ಪ್ರಧಾನ ಮಂತ್ರಿಯವರ ಕಛೇರಿ

ಆಸ್ಟ್ರೇಲಿಯಾದ ವ್ಯಾಪಾರ ಮತ್ತು ಪ್ರವಾಸೋದ್ಯಮ ಸಚಿವ ಡಾನ್ ಫರೆಲ್ ಹಂಚಿಕೊಂಡ ಐತಿಹ್ಯವನ್ನು ಟ್ವೀಟ್ ಮಾಡಿದ ಪ್ರಧಾನಮಂತ್ರಿ

Posted On: 12 MAR 2023 3:10PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಶ್ರೀಮಂತ ಸಾಂಸ್ಕೃತಿಕ ಸಂಪರ್ಕದ ಎಳೆಯ ಕುರಿತು ಟ್ವೀಟ್ ಮಾಡಿದ್ದಾರೆ.

ಭಾರತ ಪ್ರವಾಸದಲ್ಲಿದ್ದ ಆಸ್ಟ್ರೇಲಿಯಾ ಪ್ರಧಾನಿ ಗೌರವಾರ್ಥ ಆಯೋಜಿಸಿದ್ದ ಔತಣದ ವೇಳೆಯ ಐತಿಹ್ಯವನ್ನು ಆಸ್ಟ್ರೇಲಿಯಾದ ವ್ಯಾಪಾರ ಮತ್ತು ಪ್ರವಾಸೋದ್ಯಮ ಸಚಿವ ಡಾನ್ ಫರೆಲ್ ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿ ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.

“ನನ್ನ ಮಿತ್ರ PM @AlboMP ಅವರ ಗೌರವಾರ್ಥ ಔತಣಕೂಟ ಆಯೋಜಿಸಿದ್ದ ವೇಳೆ, ಆಸ್ಟ್ರೇಲಿಯಾದ ವ್ಯಾಪಾರ ಮತ್ತು ಪ್ರವಾಸೋದ್ಯಮ ಸಚಿವ ಡಾನ್ ಫರೆಲ್ ಆಸಕ್ತಿದಾಯಕ ಅಂಶವನ್ನು ಹಂಚಿಕೊಂಡಿದ್ದಾರೆ, ಅವರಿಗೆ ಒಂದನೇ ತರಗತಿಯಲ್ಲಿ ಶ್ರೀಮತಿ ಎಬರ್ಟ್ ಅವರು ಕಲಿಸಿದ್ದರು, ಅವರು ಫರೆಲ್ ಜೀವನದ ಮೇಲೆ ಗಾಢ ಪರಿಣಾಮವನ್ನು ಬೀರಿದ್ದಾರೆ  ಮತ್ತು ಪ್ರಾಥಮಿಕ ಶಿಕ್ಷಣಕ್ಕೆ ಮನ್ನಣೆ ನೀಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶ್ರೀಮತಿ ಎಬರ್ಟ್, ಅವರ ಪತಿ ಹಾಗೂ ಅವರ ಪುತ್ರಿ ಲಿಯೋನಿ 1950ರ ದಶಕದಲ್ಲಿ ಭಾರತದ ಗೋವಾದಿಂದ ಅಡಿಲೇಡ್ ಗೆ ವಲಸೆ ಬಂದರು ಮತ್ತು ಆಸ್ಟ್ರೇಲಿಯಾದ ಅಡಿಲೇಡ್ ನ ಶಾಲೆಯಲ್ಲಿ ಬೋಧನೆ ಆರಂಭಿಸಿದರು. ಅವರ ಪುತ್ರಿ ಲಿಯೋನಿ, ಸೌತ್ ಆಸ್ಟ್ರೇಲಿಯನ್ ಇನ್ಸಟಿಟ್ಯೂಟ್ ಆಫ್ ಟೀಚರ್ಸ್ ನ ಅಧ್ಯಕ್ಷ ಸ್ಥಾನದವರೆಗೆ ಏರಿದರು. 

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಶ್ರೀಮಂತ ಸಾಂಸ್ಕೃತಿಕ ಬೆಸುಗೆಯನ್ನು ಒತ್ತಿ ಹೇಳುವ ಈ ಐತಿಹ್ಯ ಅಥವಾ ದಂತಕತೆಯನ್ನು ಕೇಳಿ ನನಗೆ ಸಂತಸವಾಯಿತು, ಅಲ್ಲದೆ, ಯಾರಾದರೂ ಆತ ಅಥವಾ ಆಕೆಯ ಶಿಕ್ಷಕರ ಬಗ್ಗೆ ಪ್ರೀತಿಯಿಂದ ಉಲ್ಲೇಖಿಸಿದಾಗ ಕೇಳಲು ಅಷ್ಟೇ ಹೃದಯಸ್ಪರ್ಶಿಯಾಗಿರುತ್ತದೆ’’   

***



(Release ID: 1906154) Visitor Counter : 109