ್ರಧಾನ ಮಂತ್ರಿಯವರ ಕಛೇರಿ
ಕೆಲಸದ ಸ್ಥಳದಲ್ಲಿಯೂ ಯೋಗವನ್ನು ಅಭ್ಯಾಸ ಮಾಡುವುದು ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಮಾರ್ಗವಾಗಿದೆ: ಪ್ರಧಾನಮಂತ್ರಿಗಳು
Posted On:
15 MAR 2023 8:43PM by PIB Bengaluru
ಒತ್ತಡದ ಕೆಲಸದ ವೇಳಾಪಟ್ಟಿ ಮತ್ತು ಜಡತ್ವದ ಜೀವನಶೈಲಿಯ ಸವಾಲುಗಳ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೆಲಸದ ಸ್ಥಳದಲ್ಲಿ ವಿರಾಮದ ಸಮಯದಲ್ಲಿ ಯೋಗವನ್ನು ಅಭ್ಯಾಸ ಮಾಡುವಂತೆ ಎಲ್ಲರನ್ನು ಹುರಿದುಂಬಿಸಿದರು.
ಯೋಗದಲ್ಲಿ ಸಾಮೂಹಿಕ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಲು ವಿಶೇಷವಾಗಿ ಕಾರ್ಪೊರೇಟ್ ಕೆಲಸದ ಸ್ಥಳಗಳು ಮತ್ತು ಕಾರ್ಯನಿರತರಿಗೆ ಪ್ರೋತ್ಸಾಹಿಸಲು ಕೇಂದ್ರ ಆಯುಷ್ ಸಚಿವರಾದ ಶ್ರೀ ಸರ್ಬಾನಂದ ಸೋನೊವಾಲ್ ಅವರು ಬಿಡುಗಡೆ ಮಾಡಿದ “ವೈ-ಬ್ರೇಕ್” ಎಂಬ ಯೋಗದ ಒಂದು ನಿಮಿಷದ ವೀಡಿಯೊ ಕುರಿತ ಆಯುಷ್ ಸಚಿವಾಲಯದ ಟ್ವೀಟ್ ಅನ್ನು ಹಂಚಿಕೊಳ್ಳುತ್ತಾ, ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ;
" ಒತ್ತಡದ ಕೆಲಸದ ವೇಳಾಪಟ್ಟಿ ಮತ್ತು ಜಡತ್ವದ ಜೀವನಶೈಲಿಯು ತಮ್ಮದೇ ಆದ ಸವಾಲುಗಳನ್ನು ಹೊತ್ತು ತರುತ್ತವೆ. ಕೆಲಸದ ಸ್ಥಳದಲ್ಲಿಯೂ ಯೋಗವನ್ನು ಅಭ್ಯಾಸ ಮಾಡುವುದು ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಮಾರ್ಗವಾಗಿದೆ.”
*****
(Release ID: 1907593)
Visitor Counter : 171
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam